ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)
4. ತುಂಬಿದ ಕೊಡ ತುಳುಕುವುದಿಲ್ಲ ( Tumbida koda tulukuvudilla )
ತುಂಬಿದ ಕೊಡ ತುಳುಕುವುದಿಲ್ಲ. ತುಂಬಿದ ಕೊಡ ಸಾಮಾನ್ಯವಾಗಿ ತುಳುಕುವುದಿಲ್ಲ. ಅದೇ ಅರ್ಧಮರ್ದ ಇರುವಾಗ, ನಾವು ಸಹಜವಾಗಿ, ಎತ್ತಿದರೆ ನೀರು ಮೇಲೆ ಚಿಮ್ಮಿ ಹೊರಗೆ ಚೆಲ್ಲುತ್ತದೆ.
ಈ ಗಾದೆಯನ್ನು ಜ್ಞಾನಿಗೂ, ಅರ್ಧಮರ್ದ ತಿಳಿದವನಿಗೂ ಇರುವ ವ್ಯತ್ಯಾಸವನ್ನು ತಿಳಿಸಲು ಬಳಸುತ್ತಾರೆ. ನಿಜವಾದ ಜ್ಞಾನಿಯಾದವನು ತನ್ನ ಜ್ಞಾನ, ಹೆಸರು, ಗೌರವವನ್ನು ತಾನೇ ಪ್ರಚಾರ ಮಾಡಿಕೊಳ್ಳಲು ಹೋಗುವುದಿಲ್ಲ. ಆದರೆ ಅರೆಬರೆ ಕಲಿತ ವ್ಯಕ್ತಿಗಳು, ತಮ್ಮನ್ನು ಮಹಾಜ್ಞಾನಿಗಳು, ತಾನೇ ಸರ್ವ ಶ್ರೇಷ್ಠ ಎಂಬಂತೆ ವರ್ತಿಸುತ್ತಾರೆ. ಅಲ್ಪ ವಿದ್ಯೆ ಇರುವವರು ಅರ್ಧತುಂಬಿದ ಕೊಡದ ಹಾಗೆ. ಪ್ರಚಾರ ಪ್ರಿಯರು ಆಗಿರುತ್ತಾರೆ.
ಆದರೆ ಜ್ಞಾನಿಗಳು ಪ್ರಚಾರಪ್ರಿಯರಾಗಿರುವುದಿಲ್ಲ. ಸಂಯಮ ಉಳ್ಳವರಾಗಿರುತ್ತಾರೆ. ಆದರ್ಶಪ್ರಾಯರಾಗಿರುತ್ತಾರೆ. ಯಾವುದೇ ವಿಷಯದಲ್ಲಿ ಪೂರ್ಣ ಜ್ಞಾನ ಪಡೆಯಲು ಪ್ರಯತ್ನಿಸಬೇಕು.
ಇದು “ತುಂಬಿದ ಕೊಡ ತುಳುಕುವುದಿಲ್ಲ” ಎಂಬ ಗಾದೆಯ ಅರ್ಥ.