ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)
6. ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ (Kappe takkadili hakida hage)
ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ. ಕಪ್ಪೆಗಳನ್ನು ತಕ್ಕಡಿಯಲ್ಲಿ ಹಾಕಿ ತೂಕ ಎಷ್ಟೆಂದು ನೋಡಲಿಕ್ಕೆ ಸಾಧ್ಯವೇ?
ಇಲ್ಲ! ಏಕೆಂದರೆ, ಕೆಲವು ಕಪ್ಪೆಯು ತಕ್ಕಡಿಯಲ್ಲಿ ಹಾಕುತಿದ್ದಂತೆ, ಅದು ಎಗರಿ ಎಗರಿ ಹೊರಗೆ ಬರುವುದು. ಅದು ಅದರ ಸ್ವಭಾವ. ಅದೇ ರೀತಿ ಕೆಲವು ಜನರನ್ನು ಯಾವುದಾದರೂ ಒಂದು ಕಾರ್ಯಕ್ಕಾಗಿ ಒಟ್ಟುಗೂಡಿಸಲು ಬಂದಾಗ, ಒಬ್ಬರು ಬಂದರೆ ಒಬ್ಬರು ಬರುವುದಿಲ್ಲ.
ಇಂತಹ ಸಂದರ್ಭದಲ್ಲಿ ಈ ಗಾದೆ ಬಳಕೆಗೆ ಬಂದಿದೆ. ಇದು “ಕಪ್ಪೆ ತಕ್ಕಡಿಯಲ್ಲಿ ಹಾಕಿದ ಹಾಗೆ” ಎಂಬ ಗಾದೆಯ ಅರ್ಥ.