ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೪ (301 to 400)
Kannada Riddles Questions & Answers List Part-4 (301 to 400)
Kannada Ogatugalu with Answer:
Click on each Riddle to View Answer
301. ಒಂದುಗೆ ಹುಟ್ಟಿ ಮೋಟು ಗೋಡೆ ದಾಟಿದ
Answer : ಉಂಡು ಬಿಸಾಡಿದ ಊಟದ ಎಲೆ !
302. ಕರಿ ಹೊಲ್ದಾಗ ಕಾಲ್ಹಾದಿ ಬಿಧೈತಿ
Answer : ಬೈತಲ !
303. ಅಪ್ಪಾ ಉದ್ದಣಾ ಅವ್ವೆ ಸಿಂಗರ್ಸೋಳೆ
ಮಗಾ ಗುಡ್ಗುಡ್ಕೆಂಪಣ್ಣಾ
Answer : ಅಡ್ಕಿ ಮರಾ !
304. ಈಟ ಕುಡಿಕ್ಯಾಗ ಇಟ್ಟಪ್ಪ ಕುಂತಾನ
Answer : ಸುಲಗಾಯಿ !
305. ಕಾವಿ ಕಮಂಡಲ ಧರಿಸಿದೊರ್ಯಾರು
ಮೂರು ತಿಂಗಳು ಭೂಮೀಲಿದ್ದೋರ್ಯಾರು
ಕೆಂಡಗಣ್ಣಿನಂತಹ
ಲಿಂಗಾ ದೇವರಂತೆ
ನೆಲಮಾಳಿಗೆಯೊಳಗೆ
ಮೂರು ತಿಂಗಳು ಇದ್ದರಂತೆ
ಗುದ್ದಲಿ ಗುರುಶಾಂತಪ್ನೋರು
ಬಂದು ಅಬ್ಬರಿಸಿದಾಗ
ಹರ’ ‘ಹರ’ ನರಮುಟ್ಟಿತೆಂದು
ಎಬ್ಬರಿಸಿದರು
Answer : ಈರುಳ್ಳಿ !
Click on each Riddle to View Answer
306. ತಗದ ಒಗದ
Answer : ಗೊಣ್ಣೆ !
307. ಚಿಕ್ಕ ಚೌಕ ಬಾವಿ ಕುಡಿಯಾಕ ನೀರಿಲ್ಲ
Answer : ಲವಂಗ !
308. ನಿಮ್ಮ ಕೊಟ್ಟಾರಕ್ಕೆ ಬಂದು
ನನ್ನ ಕಠಾರಿ ಮುರಿದ್ಹೋಯ್ತು
ಎಷ್ಟು ಬೆಸಕೆ ಹಾಕಿದರೂ ಸೇರೊಲ್ಲ
Answer : ಉಗುರು !
309. ನೀರಲ್ಲಿ ಹುಟ್ಟಿ
ನೀರಲ್ಲಿ ಬೆಳೆದು
ನೀರು ಸೋಕಿದರೆ
ನಾ ಉಳಿಯಲಾರೆ
Answer : ಉಪ್ಪು !
310. ಅಡಿ ಕಂಬ, ನಡು ಮಡಕೆ, ಕಡೆ ಕುಡಿಕೆ, ಮೇಲೆ ಹುಲ್ಲು
Answer : ದೇಹ !
Click on each Riddle to View Answer
311. ಹಿಡಿದರೆ ಮುದ್ದೆಯಾಗುವುದು
ಬಿಟ್ಟರೆ ನೂರಡಿಯಾಗುವುದು
ಪಾತಾಳಕ್ಕೆ ಹೋಗುವುದು
ಪಕ್ಷಿಯನು ತರುವುದು
ತಾನೂ ತಿನ್ನದೆ ಪರರಿಗೆ ಕೊಡುವುದು
Answer : ಮೀನಿನ ಬಲೆ !
312. ಹಚ್ಚಿದ ಕುಳ್ಳ ಕಿತ್ತೋದಿಲ್ಲ
Answer : ಹಣಚಿಬಟ್ಟ !
313. ಅಂಕುಬಂಕಾದ ಆಲದ ಮರ
ಅದರ ಮ್ಯಾಲ ಕಂಚಿನ ಫಲ
ಅದರ ಮ್ಯಾಲ ಮಲ್ಲಿಗಿ ರಾಸಿ
Answer : ಆಢಣಗಿ, ತಳಿಗಿ, ಅನ್ನ !
314. ತುಂಬ ಇಲ್ಲದ ನಿಂಬಿಕಾಯಿ
Answer : ತತ್ತಿ !
315. ಸಂಜಿ ಆಯಿತು ಹೆಣ್ಣು ಬಂಜಿಯಾಯಿತು
ಕತ್ತಲಾಯಿತು ಹೆಣ್ಣು ಬತ್ತಲಾಯಿತು
ಬೆಳಗಾಯಿತು ಹೆಣ್ಣು ಒಳಗಾಯಿತು
Answer : ಬಾಗಿಲು !
Click on each Riddle to View Answer
316. ತಂಡಿಲ್ದ ಕಾಸ್ತಾನ
Answer : ಕಂಬಾರ !
317. ಹಾಕಿದ ಬಾಗಿಲು ತೆಗೆಯೋದಿಲ್ಲ
Answer : ಸಮಾಧಿ !
318. ಕೂತೂರಕ್ಕನ ಕುಂಡೆ ಮೇಲೆ ಬಸಿರು
ನಿಂತೂರಕ್ಕನ ನೆತ್ತಿ ಮೇಲೆ ಬಸಿರು
ಮಾಳೂರಕ್ಕನ ಮಂಡೆ ಮೇಲೆ ಬಸಿರು
Answer : ಏಲಕ್ಕಿ, ಬಾಳೆಗೊನೆ, ಅಡಿಕೆಕಾಯಿ !
319. ಕಲ್ಲು ಕೊಟಾರ
ಕಬ್ಬಿಣದ ಮೇಟ
ಒಕ್ಕೋರುಂಟು
ತೂರೋರು ಇಲ್ಲ
Answer : ಕುರಿಬಂಡ !
320. ಇಕ್ಕುವಾಗ ಐದು ಸಿಕ್ಕಿದರೆ ಹದಿನೈದು ಸಿಕ್ಕದಿದ್ದರೆ ಐದೆ
Answer : ಬೆರಳು, ಏಡಿ !
Click on each Riddle to View Answer
321. ಕರೀ ಸೀರಿ ಉಟ್ಟಾಳ
ಕಾಲುಂಗುರ ಇಟ್ಟಾಳ
ಮ್ಯಾಲಕ ಹೋಗತಾಳ
ಕೆಳಗೆ ಬರತಾಳ
Answer : ಒನಿಕೆ !
322. ಒಂದ್ಹಣ ಕೊಟ್ಟು ನೋಡಿಸ್ತಿ
ಎರಡ್ಹಣ ಕೊಟ್ಟು ತರಿಸ್ತಿ
ಮರ್ಹಣ ಕೊಟ್ಟು ತರಿಸ್ತಿ
ಕತ್ತಿನ ಮೇಲಿನ ಗಂಡ
ತೊಡೆ ಮೇಗಲ ಮಿಂಡ
Answer : ತಾಲಿ !
323. ಚಿಕ್ ಚಿಕ್ ತಾಯಿ
ಬಂಗಾರದ ಕಾಯಿ
ಲೋಕಕ್ಕೆಲ್ಲಾ ಎರಡೇ ಕಾಯಿ
Answer : ಚಂದ್ರ, ಸೂರ್ಯ !
324. ಭಟ್ಟ ಸುಟ್ಟರೂ ಭಟ್ಟನ ಜನಿವಾರ ಸುಡೋದಿಲ್ಲ
Answer : ಹಂದಿ !
325. ಅಕ್ಕರಿಗೆ ಆರು ಕಣ್ಣು
ಮುಕ್ಕರಿಗೆ ಮೂರು ಕಣ್ಣು
ತೋಟದ ಅಜ್ಜನಿಗೆ ಒಂದೇ ಕಣ್ಣು
Answer : ಕೊಳಲು, ತೆಂಗು, ಅಡಿಕೆ !
Click on each Riddle to View Answer
326. ಕರಿ ಎತ್ತ ಕೈ ಹಚ್ಚಗೊಡುವದಿಲ್ಲ
Answer : ಕಾದ ಹಂಚು !
327. ರುಬ್ಬುದೋಣಿ ಹಬ್ಬಕೆ ಬಂದು
ದೇವರ ಕೋಣೆಗೆ ತೆವೀತಾ ಹೋಗಿ ಉಚ್ಚೆ ಹೂದ್ಲು
Answer : ತೆಂಗಿನಕಾಯಿ !
328. ಸರಕಾರ ಕಟ್ಟಿಮ್ಯಾಲ
ಹೆಬ್ಬಾಂವ ಬಿದ್ದೈತಿ
ಹಿಡದ ಕೊಟ್ಟಾವರ್ಗೆ ಹಿಡಿಹೊನ್ನ
Answer : ಬಿಸಲ !
329. ವಟ್ಟಟ್ಟಿ ಗಿಡಕ ಚೀಟಿ ಕಟ್ಟಿ
ಆಳಗಳ್ಳ ಹರಕೊಂಡ ಹೋಗ್ಯಾನ
Answer : ಜೇನು !
330. ಇಡದ್ರೆ ಒಂದು ಹಿಡಿ
ಬುಟ್ರೆ ಒಂದು ತಬ್ಬು
Answer : ಒನಕೆ !
Click on each Riddle to View Answer
331. ಗುಂಡ ಮಾರಿ ಗುರಿಸಿದ್ದ
ಹಿಂದಕ್ಕೊಮ್ಮೆ ಕರಸಿದ್ದ
ಆಂಡಮಟಾ ಸಿಗಸಿದ್ದ
Answer : ನೆಗ್ಗಲ ಮುಳ್ಳು !
332. ಅಂಗಡಿಯಿಂದ ತರೋದು
ಮುಂದಿಟ್ಕೊಂಡು ಅಳೋದು
Answer : ಈರುಳ್ಳಿ !
333. ಬೆಳಗಾಗಲಿ ಬೆಳಗಾಗಲಿ ಎನ್ನುತ್ತದೆ ಒಂದು, ಬೆಳಗಾಗದಿರಲಿ ಬೆಳಗಾಗದಿರಲಿ ಎನ್ನುತ್ತದೆ ಇನ್ನೊಂದು, ಬೆಳಗಾದರೇನು ಬೆಳಗಾಗದಿದ್ದರೇನು? ಎನ್ನುತ್ತದೆ ಮತ್ತೊಂದು
Answer : ಹಾಸಿಗೆ, ಒಲೆ , ನೆಲ !
334. ಗಟ್ಟಿದ್ಮೆಗಣ್ಣ ಬಟ್ಟಂಗೆ (ರ್ಗ ಮಗ್ಳೀಗೆ) ರ್ಯಕ್ಕೊಂದಡ್ಗೆರೆ
Answer : ಹುಲ್ಮನೆ !
335. ಹಗೆದಾಗ ಹಾಂವ ಕೂಗ್ಯಾಡ್ತತಿ
Answer : ಕಡಗೋಲ !
Click on each Riddle to View Answer
336. ಈಟ ಪಾರ ಕರಿಟೋಪಿ ಹಾಕೇತಿ
Answer : ದೀಪದ ಕಡ್ಡಿ !
337. ಅಪ್ಪ ಅಂದ್ರ ಕೂಡತಾವು
ಅವ್ವ ಅಂದ್ರ ಕೂಡೂದಿಲ್ಲ
Answer : ತುಟಿಗಳು !
338. ನೆಟ್ಟಂದೋಳಿಗೆ ನೆರಳೇ ಇಲ್ಲ
Answer : ದಾರಿ !
339. ಹಾದಿಗೆ ಹೋಗಪ್ಪ
ಹಾಂವ ಹೊಡೆಪ್ಪ
ತುಂಬ ಉಚ್ಚಪ್ಪ
ಬಾಯಾಗ ಇಡಪ್ಪ
Answer : ಪುಟ್ಟಿಕಾಯಿ !
340. ಚಿಕ್ಕ ಗೋಡೆಯ ಮೇಲೆ ಚಿನ್ನದ ದೀಪ
Answer : ಮೂಗುತಿ !
Click on each Riddle to View Answer
341. ಗಿಡಮರಕ್ಕೆ ಗೆಜ್ಜೆಕಟ್ಟಿದೆ
Answer : ನೆಲಗಡಲೆ !
342. ಹಸು ಮಲಗಿದೆ ಕರು ಮೆಯ್ತದೆ
Answer : ಕುಂಬಳ ಬಳ್ಳಿ !
343. ಹಚ್ಚನ ಗಿಡದಾಗ ಹನುಮಂತ ಕೂತಾನ
Answer : ಬದ್ನಿಕಾಯಿ !
344. ಸಾಯೋವರೆಗೂ ಹೂವಿಲ್ಲ , ಹಣ್ಣು ಮಾತ್ರ ಬಿಡ್ತದೆ
Answer : ಹತ್ತಿಹಣ್ಣು !
345. ಆನೆ ಹೊಟ್ಟೇಲಿ ಅರವತ್ತು ರೊಟ್ಟಿ
Answer : ಅಡಿಕೆ !
Click on each Riddle to View Answer
346. ತುಂಬಿದ ಕೆರೇಲಿ
ದೊಂಬರು ಕುಣೀತಾರೆ
Answer : ಮಂತು !
347. ಅಂತಪ್ಪನ ಮಗಳು
ಅಂತರಲೆ ಉಚ್ಚಿ ಹೊಯ್ತಾಳ
Answer : ಮಳೆ !
348. ಹೊರಗೆ ಕಂಚಿನ ಕ್ವಾಟಿ
ಒಳಗೆ ಬೆಳ್ಳಿ ಕ್ವಾಟಿ
ನೀರುಂಟು ಅದರಲ್ಲಿ
ಮೀನಿಲ್ಲ ಮೊಸಳಿಲ್ಲ
Answer : ಟೆಂಗಿನಕಾಯಿ !
349. ಹಸರ ಹಾಂವ
ಹರಹರದ
ತತ್ತಿ ಇಡತತಿ
Answer : ತೊಂಡಿ ಬಳ್ಳಿ !
350. ಆಯಿದಾಗ ಆಯಿ
ಯಾವ ಆಯಿ
Answer : ಕುಲಾಯಿ !
Click on each Riddle to View Answer
351. ಭತ್ತಕ್ಕ ಬಿರಿಯ
Answer : ಮಿಣಿಕೆಹಣ್ಣು !
352. ಕಳ್ಳದನ ಹುಲ್ಲ ಕೊಟ್ರ
ಹಾಲ ಕೊಡುದುಲ್ಲ
ಕಲ್ಲಲೆ ಕುಟ್ಟಿದರ ಹಾಲ ಸುರಸ್ತದ
Answer : ಕಳ್ಳಿ !
353. ಅಪ್ಪ ಹಲ್ಗಿಂಚ
ಅವ್ವ ತಲೆಗೆದರಿ
ಮಗಳು ಮಾಸುಂದರಿ
Answer : ಹಲಸಿನ ಹಣ್ಣು !
354. ಅತ್ತಕಡೆ ಇತ್ತಕಡೆ ಎರಡಾಲದಮರ
ಆಲದಮರದ್ಮೇಲೆ ಒಂದಂಬ್ಲಿಗಡ್ಗೆ
ಅಂಬಲಿಗಡಗೆ ಮೇಲೆ ಪಿಟಾರಿಚೆಂಬು
ಪಿಟಾರಿಚೆಂಬಿನ ಮೇಲೆ ಗರ್ಕೆಹುಲ್ಲು
ಗರ್ಕೆಹುಲ್ಲ ಕುರಿಮೇಯ್ತವೆ
Answer : ತೆಂಗಿನಕಾಯಿ !
355. ಬೆಟ್ಟದ ಸುತ್ತ ಬೆಳ್ಳೀ ಕಟ್ಟೆ
Answer : ವಿಭೂತಿ !
Click on each Riddle to View Answer
356. ಅಗಲಸ್ಕಂಡಿದಿದ್ದೆ
ತಗಲ್ಸಿಯೆಟ್ಟಿ ಕೆಂಪಾಯ್ತು
ಬೆಳ್ಳಗೆ ಬೀಳ್ತು
Answer : ಬೂದಿ !
357. ಮಳಿ ಇಲ್ಲ ಮಾರ ಇಲ್ಲ ಗುಡ್ಡ ಹಚ್ಚಗ
ಸುಣ್ಣ ಇಲ್ಲ ಕಾಚ ಇಲ್ಲ ಬಾಯಿ ಕೆಂಪಗ
Answer : ಗಿಳಿ !
358. ಅಕ್ಕ ಅಕ್ಕ ಏರಿ ನೋಡು
ಏರಿ ಹಿಂದಲ ಗಾರೆ ನೋಡು
ಅಗಸ ಇಲ್ದೆ ಮಡಿ ಆಗೋದ್ ನೋಡು
Answer : ತೆಂಗಿನಕಾಯಿ !
359. ಉದ್ದುದ್ದವನೆ ಉರಿಮುಖದವನೆ
ಸುದ್ದಿ ಹೇಳೊ ಸೂಳೆಮಗನೆ
Answer : ಮೆಣಸಿನಕಾಯಿ !
360. ಕೆಂದೆತ್ತಿಗೆ ಹದಿನಾರು ಗ್ವಾಮಾಳೆ
Answer : ಹುತ್ತ !
Click on each Riddle to View Answer
361. ಅಲ್ಲಕ್ಕ ಮಲ್ಲಕ್ಕ ಜಗಳಕ್ಕ ಗಂಟು ಬಿದ್ದರು
ಕುಳ್ಳಕ್ಕ ಬಂದು ಬಿಡಿಸಿದ್ಲು
Answer : ಚಿಲಕ, ಬೀಗ ಮತ್ತು ಎಸಲು !
362. ಅಕ್ಷರಗಳಿದ್ದರೂ ಪುಸ್ತಕವಲ್ಲ,
ಸಿಂಹವಿದ್ದರೂ ಅರಣ್ಯವಲ್ಲ,
ದುಂಡಗಿದ್ದರೂ ಚಕ್ರವಲ್ಲ,
ನಾನಾರು ?
Answer : ನಾಣ್ಯ !
363. ಗಿಡ ನೋಡಿದ್ರೆ ನೂರಾರು ರೆಕ್ಕೆ
ಎಲೆ ನೋಡಿದ್ರೆ ಒಂದು ಭತ್ತದ ಉದ್ದ ಭತ್ತದ ಗಾತ್ರ
ಗಿಡದ ತುಂಬ ಬರೀ ಕಾಯಿಯ
ಎಡದು ಕಡಿದ್ರೂ ಬೇಳೆ
ಬಡದ್ರೂ ಬೇಳೆ
Answer : ಕಡ್ಲೆಕಾಳು !
364. ಅಡವಿಯಲ್ಲಿ ಹುಟ್ಟಿಹುದು
ಗಿಡಮರನೂ ಆಗಿಹುದು
ಕಡಿದರೆ ಕಂಪು ಕೊಡುತಿಹುದು
Answer : ಗಂಧದ ಮರ !
365. ಕಟಕಟ ಕಿಟಿಕಿಟಿ ಜಾನಕಿ ಜಾಂಬವತಿ
ನಾನು ಕಟ್ಟಿದ ಮನೆಗೆ ಕಂಬವೇ ಇಲ್ಲ
Answer : ಇಲಿ ಬಿಲ !
Click on each Riddle to View Answer
366. ಸತ್ಮೊಲ ತರಬ್ಯಾಡ
ಜೀವದ ಮೊಲ ಹೊಡೀಬ್ಯಾಡ
ಬಾಡಿಲ್ಲದೆ ಮನೆಗೆ ಬರಬ್ಯಾಡ
ನಿಂತಿದ್ದ ನೀರ ಸೇದಬ್ಯಾಡ
ಹರಿಯೋ ನೀರ ಮೊಗೀಬ್ಯಾಡ
ನೀರಿಲ್ಲದೆ ಮನೆಗೆ ಬರಬ್ಯಾಡ
Answer : ಮೀನು, ಎಳನೀರು !
367. ಈಟೀಟ ಬಂಟ ಕುಡಗೋಲ ತಗೊಂಡ ಹೊಂಟ
Answer : ಚೇಳು !
368. ಊರುಂಟು ಜನರಿಲ್ಲ ! ನದಿಯುಂಟು ನೀರಿಲ್ಲ ! ರಸ್ತೆಯುಂಟು ವಾಹನವಿಲ್ಲ ! ಹಾಗಾದರೆ ನಾನ್ಯಾರು ?
Answer : ಭೂಪಟ !
369. ಗುಡು ಗುಡನೆ ಬಂದು
ಗೂಡು ತುಂಬ ಮೊಟ್ಟೆಯಿಕ್ಕ್ತು
Answer : ಬೆಂಕಿ !
370. ಹಳ್ಳಿಯಾ ಗಡಿಯಾರ
ಒಳ್ಳೆಯಾ ಆಹಾರ
ಮಲ್ಲಯುದ್ದರ ಜಾತ್ರೆ
ರುದ್ರ ಗಂಭೀರ
Answer : ಹುಂಜ !
Click on each Riddle to View Answer
371. ಅಕ್ಕ ಅಕ್ಕ ತಂಗೇರು
ನಾವೆರಡು ಕುಲದವರು
ಆಡುವ ಮಕ್ಕಳ ನೆರುವರಿಗೆ ಕೊಟ್ಟು
ಬರೀ ತೊಟ್ಟಿಲ ತೂಗುವರು
Answer : ಕುರುಂಬಳೆ (ತೆಂಗಿನಕಾಯಿ ಗೊನೆ) !
372. ಅಂಗೈ ಅರೆ ಕೋಣೇಲಿ ಐದು ಜನ ಆಟ ಆಡ್ತಾರೆ
Answer : ಹಸ್ತ !
373. ಚರಚರ ಕೊಯ್ತತಿ ಕತ್ತಿ ಅಲ್ಲ
ಮಿಣಿ ಮಿಣಿ ಮಿಂಚತತಿ ಮಿಂಚಲ್ಲ
ಪಟಿಗ್ಯಾಗ ತುಂಬತತಿ ದಾಗಿನ ಅಲ್ಲ
Answer : ಗರಗಸ !
374. ಈಟಿ ಗುಡಿ ಗುಡಿ ತುಂಬ ಚಕ್ಕಿ
Answer : ಬಾಯಿ-ಹಲ್ಲು !
375. ಒಂದು ಬಿದಿರು ಒಡೆದು ಒಂಬತ್ತು ಮನೆ ಕಟ್ಟಿ
ಚಾಟಿ ಕಟ್ಟಿ ಚದುರಂಗ ಕಟ್ಟಿ
ನೋಡೋಕೆ ಬಂದು ನೇತ್ಹಾಕಿಕೊಂಡ್ರು
Answer : ಕೀಚುಬಾಲದ ಹಕ್ಕಿ (ಕೂಳಿ) !
Click on each Riddle to View Answer
376. ಅಂಬಾರು ಅಂಬಾರು ಹಾರುತ್ತೆ
ನೀರು ನೀರು ಕಾರುತ್ತೆ
Answer : ಏತ !
377. ಹಿಟ್ಟಿನ ಮುದ್ದೆಯ್ಹಂಗೆ ಕಾಯಿ
ಬಿತ್ತ ನೋಡಿದ್ರೆ ಮೆಣಸಿನ ಗಾತ್ರ
Answer : ಟೊಮೆಟೊ !
378. ಕರಿ ಮಂಚದ ಮೇಲೆ
ಹಾಕುವ ಹಾಸಿಗೆ
ತೆಗೆಯುವ ಹಾಸಿಗೆ
Answer : ಕಾವಲಿ, ದೋಸೆ !
379. ಒಬ್ಬೊಬ್ಬರ ಮನೆಗೂ ಊಟಕ್ಕೆ ಹೋಗ್ತಾಳೆ
Answer : ಪಡುವಲಕಾಯಿ !
380. ಅವ್ವನ ಮುಂದ ದೆವ್ವ ಕುಂತೈತಿ
Answer : ಕಡೆಗೋಲು !
Click on each Riddle to View Answer
381. ಕೆನ್ನೆ ಹೆಣ್ಣು ಕೈದಾರ
Answer : ಪೊರಕೆ !
382. ನಿನಗೆ ಗಟ್ಟಿ ನಿನ್ನ ಹೆಂಡತಿಗೆ ಪೊಳ್ಳು
Answer : ಮುರಿ-ಕಡಗ !
383. ಒಬ್ಬ ಬ್ರಾಹ್ಮಣ ಕಾಸಿಗಿ ಹೊಂಟಿದ್ದಾ
ನೀರ ಕಂಡ್ರ ಜೀವಾ ಬಿಡತಿದ್ದಾ
Answer : ಕಾಗದ !
384. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು
Answer : ನಾಣ್ಯ !
385. ಅಗಟಗಟ ಪಕ್ಷಿ
ಮಗಟ ಮದರಿಸಿ
ಕರಿಬೇವು ಹಾಕಿ ಬೆರಸಿ ಎಂದರೆ
ಅದು ಬಹುರುಚಿ
Answer : ಹುಳಿಯನ್ನ !
Click on each Riddle to View Answer
386. ಮೂಲೇಲಿ ಮುದುಕಿ ಕುಯ್ತಾರೆ
Answer : ಹಲಸಿನ ಹಣ್ಣು !
387. ಯಾವುಗ ನೆರಳಿದ್ರೂ
ಅವಗ ಮಾತ್ರ ನೆರಳ ಇಲ್ಲ
Answer : ಸೂರ್ಯ !
388. ಅವ್ವ ನೆರೆದು ಹಿತ್ತಲಿಗೆ ಹೋಗ್ತಾಳೆ
ಮಗಳು ನೆರೆದು ಮನೆಗೆ ಬರ್ತಾಳೆ
Answer : ಭತ್ತ, ರಾಗಿ !
389. ಸಾಸಿವ ಕಾಳಿಗಿಂತ ಸಣ್ಣಾ
ಶಿವನೇರಿಗೆ ಹೋಗವ ಬಣ್ಣಾ ಅರ್ತಾ
ಬಿಡಿಸ್ದವ್ರೀಗೆ ಅರ್ದಾರಾಜ್ಯಾ
Answer : ತುಳ್ಸಿಬೀಜಾ !
390. ಅಡಿಗಡಿಗಂಗಡಿ ಬಿದ್ದರೆ ಚಾವಡಿ
ನಡಗುತ ಬಂದ ಗಡ್ಡದ ಸಾಬಿ
Answer : ಸೈಕಲ್ !
Click on each Riddle to View Answer
391. ಊರೂರೆಲ್ಲಾ ರ್ತಾ ಬಿದ್ದಲ್ಲೇ ಬೀಳ್ತಾ ಪೆದ್ಬೇತಾಳಾ
Answer : ದಾರಿ !
392. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು
Answer : ಸೂಜಿನೂಲು !
393. ಮನೆ ಮನೆಗೆಲ್ಲ ಹೆಬ್ಬಾವು
Answer : ಒನಕೆ !
394. ಎಳ್ಳು ಕಾಳಿನಷ್ಟು ಎಲಿ ಸಣ್ಣ
ಅದರ ಹೂವಿನ್ಯಾಗ್ ಮೂರು ಬಣ್ಣ
ಇದ ಒಡಚಿದವನು ನಮ್ಮಣ್ಣ
Answer : ಒಡವಿನ ಗಿಡ !
395. ಇಜ್ಯಾಪುರ ಗುಡ್ಡದಮ್ಯಾಲ
ಇಪ್ಪತ್ತಚೀಲಾ ನವಣಿ
ನಿಮ್ಮಪ್ಪನ ಅಪ್ಪ ಬಂದರೂ
ಲೆಕ್ಕ ಹತ್ತಲ್ಲ
Answer : ಕೂದಲ !
Click on each Riddle to View Answer
396. ಅಟ್ಟಂ ಬಟಂ ರ್ಯಾಣನಾದಾಗ ಸೆಟ್ಟಿ ಅಂಗಡಿ ಇಟ್ಟಾನ
Answer : ಜೇನು !
397. ಊರ ಸುತ್ತ ಹುವ್ವ ಕುಯ್ಕೊಂಡು ಬಂದ್ರು ಹಿಡಿಗಿಲ್ಲ
Answer : ರಾಗಿ ಹೂವ !
398. ಅಂಬರದಲ್ಲಿ ಆಡುವುದು
ಪಕ್ಷಿಯು ತಾನಲ್ಲ
ಕೊಂಬು ಬಾಲಗಳುಂಟು
ಮೃಗ ಜಾತಿಯಲ್ಲ
Answer : ಗಾಳಿಪಟ !
399. ಮೂರು ಜನ ಗೆಳೆಯರು ನೀರಿಗೆ ಬಿದ್ದರೆ
ಒಬ್ಬನು ತೇಲುತ್ತಾನೆ
ಮತ್ತೊಬ್ಬ ಮುಳುಗುತ್ತಾನೆ
ಮಗದೊಬ್ಬ ಕರಗುತ್ತಾನೆ
Answer : ಎಲೆ, ಅಡಿಕೆ, ಸುಣ್ಣ !
400. ಅಡಮುಟ ಕ್ವಾಣೀಗ
ಮೆಯೆಲ್ಲ ಮುರಾಣಿ
Answer : ಕಾಂಜ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ