ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೫ (401 to 500)
Kannada Riddles Questions & Answers List Part-5 (401 to 500)
ಕನ್ನಡ ಒಗಟುಗಳ ಭಂಡಾರ:
Click on each Riddle to View Answer
401. ಕಲ್ಲೂರಲ್ಲಿ ಕಲ್ಲಾಗಿ ಮುಳ್ಳೂರಲ್ಲಿ ಮುಳ್ಳಾಗಿ
ನಾಲ್ಕು ಜನ ನಾರಿಯರು ನೆನೆಯದ ಬರ್ತಾರೆ
Answer : ದನದ ಕೆಚ್ಚಲು !
402. ಆಚೆ ಈಚೆ ಮೇಲೊಂದು ಟಗರು ! ಅವ್ವ ಅಂದ್ರೆ ಡಿಕ್ಕಿ ಹೊಡೆಯಲ್ಲ ! ಅಪ್ಪ ಎಂದ್ರೆ ಡಿಕ್ಕಿ ಹೊಡೆಯುತ್ತದೆ
Answer : ತುಟಿಗಳು !
403. ಸತ್ತವನನ್ನು ಸಂತೆಗೆ ಹೊತ್ಕೊಂಡು ಹೋದರು
Answer : ಕರಿಮೀನು !
404. ಮರದ ಮೇಲೆ ತಣ್ಣೀರ ತತ್ರಾಣಿ
Answer : ತೆಂಗಿನಕಾಯಿ !
405. ಅಂಚೇರ್ ಗಿಂಡಿ ಪಂಚೇರ್ ಗಿಂಡಿ
ದೇಶಾ ತಿರುಗೋದೆರಡೇ ಗಿಂಡಿ
Answer : ಸೂರ್ಯ ಚಂದ್ರರು !
Click on each Riddle to View Answer
406. ಬೆಳೀ ಮಾಣಿಗೆ ಕರೀಟೊಪ್ಪಿ
Answer : ಬೆಂಕಿಕಡ್ಡಿ !
407. ಚಿಕ್ಕ ಚಿಕ್ಕ ಸೀರಿ ಚಿನ್ನದ ಹಳಿ ಸೀರಿ
ರಾತ್ರಿ ಬಿರೂದು ಬೆಚ್ಚನ್ನ ಸೀರಿ
Answer : ಕೊಡಪಾನ !
408. ನಾಲ್ಕು ಮೂಲೆ ಕೊಣ
ನಾಮ ತೆಯ್ಯೋಕೆ ನೀರಿಲ್ಲ
Answer : ಬೆಲ್ಲ !
409. ನಾಲ್ಕು ಕಿವಿಗಳುಂಟು ಬ್ರಹ್ಮನಲ್ಲ
ಒಂದು ಬಾಲವುಂಟು ದನವಲ್ಲ
Answer : ಲವಂಗ !
410. ಜಾತಿ ಜಮಾಲು ಗಿಡ ಜಾತಿ ಪರಿಮಳ ಗಿಡ
ಹತ್ತಕ್ಕೂ ಬೇಕಾದುದೊಂದು ಬಹುಮಾನ ಗಿಡ
Answer : ಅರಿಶಿನ !
Click on each Riddle to View Answer
411. ಡುಬ್ಬಾ ಕೆರೀ ಮೂಗ ಮುರಿ
Answer : ಹಿರೇಕಾಯಿ !
412. ಕಲ್ಲು ಕಂದಕ ಬಿಳಿ ಸಂದುಕ
ನೀರುಂಟು ಮೀನಿಲ್ಲ
Answer : ತೆಂಗಿನಕಾಯಿ !
413. ಗಬ್ಬದ ಕುರಿ ದಿಬ್ಬ ಹತ್ತಲಾರದು
Answer : ಹಲಸಿನ ಹಣ್ಣು !
414. ನಾಲ್ಕು ಕಾಲುಗಲುಂಟು ನಡೆ ಬಾರದೆನಗೆ, ಕಾಲುಗಳ ಮೇಲುಗಡೆ ಉಂಟೊಂದು ಹಲಗೆ, ಬೆನ್ನೊಂದು ಕೈ ಎರಡು ನೋಡು ಮಗು ನನಗೆ, ನನ್ನಲ್ಲಿ ಬಂದರೆ ದಣುವಾರುವುದು ನಿನಗೆ
Answer : ಕುರ್ಚಿ !
415. ಬಾಲೈತೆ ಜವಿ ಇಲ್ಲ
ಗಂಗೆದೊಗಲೈತಿ ಇಣಿಯಿಲ್ಲ
ಕಾಲದಾವು ಕೊಳಗಿಲ್ಲ
Answer : ಓತಿಕಾಟ !
Click on each Riddle to View Answer
416. ಒಂದ ಟೊಂಗಿ ಟೊಂಗಿಗಿ ನೂರ ಗಿಣಿ
ಗಿಣಿಗಿ ನೂರ ರೆಕ್ಕಿ ರೆಕ್ಕಿಗಿ ನೂರಹಕ್ಕಿ
ಹಕ್ಕಿ ಬಾಯಾಗ ಮೂರ ಪಾವ ಅಕ್ಕಿ
Answer : ಬಾಳಿಕಾಯಿ !
417. ಇಲ್ಲಿ ಮಿಂಚು ಅಲ್ಲಿ ಮಿಂಚು
ಕಲ್ಯಾಣತನಕ ಮಿಂಚು ಮಿಂಚು
Answer : ಕರಡಿಗೆ !
418. ದೊಡ್ಡ ಆಲದ ಮರ ದೊಪ್ಪನೇ ಬಿತ್ತು
ಸಂತಿ ಮಂದಿ ದಿಕ್ಕಾಪಾಲಾದರು
Answer : ಸೂರ್ಯ !
419. ಅಣ್ಣ ಬಣ್ಣ ಕೆಂಪು ಬಣ್ಣ
ತಂದು ಕೊಡಣ್ಣ ಬೀಜಿಲ್ದಣ್ಣ
Answer : ಗೆಣಸು !
420. ಹೊಕ್ಕಿದ್ದು ಒಂದಾಗಿ ಹೊರಟಿದ್ದು ನೂರಾಗಿ
Answer : ಶೇವಿಗೆ !
Click on each Riddle to View Answer
421. ಉದ್ದನೆ ಮರಕೆ ಕೊಡ್ಲಿ ಸಿಗಾಕೇತಿ
Answer : ಮೂಗುತಿ !
422. ನೆಲದೊಳಗಿರುವುದು ರಾಮಚಂದ್ರ
Answer : ಅರಿಶಿನ !
423. ಅಕ್ಕಕ್ಕ ತಂಗೇರು
ಅವರ್ಯಾವ ಕುಲದೋರು
ಚಿಕ್ಕ ಜಾಲಿ ಮರಕ್ಕ ಚಿರ್ಹೆತ್ತಿಕೊಂಡರು
Answer : ಕಬ್ಬು !
424. ಗಂಟುನೂರು ಗಜನೂರು
ಮಂಟಪನೂರು ಮನೆನೂರು
ಬಂಟ ನೀನಾದರೆ ತಿಳಿದ್ಹೇಳು
Answer : ಬಲೆ !
425. ಒಂದ ಗಡಿಗಿ
ಒಂಬತ್ತ ತೂತ
Answer : ಶರೀರ !
Click on each Riddle to View Answer
426. ಬಿಳಿ ಲಂಗದ ಹುಡುಗಿ ಅಂಗಡ್ಯಾಗೆ ಕುಳಿತಾಳೆ
ರೊಕ್ಕಾ ಕೊಟ್ಟರೆ ಬರುತಾಳೆ ಬೆಂಕಿಯನ್ನು ಬೇಡುತಾಳೆ
ಜಗ್ಗಿದರೆ ಬರುತಾಳೆ ಬಿಟ್ಟರೆ ಹೋಗುತಾಳೆ
Answer : ಸಿಗರೇಟು !
427. ಸುತ್ತು ಮುತ್ತು ಸುಣ್ಣದ ಗೋಡೆ
ಎತ್ತ ನೋಡಿದರೂ ಬಾಗಿಲಿಲ್ಲ
Answer : ಮೊಟ್ಟೆ !
428. ಗದಾನ ಗುದಿಗಿ ಅವಳ್ಯಾರು
ಚೆಂದಾನ ಚೆಲುವಿ ಅವಳ್ಯಾರು
ತಾತನ ತೂತ ಅವಳ್ಯಾರು
ಕಡಾಯಿ ಬಸವಿ ಅವಳ್ಯಾರು
Answer : ಕರಿಗಡಬು, ಹೋಳಿಗೆ, ದೋಸೆ, ವಡೆ !
429. ಉಂಡ ಉಟ್ಟ ಚೀಲಕ್ಕೆ ಕೈ ಇಟ್ಟ
Answer : ಎಲೆ ಅಡಿಕೆ ಚೀಲ !
430. ಅಲ್ಲಿ ಪಿಳಿ ಪಿಳಿ
ಇಲ್ಲಿ ಪಿಳಿ ಪಿಳಿ
ಕಲ್ಲೊಳಗೂ ಪಿಳಿ ಪಿಳಿ
Answer : ಆಡುಗಳು ಮತ್ತು ಮರಿಗಳು !
Click on each Riddle to View Answer
431. ರಾಜಸ ರೂಪು ನೋಡಲು ಅಂದ, ಮುಟ್ಟಿದರೆ ಕೊಂದ
Answer : ಹಾವು !
432. ಕಾನಿಗೆ ಹೋಗುವೆ
ಕರಚಂಡಾಡುವೆ
ಒಡತಿ ಕಂಡಲ್ಲಿ
ಸಿಡಿಸಿಡಿದು ಬೀಳುವೆ
Answer : ಕುಡಗೋಲು !
433. ಸರ್ರನ ಬರ್ತಾನ
ಉಡುದಾರ ಬಿಚ್ತಾನ
ಅಂಗಿ ಕಳಿತಾನ
ಬಾಯಾಗ ಬೀಳತಾನ
Answer : ಬಾಳೆಹಣ್ಣು !
434. ಸಾವಿರ ಸಲ ಬಡುದ್ರು ಸದ್ದಾಗಲ್ಲ
Answer : ಕಣ್ಕಪ್ಪು !
435. ಮಣಿ ಮಣಿ ಬಂಗಾರ
ಮಣಿ ಸುಂಗಾರ
ನೋಡಿದರೆ ಮನೋಹರ
ಮುಟ್ಟಿದರೆ ಹರೋಹರ
Answer : ಚೇಳು !
Click on each Riddle to View Answer
436. ಒಂದು ಏರಿ ಮೇಲೆ ಸಾಸಿವೆ ಚೆಲ್ಲಿ ಸಾಸಿವೆಯನ್ನಾದರೂ ಎಣಿಸಬಹುದು , ಅದರ ಸಸಿ ಎಣಿಸೋಕಾಗೋಲ್ಲ
Answer : ಕಣ್ಣು ರೆಪ್ಪೆ ಕೂದಲು !
437. ಎಂಟಣಿ ಕೊಟ್ಟು ಎಳಕಂದ್ ಮಕಂತಳೆ
Answer : ಚಾಪೆ !
438. ಅರ್ಕಟ್ಟು ಮರ್ಕಟ್ಟು ಮರಕೆ ಮುವತ್ಕಟ್ತು
ಹೇಳಿದವನ ಹೆಡ ಮರ್ಗೆ ಕಟ್ಟು
ಅರ್ತಾ ಬಿಡಸ್ದವ್ರೀಗೆ ಅರ್ದಾ ರಾಜ್ಯಾ ಕುಡ್ರಿ
Answer : ತೇರ್ಕಟ್ಟೆ !
439. ಹೊಟ್ಟೆ ತುಂಬ ತಿಂತೈತಿ
ಹೊರಗ ಬಂದ ಕಕ್ಕೋತೈತಿ
Answer : ಮಟ್ಟಿ ಅಥವಾ ಕಪ್ಪಲಿ !
440. ಕಂಬದ್ಮೆಲೆ ನಿಂಬೀಕಾಯಿ
Answer : ಲವಂಗ !
Click on each Riddle to View Answer
441. ಒಂದಂಕಣದ ಮನೆ ಒಳಗೆ
ವಾರಿನಿ ಧಯ ತೋಡಿ
ಬೆಂದವನ ತಂದು ಆ ಮನೆಗೆ ಕೂಡಿ
ಒಂದ್ಹಿಡಿ ಮುಟ್ಟಿದರೆ ನೂರಾಯ್ತು ನೋಡಿ
Answer : ಶ್ಯಾವಗೆ !
442. ಬೆನ್ನಿನ ಮೇಲೆ ಬೇರಿಳಿದವಳೇ
ಮೊಳಕಾಲಿಗೆ ಮೊಲೆ ತಾಗಿದವಳೇ
Answer : ಕುಳಿತು ಎರೆದುಕೊಳ್ಳುವ ಸ್ತ್ರೀ !
443. ಅಕ್ಕಾ ಅಕ್ಕಾ ಬಾವೀ ನೋಡು
ಬಾವಿಯೊಳ್ಗೆ ನರ್ನೋಡು
ನೀರಿನೊಳ್ಗೆ ಹಗ್ಗಾನೋಡು
ಹಗ್ಗಕ್ಕಾದಾ ಹೂಗ್ ನೋಡ
(ಹಗ್ಗಕ್ವಂದ್ ಹೊಡೆ ನೋಡು)
Answer : ದೀಪ !
444. ಚಿಂತಾಮಣಿ ಕೆರೇಲಿ ಚಿಣಿಮಿಣಿ ಹಕ್ಕಿ
ಕೆರೆ ಬತ್ತಿದರೆ ಹಕ್ಕಿ ಹಾರಿ ಮಾಯ
Answer : ಎಣ್ಣೆ-ದೀಪ !
445. ಕಾಸಿನ ಕುದುರೆಗೆ ಬಾಲದ ಲಗಾಮು
Answer : ಸೂಜಿ ದಾರ !
Click on each Riddle to View Answer
446. ಸಾವಿರ ರೂಪಾಯಿಗೆ ಹೋರಿ ತಂದರೆ
ನೂಲಿನ ಮ್ಯಾಲೆ ವಾಸ
Answer : ತಾಳಿ !
447. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ
Answer : ನುಸಿ !
448. ಹಂದಿ ಜುಂಗು ನಂದಿ ಮಟ್ಟೆ ಒಡೆದರೆ ಬಿಳಿಕಲ್ಲು
Answer : ತೆಂಗಿನಕಾಯಿ !
449. ಸೂರ್ಯ ಸುಕ್ಕ ಬೂದಿ ಮುಕ್ಕ
Answer : ಹಪ್ಪಳ !
450. ಈಟೆ ಹುಡಗ ಕರಿ ಟೋಪಿ ಹಾಕೊಂಡು
ಕರಾಮತ್ತು ಮಾಡ್ತಾನೆ
Answer : ಬೆಂಕಿಕಡ್ಡಿ !
Click on each Riddle to View Answer
451. ಗುಡಿ ಬಾಗಿಲಲ್ಲಿ ವಿÆನು ಹಾರಾಡ್ತದೆ
Answer : ಬಾಯಿ-ನಾಲಗೆ !
452. ಹಸರ ಹಸರಾಣಿ
ತುಂಬಿದ ತತ್ರಾಣಿ
ಹೆಸರ ಒಡಿದಿದ್ರ ನಿಮ್ಮಪ್ಪನಾಣೆ
Answer : ಕಲ್ಲಂಗಡಿ ಹಣ್ಣು !
453. ಎತ್ತಲಾರದ ಚಪ್ಪಡಿ
ಉಡಿಯಲಾರದ ಹಗ್ಗ
ಹಿಡಿಯಲಾರದ ಹೋರಿ
Answer : ಭೂಮಿ-ಹಾವು-ಚಂದ್ರ !
454. ಹೆಕ್ಕಿ ತಿನ್ನುವವನಿಗೆ ಕೆಂಪು ಮುಂಡಾಸ
Answer : ಕೋಳಿ !
455. ಗುಡಿಯೊಳಗೆ ನೀರು
ಗುಡಿಗೆ ಬೀಗಮುದ್ರೆ
Answer : ತೆಂಗು !
Click on each Riddle to View Answer
456. ತಾಸಿಗೊಮ್ಮೆ ಓಡು ಮಗಾ
ಮಿನಿಟಿಗೊಮ್ಮೆ ಓಡು ಮೊಮ್ಮಗಾ
ಸೆಕೆಂಡಿಗೊಮ್ಮೆ ಓಡು ಮರಿಮೊಮ್ಮಗಾ
ಇವರ್ನ ದಿನಾ ಕಟಿಗೊಂಡು ದಿನಾ ಕಳದ್ರೂ ಬಿಡಗಡಿಯಿಲ್ಲ
Answer : ಗಡಿಯಾರದ ತಾಸಿನ, ಮಿನಿಟಿನ, ಸೆಕಂಡಿನ ಮುಳ್ಳುಗಳು !
457. ಏರಿ ಹಿಂದಿನವಳು
ಈಟೀಟ ಗಿಡಕ ಚೀಟಿ ಕಟ್ಟೀನಿ
ಹಾಟ್ಯಾ ಬಂದು ಹರಕೊಂಡು ಹ್ವಾದಾ
Answer : ಕಡ್ಡಲಿ ಗಿಡ !
458. ನಾಕ್ ಜನ ಸೂಳೇರು
ಎಸ್ಟು ಮಳೂದ್ರೂವೆ
ನಡದೇ ವೋಯ್ತರೆ
Answer : ಹಸುವಿನ ಕೆಚ್ಚಲು !
459. ಹೊಟ್ಟಿಗುಬ್ಬಿ ಹೊಳಿ ಈಸ್ಯಾಡತೈತಿ
Answer : ಕರಚೀಕಾಯಿ !
460. ಸೊಂಡಿ ಮೂಗಪ್ಪ
ತಲಿಲೆ ನೀರ ಕುಡೆಪ್ಪ
Answer : ಕಿಟ್ಟಲಿ !
Click on each Riddle to View Answer
461. ಈಟಾಟಿ ಕಾಯಿ ಮಾಪಳಕಾಯಿ
ತಿನ್ನುದು ಬೀಜ ಉಗಳೂದು ತ್ವಾಟ
Answer : ಯಾಲಕ್ಕಿ !
462. ತಾಯಿ ತಟ್ಲಿಯಂತಾಕಿ
ಮಗಳು ಮುತ್ತಿನಂತಾಕಿ
Answer : ಉರಿ, ದೀಪ !
463. ಒಂದು ಬಾಳೆ ಹಣ್ಣಿನ ಚಿಪ್ಪಿನಲ್ಲಿ ಐದು ಕಾಯಿಗಳಿವೆ
ಅಲುಗಾಡಿಸಬಹುದು
ಕೀಳಲು ಬರುವುದಿಲ್ಲ
Answer : ಕೈ ಬೆರಳು !
464. ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ !
Answer : ಬಾಳೆ ಹಣ್ಣು !
465. ಅತಂತ್ರ ಗಂಗೆ
ಅತ್ಗಳಗಂಗೆ
Answer : ಸಾವಿಗೆ !
Click on each Riddle to View Answer
466. ಅಗಿದರೆ ಹಲ್ಲಿಗೆ ಸಿಗೊಲ್ಲ
ಹಿಡಿದರೆ ಕೈಗೆ ಸಿಗೊಲ್ಲ
ಬಿಟ್ಟರೆ ಬಿದ್ದೋಡ್ತದೆ
Answer : ನೀರು !
467. ಈಟ ಕಂಬದ ಮ್ಯಾಲ ಲಿಂಗಪ್ಪ ಕುಂತಾನೆ
Answer : ಲವಂಗ !
468. ಮೂರ್ನೂರಡಕ್ಲಾ ಮೂನೂರ್ಮುಚ್ಲಾ
Answer : ಗುಳ್ಯಾ !
469. ಊಟದ ಮುಂದಾಗಿ ಉಣ್ಣಾದ್ಯಾವುದಾ
ಉಂಡ್ ಬುಡದ್ಯಾವುದಾ
ಗಂಡ ಮುಟ್ಟದೇ ಇದ್ದ ಜಾಗ ಯಾವ್ದಾ
Answer : ಎದೆಹಾಲು, ಕಣ್ಣಿನಗುಳ್ಳೆ !
470. ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ
Answer : ಇರುವೆ !
Click on each Riddle to View Answer
471. ಮನ್ಯಾಗ ಲಕಸಿಮಿ ಮಲಿ ಡುಬ್ಬದಾಗ
Answer : ಕೇರೋ ಮರ !
472. ಕರಿಯ ಕಾಂತಣ್ಣನಿಗೆ
ಬಿಳಿಯ ಮುಂಡಾಸು
Answer : ಅನ್ನ ಬೇಯುವಾಗ ಮೇಲೆ ಬರುವ ನೊರೆ !
473. ಒಂದು ಹಳ್ಳ
ಅದರ ಮೇಲೊಂದು ಕಂಬ
ಕಂಬದ ಪಕ್ಕ ಎರಡು ಗಿಣಿ
ಅದರ ಮೇಲೆ ಬಿಳಿ ಮೈದಾನ
Answer : ಬಾಯಿ, ಮೂಗು, ಕಣ್ಣು, ಹಣೆ !
474. ಬಾವಿ ದುಡ್ಗೆ ಮೇಲೆ ಹೆಬ್ಬಾವ್ ಹರ್ತದೆ
Answer : ಹಗ್ಗಾ !
475. ಅರೆಗೆರೆ ತುಂಬುಗೆರೆ ಬರಿಗೆರೆ
Answer : ತೆಂಗಿನಕಾಯಿ, ಎಳನೀರು, ಕೊಬರಿ !
Click on each Riddle to View Answer
476. ಆಕಾಸಕ್ಕಿಂತ ಅಗ್ಗ
ಭೂಮಿಗಿಂತ ಭಾರ
Answer : ಆಸೆ !
477. ಇಲ್ಲದ ಹಲಕಟ
ಹಲಕಟದಿಂದ ಗೊಳಕಟ
ಗೊಳಕಟದಿಂದ ಒಳ್ಯಾಕ
ಒಳ್ಯಾಕದಿಂದ ಗೊಳ್ಯಾಕ
ಗೊಳ್ಯಾಕದಿಂದ ಹೊರ್ಯಾಕ
Answer : ತಿಂದು ಹೇಲುವುದು !
478. ಒಂದೇ ಒಂದಾದರೂ ಮನೆಯೆಲ್ಲ ತುಂಬಿಸುತ್ತೆ
Answer : ದೀಪ !
479. ನಾಕ ಕಾಲಿನ ನಾಗಪ್ಪ
ಬೀಗ್ರ ಬಂದಾರ ಬಾಗಪ್ಪಾ
Answer : ಹೊರಸ !
480. ಆತಗ ಆರಕಣ್ಣ
ಬೂತಗ ಮೂರಕಣ್ಣ
ಕೆಂದೆತ್ತಿಗಿ ಒಂದಾ ಕಣ್ಣ
Answer : ಕೊಳಲ, ಟೆಂಗ, ಅಡಿಕೆ !
Click on each Riddle to View Answer
481. ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ?
Answer : ರಸ್ತೆ ದೀಪ !
482. ಮುಳ್ಳು ಮುತ್ತುಗದ ಹೂವು ಮುಡಿದವಳೆ ಜಾಣೆ
ಕೆಂಬಟ್ಟೆ ನೀರು ಕುಡಿದವಳೆ ಜಾಣೆ
ಹಸಿ ಬೆತ್ತದ ಕೋಲ ಹಿಡಿದವಳೆ ಜಾಣೆ
Answer : ಬೆಂಕಿ, ರಕ್ತ, ಹಾವು !
483. ಕರಿಯ ಹೋರಿಯ ಮೇಲೆ ಬಿಳಿಯ ಹೋರಿ
ಜಡೆ-ಜಡೆ ಹೂ
Answer : ಜಡೆಬಿಲ್ಲೆ !
484. ನುಚ್ ನುಚ್ ಅಂಗಡಿ ನೂರಾರು ಅಂಗಡಿ
ಮುಚ್ಚಿ ನೋಡಿದರೆ ಒಂದೇ ಅಂಗಡಿ
Answer : ಪುಸ್ತಕ !
485. ಆಕಾಶದಲ್ಲಿ ಆಡೊ ಗಿಡ್ಗ
ಗಿಡಗನ ಹೊಟ್ಟೇಲಿ ಬೆಳ್ಳಿ ಕಡ್ಗ
ಅದ ಬಿಡಿಸಿದನೆ ಮೈಸೂರ ಹುಡ್ಗ
Answer : ಒನಕೆ !
Click on each Riddle to View Answer
486. ಈಟ ಮಗನ ಚೋಟ ಮಗನ
ಗಳೇ ಹೊಡೀಲೇ ಲೌಡಿ ಮಗನ
Answer : ಬಾರಕೋಲು !
487. ಗಟ್ಟಿದ ಕೆಳಗಿನ ಭಟ್ಟ
ತಲೆಯಲ್ಲೊಂದು ಬುಟ್ಟ
ಬುಡದಲ್ಲೊಂದು ಗುಟ್ಟ
Answer : ಅನಾನಸ್ !
488. ಕುಳ್ಳ ಮನುಷ್ಯ ಗುಡ್ಡ ಸುತ್ತುತಾನೆ
Answer : ಒಣಗು !
489. ಊರೆಲ್ಲಾ ಸುತ್ತಾಡಿ ಮನಿಗೆ ಬಂದು
ಮೂಲ್ಯಾಗ ಕುಂದರತೈತಿ
Answer : ಚಪ್ಪಲಿ !
490. ನಮ್ಮ ಜೂಲನಾಯಿ
ನರಮನ್ಸರ್ನ ಕಂಡ್ರೆ ಸುಮ್ನಿರ್ತದೆ
ದೇವರ್ನ ಕಂಡ್ರೆ ಉಚ್ಚೆ ಹುಯ್ಕೊಳ್ತುದೆ
Answer : ತೆಂಗಿನಕಾಯಿ !
Click on each Riddle to View Answer
491. ಸ್ವೊಳ್ಳೆ ಕುಯ್ಯೊಕೊಂದಳ್ಳ
ರಗುತ ತುಂಬಕೊಂದು ಗಡ್ಗೆ
ಬಾಡ ತುಂಬಕೊಂದು ಯಡ್ಗೆ
Answer : ಕಬ್ಬುಹಾಲು ಹಿಂಡುವುದು !
492. ಹಿಗ್ಗರಾಯನ ಮುಂದೆ ಬಗ್ಗರಾಯ
ಹಸಿರು ಮೇಯ್ತಾ ಕೆಂಪು ಹರ್ತಾ
Answer : ತಾಂಬೂಲ !
493. ಹರನ ಹಾರ
ಹಾರನ ಆಹಾರ
ಆಹಾರನ ಪುತ್ರ
ಪುತ್ರನ ಮಿತ್ರ
ಮಿತ್ರನ ಶತ್ರು
ಶತ್ರುವಿನ ತಂಗಿ ಯಾರು
Answer : ಶೂರ್ಪನಖಿ !
494. ಕುಣಿಯಾಗ ಕುಂತರೂ ಕುಣಿಯೂದು ಬಿಡವೊಲ್ಲ
Answer : ನೆಯ್ಕಾರ !
495. ಊದಾ ಸೀರೆ ಗರತಿ , ಮರದ ಮೇಲೆ ಇರುತಿ , ಒದೆ ಕೊಟ್ಟರೆ ಬೀಳುತಿ
Answer : ನೇರಳೆಹಣ್ಣು !
Click on each Riddle to View Answer
496. ಬೇಲ್ಯಾಗ ಇರ್ತದ ಬಿಚ್ಚಿಗೊಂಡ
ಕೂಡ್ರತದ ಹೋಗಬರೊ ನಾರೇರ
ಸೆರಗ್ಹಿಡದ ಎಳಿತದ
Answer : ಉತ್ತರಾಣಿ ಕಡ್ಡಿ !
497. ಅಪ್ಪ ಆಕಾಶಕ್ಕ
ಅವ್ವ ಪಾತಾಳಕ್ಕ
ಮಗ ಮುದುವಿಗಿ
Answer : ಅಡಿಕೆ ಮರ, ಅಡಿಕೆ !
498. ಈಟಾ ಕುಳ್ಯಾಗ ಹುಳ್ಳಾ ನುಚ್ಚಾ
Answer : ಬೆಳುವಲ ಹಣ್ಣ !
499. ಅಂಗರ ಗುತ್ತೀಲಿ ನಿಂಗಣ್ನ ಕೂತವ್ನೆ
ಮೊಲದಪ್ಪನಿಗೆ ಮೂರೇ ಕಾಲು
ತೇವಟಿಗೇರಪ್ಪ ತೇಲೇ ಹೋಗ್ತಾನೆ
ಗಂಗಳದೋರಪ್ಪ ಮುಳುಗೇ ಹೋಗ್ತಾನೆ
Answer : ಮೊಲ, ತೇವಟಿಗೆ, ಗಂಗಳ, ಚೆಂಬು !
500. ಜಂಬೂನೀರಲ ಹಣ್ಣ ಜರಜರದ ಬೀಳ್ತಾವ
ನಾಕ ಬಾಂವಿ ನೀರ ಒಂದಾ
Answer : ಆಕಳ ಮೊಲಿ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ