ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೮ (701 to 800)
Kannada Riddles Questions & Answers List Part-8 (701 to 800)
Kannada Riddles with Answers:
Click on each Riddle to View Answer
701. ಹಾಸಿಗಿ ಹಸ್ಯಾವ ಕಾಲ ಎತ್ತ್ಯಾವ
Answer : ಮರೆಳ್ಳ !
702. ಬಂಡ ಬೋರಯ್ಯನೂವೆ
ಬಡ ಬೋರಯ್ಯನೂವೆ
ಜಗಳ ಆಡುವಾಗ
ಬಜಾರದ ರಂಗಿಹೋಗಿ ಬಿಡಿಸಿಕೊಂಡು ಬಂದಳು
Answer : ಬೀಗದೆಸಳು !
703. ಹಾಲು ಉಕ್ಕಿದರ ನೀರು ಹಾಕ್ತಾರ
ನೀರು ಉಕ್ಕಿದರ ಏನು ಹಾಕ್ತಾರ
Answer : ನಾವೆ !
704. ಸಾಲ ಗಿಡಗಳು ಬಿದ್ದರ ಸಪ್ಪಳಿಲ್ಲ
Answer : ಕಣ್ಣಿನ ಎವೆಗಳು !
705. ಸೂರ್ಯನೇ ತಂದೆ
ಸಮುದ್ರವೇ ತಾಯಿ
ನನ್ನ ಬಿಟ್ಟು ಊಟ ಮಾಡುವವರಿಲ್ಲ
Answer : ಉಪ್ಪು !
Click on each Riddle to View Answer
706. ತಟ್ಟೆ ಆಡುತ್ತೆ ತಮಾಷೆ ಮಾಡುತ್ತೆ ಮುಟ್ಟಿದರೆ ಕಚ್ಚುತ್ತೆ
Answer : ಆರತಿ !
707. ಚಿಕ್ಕ ಚಿಕ್ಕ ಕೊಡಾ
ಚಿತ್ತಾರದ ಕೊಡಾ
ನವಣೇ ತುಂಬೇತಿ ಹವಣೀ ಕೊಡಾ
Answer : ಬದ್ನೀಕಾಯಿ !
708. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ
Answer : ಸೂಜಿ !
709. ಗಬ್ಬದ ಕುದುರೆ
ದಿಬ್ಬ ಹತ್ತಲಾರದು
Answer : ಕುರ್ಜು !
710. ಬೆಟ್ಟದ ಮೇಲಿರೋ ದೇವೇಂದ್ರಾಯನಿಗೆ ಎಪ್ಪತ್ತೇಳು ಕಿರೀಟ
Answer : ಪಾಪಾಸುಗಳ್ಳಿ !
Click on each Riddle to View Answer
711. ಹಾರಿದರೆ ಹನುಮಂತ
ಕುಳಿತರೆ ಮುನಿ
ಕೂಗಿದರೆ ಕಾಡಿನೊಡಯ
Answer : ಕಪ್ಪೆ !
712. ಗಾಟುಂಟು ಗಮನವಿಲ್ಲ
ಹುರಿಯುಂಟು ಹಗ್ಗವಲ್ಲ
Answer : ಹೊಗೆಸೊಪ್ಪು !
713. ಗಟ್ಟದ್ಮೆಲಣ್
ಬಟ್ಟಂಗೆ ಮೇಲೂ ಜುಟ್ಟಾ
Answer : ಅನಾನಸ್ಸು !
714. ಅಡಬ್ಯಾಗಿರೋ ಗಿಡಗೋವಿಂದ
ನಿನಗ್ಯಾರಿಟ್ಟರೋ ಸಾದಿನ ಬಟ್ಟ
Answer : ಗುಲಗಂಜಿ !
715. ತಗ್ಗಿನಾನ ಪಾರ ತಲೀ ಹಾಕತೈತಿ
Answer : ನವಣಿ ತೆನೆ !
Click on each Riddle to View Answer
716. ಇನ್ನು ಬಲ್ಲರೆ ಕಾಯಿ, ಮುನ್ನೂರ ಅರವತ್ತು ; ಹಣ್ಣು ಹನ್ನೆರಡು, ಗೊನೆ ಮೂರು, ತೊಟ್ಟೊಂದು; ಚೆನ್ನಾಗಿ ಹೇಳಿ ಸರ್ವಜ್ಞ ||
Answer : ಒಂದು ವರ್ಷ !
717. ಹಾರೆ ಹೊಡೂದು ಸಾರೆ ತೆಗೂದು ನುಂಗ್ ಉಗ್ಳುದು
Answer : ಹಾಲ್ಸ್ನ ಹಣ್ಣು !
718. ಹಲ್ಲಗ ನನ ಹಾಟ ಹುಲ್ಲಾಗ ಗಿನಗಿಟ್ಟಿ
ಮೆಲ್ಲಾ ಯಾಳಿ ನೆನಪ ಬರತದ
Answer : ಮಾವಿನಕಾಯಿ !
719. ಬಿಳಿ ಕುದುರಿ ಬಿಕ್ಕೊಂಡ ನಿಂತ್ತೈತಿ
Answer : ಜಾಡರ ಮಗ್ಗ !
720. ಅತ್ಯೋರ್ಹಸೆ ಯತ್ಲಾರೆ ಬಿದ್ಮುತ್ಹೆಕ್ಲಾರೆ
Answer : ಆಕಾಶಾ, ತಾರಕ್ಲು !
Click on each Riddle to View Answer
721. ಕುಳ್ಳಾ ಕುಳೀಲ್ ಕುಳ್ತೆ
ಬಂದವ್ರೀಗೆಲ್ಲಾ ಉತ್ರಾಕುಡ್ತ್ಯಾ
Answer : ನೆಲ್ಗೆ !
722. ಓಣಿಯ ವಜೀರ ಕೋಣಿಯ ಕೋತವಾಲ
ಬಚ್ಚಲ ಬಹಾದ್ದೂರ ಇವರು ಯಾರು
Answer : ನಾಯಿ, ಕತ್ತೆ, ಕಪ್ಪೆ !
723. ಸಂತಿ ದಾರ್ಯಾಗ ಕೆಂಪಿ ಕುಂತಾಳ
Answer : ತಾಂಬೂಲ !
724. ಅವ್ವ ಹುರುಕಿ ಮಗಳು ನುಣಪಿ
ಮೊಮ್ಮಗ ಕಮ್ಕಡಲೆ
Answer : ಹಲಸಿನ ಹಣ್ಣು-ಬೀಜ-ತೊಳೆ !
725. ತಾಳಿಲ್ದೆ ಮ್ಯಾಳಿಲ್ದೆ ಕುಣಿಯೋನ್ಯಾರ
ರುಚಿ ಇಲ್ದೆ ಪಚಿ ಇಲ್ದೆ ಚೀಪೊನ್ಯಾರ
ಸಳಿ ಇಲ್ದೆ ಜರ ಇಲ್ದೆ ನಳ್ಳೇನ್ಯಾರ
Answer : ಮಡಿವಾಳ !
Click on each Riddle to View Answer
726. ಗರಿ ಮ್ಯಾಲೆ ಗರಿ
ಶ್ರೀರಾಮರ ಏರಿ
ಕೈಬೀಸಿ ಕರಿ
Answer : ಕಣ್ಣರೆಪ್ಪೆ ಮತ್ತು ಹುಬ್ಬು !
727. ಸಿಬ್ಬಲದಂತಹ ಹಣ್ಣು ಬಲು ರುಚಿ
Answer : ಜೇನು ತುಪ್ಪ !
728. ಗೊಲಿಬಿಟ್ ಹೊಡೂದು ರೊಟ್ಟಿ ತಕಾ ಮನೆಗ್ಬರೂದು
Answer : ಜೇನು !
729. ಹಾದಿಗುಂಟ ಪಾರ
ಹಾಡ್ಕೋತ ಹೋಗ್ತದ
Answer : ದನದ ಕೊಳ್ಳ ಗಂಟೆ !
730. ರಾಮ ಸೀತಾ ಮಲಗ್ಯಾರ
ಸೀತಾ ಎದ್ದ ಹೋದ್ಲು
ಎಲ್ಲಿ ಹೋಗಿದ್ದಿ ಅಂತ ರಾಮ ಕೇಳಿದ್ಲು
ನನ್ನ ತಂದಾವ್ನ ಅಪ್ಪನ ಮನಿಗಿ
ಹೋಗಿದ್ದೆ ಅಂದು
Answer : ವಾಯು !
Click on each Riddle to View Answer
731. ನೋಡುವವರಿಬ್ಬರು
ಮಾಡುವವರೈವರು
ತಿನ್ನುವರು ಮೂವತ್ತೆರಡು ಮಂದಿ
Answer : ಕಣ್ಣು-ಬೆರಳು-ಹಲ್ಲು !
732. ಕಲ್ಲ ಕಣಕಣ
ಹೂವು ಜಣಜಣ
ಹೂಬಳ್ಳಿ ತೊಡ್ರ ಬಡ್ರ
Answer : ಕಣಕ-ರೊಕ್ಕ-ಶ್ಯಾವಗಿ !
733. ಬಂಗಾರ ನುಂಗಿದ ಬೆಳ್ಳಿ ಉಗಿದ
Answer : ಹಲಸಿನ ಬೀಜ !
734. ತಾ ಗಿಂಡಿ ತತ್ತರ ಗಿಂಡಿ
ಮುಚ್ಲಾ ತೇಗ್ದ್ರೆ ಮುನ್ನೂರು ಗಿಂಡಿ
Answer : ನೆಲ್ಲಿ !
735. ಗಬ್ಬದ್ದನಾ ಗುಡ್ಡಾ ಹತ್ತಿಲ್ಲೆ
Answer : ತೇರ್ಕಟ್ಟೆ !
Click on each Riddle to View Answer
736. ನಿಮ್ಮ ಸಮದೋರು ಬಂದು
ಕೈಹಿಡಕೊಂಡ್ರೆ ಏನೆಂತ ಬಿಡಿಸಿಕೊಳ್ತೀರಿ
Answer : ಕಡಗ !
737. ಕೆಂಪ ಮಾಣಿಗಿ ಒಂದಾ ಕಣ್ಣ
Answer : ಗುಲಗಂಜಿ !
738. ಮಂಗಳವಾರದ ಸಂತೇಲಿ ಗುಂಟ ತಂದು
ಮನೆಯವರೆಲ್ಲ ಪೆಟ್ಕಂಡ್ರು
Answer : ಸೀರಣಿಗೆ !
739. ಅಪ್ಪಂದು ಜೋತಾಡತೈತಿ
ಅವ್ವಂದು ಮಾತಾಡತೈತಿ
Answer : ಬಾವಲಿ, ಪಿಲ್ಲೆ !
740. ಉದ್ದಾಗಿರುವೆ ಹಾವಲ್ಲ ಸವಿಯಾಗಿರುವೆ ಕಬ್ಬಲ್ಲ
ಹಾಗಾದರೆ ನಾನಾರು
Answer : ಪಡವಲಕಾಯಿ !
Click on each Riddle to View Answer
741. ಕರಿಕಲ್ಲ ಕೆಳಗ ನಾಕಲಿಂಗ
Answer : ಎಮ್ಮೆ ಮೊಲೆ !
742. ಅಬ್ಕೊಟ್ರೊಟ್ಟಿ ಮುರೂಲ್ಬತ್ತೆಲ್ಲೆ
ಅಪ್ಕೊಟ್ದುಡ್ಡಾ ಲೆಕ್ಕಾ ಮಾಡೂಲ್ಬತ್ತಿಲ್ಲೆ
Answer : ಚಂದ್ರಾ, ತಾರಕ್ಲು !
743. ಗೊಂದ್ಯಾಗ ಗೊಂದಿ ಯಾ ಗೊಂದಿ
Answer : ನಾಗೊಂದಿ !
744. ಹಾಸಿಗೆ ಹಾಸಿದಲ್ಲುಂಟು ಕೂಸು ಕೂತಲ್ಲುಂಟು
ಮಾಣಿ ಎದ್ದು ಮನೆಗೆ ಹೋದ
Answer : ಗದ್ದೆ-ಕೂಳೆ-ಕೆವಿ !
745. ಹುಟ್ಟಿದಾ ಮನೆ ಬಿಟ್ಟು ಸಿಟ್ಟಿನಲಿ ಹೊರಟಿಹಳು; ಸಿಟ್ಟಿಳಿದು ಮನೆಗೆ ಬರುತಿಹಳು, ಕವಿಗಳಲಿ ದಿಟ್ಟರಿದ ಹೇಳಿ ಸರ್ವಜ್ಞ ||
Answer : ಹಬೆ, ಮೋಡ, ಮಳೆ !
Click on each Riddle to View Answer
746. ಗೂಡಲ್ಲಿ ಕೂತುಗೊಂಡು ಕೆಂಪಗೆ ಕೋಪ ಕಾರ್ತದೆ
Answer : ದೀಪ !
747. ಅಚ್ ಕರ್ಯಾ ಮಗ್ಳು ಬೆಳ್ಯಾ ಮಮಗ್ಳು ಸುಂದ್ರಿ
Answer : ಬೆಳ್ಳಟ್ಟಿ ಸಪ್ಪು !
748. ಗುಲಗಂಜಿ ದಪ್ಪ ಗೋಮಾಯಿ ಹೋಗಿ
ಮನೆಯಲ್ಲ ಸಾರಿಸಿ ವಾಪಸ್ ಬರುತ್ತೆ
Answer : ಕಣ್ಣು ಕಪ್ಪು !
749. ಒಂದು ಹಣ್ಣು ಎತ್ತುವವರು ಐವರು
ತಿನ್ನುವವರು ಬತ್ತೀಸ ಮಂದಿ
ರುಚಿ ಮಾತ್ರ ಒಬ್ಬನಿಗೆ ಗೊತ್ತು
Answer : ಬೆರಳುಗಳು, ಹಲ್ಲುಗಳು, ನಾಲಿಗೆ !
750. ನನಗೆ ಮಾತೆ ಶರಧಿ
ಹಿರಿಯಣ್ಣ ಸುಧಾಕರ
ಸಹೋದರಿ ಲಕ್ಷ್ಮಿÃ
ಭಾವ ಶ್ರೀಹರಿ
ಹೀಗಿದ್ದೂ ತಿರುಕನ ಕೈಯಲ್ಲಿ ಬಳಲುತ್ತಿರುವೆ
Answer : ಉಪ್ಪು / ನೀರಗುಳ್ಳಿ !
Click on each Riddle to View Answer
751. ಅಯ್ಯೊ ಅನ್ನೊ ಕೋಣಂಗೆ
ಒಂಬತ್ಮೂಗ್ದಾರ
Answer : ತಬಲ !
752. ಕಪ್ಪುಂಟು ಕಸ್ತೂರಿ ಅಲ್ಲ
ಜಲವುಂಟು ಕೊಳವಲ್ಲ
ರೆಕ್ಕೆ ಉಂಟು ಪಕ್ಷಿಯಲ್ಲ
Answer : ಕಣ್ಣು !
753. ದೊಡ್ಡ ಹುಂಡೀಲಿ ದನ ಕೂಡಿ
ಎದ್ದು ಬರೋ ಹೊತ್ಗೆ ಒಂದೂ ಇಲ್ಲ
Answer : ಚುಕ್ಕಿಗಳು !
754. ಗುಟುರು ಗೂಳಿಗೆ ಎಂಬತ್ತೊಂದು ಮೂಗುದಾರ
Answer : ತಮ್ಮಟ್ಟೆಕಾಯಿ !
755. ಬೆಂಕಿಗೆ ಹಾಕಿದರೆ ಸುಡಲ್ಲ
ನೀರಿಗೆ ಹಾಕಿದರೆ ನೆನೆಯಲ್ಲ
Answer : ನೆರಳು !
Click on each Riddle to View Answer
756. ಹೊಳೆಯೊಳಗೆಲ್ಲ ಬರಿ ಹಂಬೆಯೆ
ಕಿತ್ತು ನೋಡಿದ್ರೆ ಒಳಗಿರೋದು ಗೂಟ
ಅದ ನೋಡಿದ್ರೆ ರಟ್ಟೆಗಾತ್ರ ರಟ್ಟೆಉದ್ದ
Answer : ಗೆಣಸು !
757. ಎರೇ ಹೊಲ್ದಾಗ್ ಬಿಳೇ ದಾರ್ ಬಿದ್ದತಿ
Answer : ಬೈತಲೆ !
758. ಚಿನ್ನದ ಗುಡಿಯೊಳಗೆ ಬೆಳ್ಳಿ ದೇವರು
Answer : ಬಾಳೆಹಣ್ಣು !
759. ತೊಗಲು ತೊಟ್ಟಿಲ್ದಾಗ ಮಗು ಜೋಲಾಡತೈತಿ
Answer : ಕಿವಿ ಓಲೆ !
760. ತೆಲಿಮ್ಯಾಗ ಕುಂಡಿ ಬಾಯಾಗ ಬಳ್ಳ
Answer : ಕೊಡ, ಕೈ !
Click on each Riddle to View Answer
761. ಗಬ್ಬ ಚೇಳ ಗುಡ್ಡಾ ಏರೇತಿ
Answer : ತತ್ರಾಣಿ !
762. ಕೆತ್ತಲಾರದ ಹಲಗೆ
ಹೊಸೀಲಾರದ ಹಗ್ಗ
ತಿದ್ದಲಾಗದ ಬಸವ
Answer : ಆಕಾಶ, ಹಾವು, ಹುಲಿ !
763. ಬಣವ್ಯಾಗ ಬಡಬಡಸತೈತಿ
ಕೆರಿಯಾಗ ಕೆಕ್ಕರಸತೈತಿ
ಗುಡಿಯಾಗ ಗುಡಗುಡಸತೈತಿ
Answer : ಕುಡುಗೋಲು, ಕಪ್ಪೆ, ತೆಂಗಿನಕಾಯಿ !
764. ಯಾಳ್ಡ್ ಗುಡ್ಡದ ನಡುವೆ ಕಳ್ಡಿ ಒದರ್ತತಿ
Answer : ಹೂಸು !
765. ಸಂಜೀತನ ಅಡವಿಗಿ ಹೋಗತೈತಿ
ಸಂಜೀಕ ಬಂದು ಮೂಲಿ ಹಿಡೀತೈತಿ
Answer : ದನಗಳ ಕೊರಳಲ್ಲಿ ಕಟ್ಟುವ ಗುದ್ದಿ !
Click on each Riddle to View Answer
766. ಕೆಳಗೆ ಗುಂಜು ನಡುವೆ ತಾಮ್ರ
ಮೇಲೆ ಹೂವಿನ ಕಿರೀಟ
Answer : ಈರುಳ್ಳಿ !
767. ತಾಯಿ ದಡ್ಡೆ ಮಗಳು ತಿರುಗಣೆ
Answer : ಕಡೆಯುವ ಕಲ್ಲು !
768. ಮೊಲೆಗಿಂತ ಮೆತ್ತಗಿರುವ
ಕಾಯಿ ಯಾವುದು?
Answer : ಎಕ್ಕದ ಕಾಯಿ !
769. ಅಟ್ಟರ ಅನ್ನಲ್ಲ
ಕುಟ್ಟಿದ್ರ ತವಡಲ್ಲ
ಒಡದ್ರ ಬೆಲೆಯಿಲ್ಲ
Answer : ಮುತ್ತು !
770. ತಿರುಗುವುದು ಚಕ್ರವಲ್ಲ
ಕಪ್ಪುಂಟು ಕಸ್ತೂರಿಯಲ್ಲ
ಹಾಡುವುದು ಕೋಗಿಲೆಯಲ್ಲ
ಇದ ಹೇಳಬಲ್ಲವರು ಕಂಡಿಹರಲ್ಲ
Answer : ಗ್ರಾಮೋಫೋನು !
Click on each Riddle to View Answer
771. ಮುಳ್ಳುಂಟು ಗಿಡವಲ್ಲ
ನಾಲಿಗೆಯುಂಟು ಪ್ರಾಣಿಯಲ್ಲ
ಟೋಪಿಯುಂಟು ಕಾಂಗ್ರೆಸ್ ಅಲ್ಲ
Answer : ಪೆನ್ನು !
772. ಬಿಳೇ ಸಿಪಾಯಿ ಕರೇ ಟೋಪಿ
Answer : ಬೆಂಕಿಕಡ್ಡಿ !
773. ಒಂಟೊಂದು ವಡಾರ್ ಗಂಟ
ನಿಮ್ಮಪ್ಪನ್ ಕಚ್ಚೆ ಪವಡೇ ಬರೀ ಸರ್ಗಂಟು
Answer : ಕಳ್ಳಿಹಾಲು !
774. ಅಂಚಿ ಇಲ್ಲದ ತಪ್ಪಲ ಯಾವದು
Answer : ಉಳ್ಳಿಗಡ್ಡಿ !
775. ಈಟೀಟ ಕಾಯಿ ಮಾಪಳಕಾಯಿ
ತಿನ್ನಲೇ ಬೀಜ ಉಗಳಲೆ ಸಿಪ್ಪಿ
Answer : ಸೇಂಗಾ !
Click on each Riddle to View Answer
776. ದ್ಯಾವಪ್ಪನ ತ್ವಾಟಾ
ಹೂ ಬಿಟ್ಟರ ಹಾಳ
Answer : ಕಣ್ಣು !
777. ಅಜ್ಜನ್ನ ಹೊಟ್ಟೆ ಹಿಡ್ಕೊಂಡು , ಮೊಮ್ಮಗ ನೇತಾಡ್ತಾ ಅವ್ನೆ
Answer : ಗೇರುಬೀಜ !
778. ಬತ್ಮರ್ದಲ್ಲಿ ಮುತ್ಸೊರಗ್ತು
Answer : ಸಾಮ್ಗೆ !
779. ಕಡಿದರೆ ಕಚ್ಚಲ್ಲ ಹಿಡಿದರೆ ಹಿಡಿಯೋಲ್ಲ
Answer : ನೀರು !
780. ಎದ್ದರೆ ಏಳು ಏಳದಿದ್ರೆ ಬೆನ್ನಿಗೊಂದು ಬೆತ್ತದ ಚಡಿ
Answer : ದೋಸೆ ಎತ್ತುವುದು !
Click on each Riddle to View Answer
781. ಕೆರೆ ಏರಿ ಕೆಳಗೆರಡು ಇಲಿ ಬೆಲ
Answer : ಮೂಗಿನ ಕಂಬ ಮತ್ತು ಹೊಳ್ಳೆಗಳು !
782. ಕತ್ತಲಾಯ್ತು ಪೋರಿ ಹೊರಗಾಯ್ತು
ಬೆಳಕಾಯ್ತು ಪೋರಿ ಒಳಗಾಯ್ತು
Answer : ಅಗಳಿ !
783. ನಾಲ್ಕು ಚೌಕದ ಗದ್ದೆ
ಬಿತ್ತುವುದು ಹದಿನಾರು ಬೀಜ
ಉಳುವುದು ಎರಡೆತ್ತು
Answer : ಪಗಡೆ !
784. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ
Answer : ಕೋಟು ಅಂಗಿ !
785. ಅಚ್ಚ ಬಣ್ಣದಕ್ಕಿ ಕಲ್ಲ ಮೇಲಿಕ್ಕಿ ಕಾರ ಅರೆದು
ಇನ್ನು ರವಷ್ಟು ಬಿಡಕ್ಕ ಚೆನ್ನಾಗದೆ
Answer : ಕೊತ್ತಂಬರಿ ಸೊಪ್ಪಿನ ಕಾರ !
Click on each Riddle to View Answer
786. ಹಸುರು ಸೀರೆಗರ್ತಿ
ಸಂತೇ ಬೀದೀಲರ್ತಿ
ರೊಕ್ಕ ಕೊಟ್ಟರೆ ಬರ್ತಿ
Answer : ಎಸರುಕಾಳು !
787. ಹೋಗ್ವಾಗ್ ಕರಿಬಳೆ ಹಸ್ರಿದನಾ
ರ್ವಾಗಾ ಕೆಂಪದನಾ
Answer : ಕವ್ಳಾ !
788. ಅಬ್ಬೆ ರಾಡಿ ಮಗ್ಳು ಬೋಳಿ
Answer : ಅರೂಕಲ್ಲ !
789. ಚಿಕ್ಕ ಚೀಲದ ಸೀರಮೆ
ಕಲ್ಲಮ್ಮ ಕರೀತಾಳೆ ಬಾರಮೆ
Answer : ಜೀರಿಗೆ !
790. ತರೀಕೆರೆ ಏರಿಮ್ಯಾಲೆ
ಕರಿಕುರಿ ಮೇಯ್ತಿಯ್ತು
Answer : ಹೇನು !
Click on each Riddle to View Answer
791. ಆಗ ಮಾವ ಅಂದ್ನಿಲ್ಲ
ಈಗ ಮಾವ ಅಂದ್ನಿಲ್ಲ
ನನ್ನ ಶಾಟ ಬಂದು
ಅವರ ಹಲ್ಲಿಗೆ ಸಿಕ್ಕೊಂಡಾಗ
ಮಾವ ಅಂದ್ರು
Answer : ಮಾವಿನ ಹಣ್ಣು !
792. ಕಿರಿಗೆರೆ
ಬರಿಗೆರೆ
ತುಂಬಿದ ಕೆರೆ
Answer : ತೆಂಗಿನಕಾಯಿ, ಕೊಬ್ಬರಿ ಗಿಟಗ, ಎಳನೀರು !
793. ಅರಸನ ಹೆಂಡತಿಗೆ ವರ್ಷಕ್ಕೊಂದೇ ಮುಟ್ಟು
Answer : ಗುಡಿಸಲಿಗೆ ವಷ೯ಕ್ಕೊಂದೇ ಬಾರಿ ಹುಲ್ಲು ಹೊದಿಸುವುದು !
794. ಅಡೀಲಿ ಗುಂಜು ನಡು ತಾಮ್ರ
ಮೇಲೆ ಚಿನ್ನದ ಕಿರೀಟ
Answer : ಈರುಳ್ಳಿ !
795. ಅಂಗಿ ಚಡ್ಡಿ ಬಿಚ್ಚಿ ಬಾವಿಗೆ ಬೀಳ್ತಾನೆ
Answer : ಬಾಳೆಹಣ್ಣು !
Click on each Riddle to View Answer
796. ಸಂತೆ ದಾರೀಲಿ ಕೆಂಪವ್ವ ಕೂತವಳೆ
Answer : ತಂಬುಲ !
797. ಕಾಲ ಮ್ಯಾಲ ಮರ
ಮರದ ಮ್ಯಾಲ ಬಳ್ಳಿ
ಬಳ್ಳಿ ಮ್ಯಾಲ ಬೆರಳು
Answer : ವೀಣೆ !
798. ಒಬ್ಬ ಯಜಮಾನ ನೂರಾರು ಸಂತೆ ಆಳುವನು
ಆ ಸಂತೆಗೆ ಯಾರು ಯಜಮಾನ?
Answer : ಆಯಾ ಸಂತೆಯ ವಾರ !
799. ಮೂವತ್ತೆರಡು ಜನ ಅಗಿತ್ತಾರೆ , ಒಬ್ಬ ರುಚಿ ನೋಡ್ತಾನೆ
Answer : ಹಲ್ಲು , ನಾಲಿಗೆ !
800. ಸೊಂಟ ಮುರಕಿ ಸಂತೆಗೆ ಹೋದ್ಲು
Answer : ಸೀಗಡಿಕಾಯಿ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ