ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೯ (801 to 900)
Kannada Riddles Questions & Answers List Part-9 (801 to 900)
Ogatu:
Click on each Riddle to View Answer
801. ಕಾಲುಗಳು ಎರಡಿವೆ ತಲೆ ಇಲ್ಲ
ಎರಡು ಕಾಲಿಗೆ ಬೆರಳುಗಳಿಲ್ಲ
Answer : ಚಡ್ಡಿ !
802. ಮಡಿಸಿದರೆ ಒಂದೇ ಕಣ್ಣು
ರಾಜ್ಯದ ಏರಿಮೇಲೆ
ಬೀಜವಿಲ್ಲದ ಮರಹುಟ್ಟಿ
ರಾಜ್ಯ ರಾಜ್ಯಕೆಲ್ಲ ಹೆಸರಾಯ್ತು
Answer : ಪುಸ್ತಕ !
803. ಹರಿರಗಂಚಿ ಬಿದಿರಮುಳ್ಳು
ಒಳಕ್ಕೆ ನುಗ್ಗಿದರೆ ಹೊರಕ್ಕಿಲ್ಲ
Answer : ಕೊಡಬೆ !
804. ಮಳೆಯಿಲ್ಲೆ ಬೆಳೆಯಿಲ್ಲೆ ಮಯ್ಯೆಲ್ಲಾ ಹಸ್ರು
ಯಲೆಯಿಲ್ಲೆ ಅಡ್ಕಿಲ್ಲೆ ಬಾಯೆಲ್ಲಾ ಕೆಂಪು
Answer : ಗಿಳಿ !
805. ಹೊಲ್ದಾಗ ಹೊಲಾ ಯಾವ ಹೊಲಾ
Answer : ಎರಿಹೊಲಾ !
Click on each Riddle to View Answer
806. ರೊಕ್ಕ ಕೊಟ್ಟು ತರ್ತಾರೆ
ಮುಂದೆ ಕುಳಿತು ಅಳ್ತಾರೆ
Answer : ಉಳ್ಳಾಗಡ್ಡೆ !
807. ಪಾತಾಳದಿಂದ ಬರವ್ಳೆ
ಪಗ್ಡೆಕಾಯಿ ನೆರ್ಯವ್ಳೆ
ಹೆಣ್ಣೇ ನಿನ್ನ ಹೆಸರೇಳು
Answer : ಅಣಬೆ !
808. ಅಗಲಿಸಿದ್ದಕ್ಕೆ ನಿಗರಿಸಿ ಇಟ್ಟರೆ
ಕೆಂಪಗೆ ಹತ್ತಿ ಬೆಳ್ಳಗೆ ಉಳೀತು
Answer : ಒಲೆ, ಸೌದೆ, ಬೆಂಕಿ, ಬೂದಿ !
809. ಮಡಿವಾಳರಿಗೆ ಶತ್ರು
ಮಠದಯ್ಯಗಳ ಮಿತ್ರ
ಕಡುಗಳ್ಳರಿಗೆ ಗಂಡ
ಮಡಿ ಧೋತ್ರಗಳ ಮಿಂಡ
Answer : ಕೌಪಿನ !
810. ಇಲ್ಲೆ ಇದೆ ಕಣ್ಣಿಗೆ ಕಾಣ್ಸೊಲ್ಲ
Answer : ಗಾಳಿ (ಮನಸ್ಸು, ಯೋಚನೆ, ಆಸೆ, ದುರಾಸೆ, ಅದೃಷ್ಟ) !
Click on each Riddle to View Answer
811. ಬೆಳೀ ಸಮುದ್ರದಲ್ಲಿ ಬೆಳೀ ಕಲ್ಲು
Answer : ಮಜ್ಗೆ-ಬೆಣ್ಣೆ !
812. ದಾರಿ ಉದ್ದಕ್ಕೂ ಸಾಲುಮರ
Answer : ಕಣ್ಣು ಹುಬ್ಬಿನ ಕೂದಲು !
813. ಹಗ್ಗ ಹಾಸ್ಯೇನಿ ಎಮ್ಮೀ ಕಟ್ಟೇನಿ
Answer : ಕುಂಬಳ ಬಳ್ಳಿ !
814. ಸಾಸಿರದ ಬಳ್ಳಿ
ಸಾವಿರದ ಬಳ್ಳಿ
ನೀರಲ್ಲಿ ಹಾಕಿದರೆ ನೆನೆಯದ ಬಳ್ಳೀ
Answer : ಕೂದಲು !
815. ತುಂಡೇರಿ ಮೇಲೆ ಸಾಲು ಗೊಬಳಿ ಮರ
Answer : ಕಣ್ಣರೆಪ್ಪೆ ಮತ್ತು ಹುಬ್ಬು !
Click on each Riddle to View Answer
816. ಆನೆಗುಂದಿ ಅರಸು
ಐದು ಮಂದೀ ಕರಸು
ಸಕ್ರಿ ತುಪ್ಪ ತರಿಸು
ಅಗ್ಸಿ ಬಾಗಿಲ ತೆರೆಸು
Answer : ಮುಂಗೈ, ಐದು ಬೆರಳು, ಅನ್ನಸಾರು, ಬಾಯಿ !
817. ಕರಿಯಳ ಖಂಡಾ ತಿಂದ
ಹುಳುಕಿ ತುಪ್ಪಾ ಕುಡಿದ
ಉದ್ದನ್ನವಳ ಹಾಟ ಕುಡಿದ
Answer : ನೇರಿಲ ಹಣ್ಣು, ಜೇನುತುಪ್ಪ, ಕಬ್ಬಿನಹಾಲು !
818. ಹಗಲಲ್ಲಿ ಮಿತ್ರನಾಗುವನು
ಇರುಳಲ್ಲಿ ಶತ್ರು ಆಗುವನು
Answer : ಸೂರ್ಯ !
819. ಬಂಗಾರ ಪೆಟಗ್ಯಾಗ ಬೆಳ್ಳಿ ಲಿಂಗ
Answer : ಹಲಸಿನ ಹಣ್ಣು !
820. ಸಂದೇಗಂಟ ಬಡುದ್ರು ಡಬ್ಬನ್ನಾದಿಲ್ಲ
Answer : ಕಣ್ಣು !
Click on each Riddle to View Answer
821. ಕಲ್ಲು ಕಟ್ಟದ ಬಾವಿ
ಕಪ್ಪೆಮುಟ್ಟದ ನೀರು
Answer : ತೆಂಗಿನಕಾಯಿ !
822. ಅಪ್ಪನದೈತಿ ಭಾರೀ ರುಮಾಲು
ಇಪ್ಪತ್ತು ಜನಾನು ಮಡಚಲಾದ್ರು
ಯಾರೂ ತಲೆಗೆ ಸುತ್ತಲರ್ರು
Answer : ದಾರಿ !
823. ನಾನು ದುಂಡಾಗಿರುವೆ
ಕೈ ಕಾಲುಗಳಿಲ್ಲ
ಬಾಯಿ ಮಾತ್ರ ಇದೆ
ಸುಟ್ಟರೆ ಸಾಯಲಾರೆ
ಬಡಿದರೆ ಬದುಕಲಾರೆ
ಆದರೆ ನಾನು ಯಾರು
Answer : ಮಡಕೆ !
824. ಉತ್ತ ಹೊಲದಲ್ಲಿ ತಿಕ್ಕಡಿಸಿಕೊಂಡು ಮಲಗಿದೆ
Answer : ಉಳುವ ಹಗ್ಗ !
825. ಒಂದು ರೊಟ್ಟಿ ಸುಟ್ಟಿ
ನಿಮ್ಮಪ್ಪನೂ ತಿನ್ನಲ್ಲ
ನಮ್ಮಪ್ಪನೂ ತಿನ್ನಲ್ಲ
Answer : ಜಾಗಟೆ !
Click on each Riddle to View Answer
826. ಗುಡುಗುಡು ಸಿದ್ಧಪ್ಪ
ಮರದ ಮ್ಯಾಲ ಮನಿಕಟ್ಯಾನ
Answer : ಜೇನು ಗೂಡು !
827. ಲಟಪಟ ಲೇಡಿಗೆ ಒಂದೇ ಕಣ್ಣು
Answer : ಸೂಜಿ !
828. ಗಿಡದ ಬಡ್ಡೆ ಗಿಣಿ ಚಾಚಿಕೊಂಡು ಕೂತಿದೆ
Answer : ಮೆಣಸಿನಕಾಯಿ !
829. ಅಯ್ಯಣ್ಣನ ಕುದುರೆಗೆ ಮೈಯಲ್ಲಾ ಗಾಯ
Answer : ಜರಡಿ !
830. ಒಬ್ಬೆ ಮೇಲೆ ಮಂಡಲದ ಹಾವು
Answer : ಕಣಜಕ್ಕೆ ಮಡೆ ಸುತ್ತುವುದು !
Click on each Riddle to View Answer
831. ಗೆರೇಲಿ ಗುರುವ ಮೊಟ್ಟೆ ಇಕ್ಕೀತೇ
Answer : ನತ್ತು !
832. ಹಕ್ಕಿಗೆ ಹಲವಾರು ಕಣ್ಣು
Answer : ದೋಸೆ !
833. ಹೂವುಂಟು ಕಾಯುಂಟು ಎಲೆಯಿಲ್ಲ
Answer : ಪಾಪಾಸುಕಳ್ಳಿ !
834. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ ?
Answer : ನಕ್ಷೆ !
835. ನುಚ್ಚು ನುಚ್ಚು ಅಂಗಡಿ
ನೂರೊಂದು ಅಂಗಡಿ
ಪಚ್ಚೆ ಪಚ್ಚೆ ಅಂಗಡಿ
ಪಾಳೆಯದ ಅಂಗಡಿ
ಎತ್ತ ನೋಡಿದ್ರೂ ಒಂದೇ ಅಂಗಡಿ
Answer : ದಾಳಿಂಬೆ !
Click on each Riddle to View Answer
836. ಅವ್ವ ಮುಳ್ಳಿ , ಮಗಳು ಕೆಂಪ್ಗೆ ಚಂದಾಗವಳೆ
Answer : ಹಲಸು !
837. ಒಬ್ಬನು ಹನ್ನೆರಡು ಮಂದಿಗೆ ಬಡಿಸುವ ತನಕ
ಇನ್ನೊಬ್ಬನು ಒಬ್ಬನಿಗೆ ಬಡಿಸುತ್ತಾನೆ
Answer : ಗಡಿಯಾರ !
838. ಸಾಸಿವೆಯಷ್ಟು ಸಣ್ಣ
ಅದಕ್ಕೆ ಏಳು ಬಣ್ಣ
ಏನದು
Answer : ಬಿಸಿಲು ಕೋಲು !
839. ಯಾತರ ಮನಿ ದ್ವಾಸಿಮನಿ
ತುಪ್ಪಾ ಕೊಡೊ ತವರ್ಮನಿ
Answer : ಜೇನ ಹುಟ್ಟು !
840. ನಾಲ್ಕು ಮೂಲಿ ಚೆದರ ನಾರಾಯಣನ ಬಾವಿ
ಕುಡಿಯೋಣವೆಂದರೆ ತೊಟ್ಟು ನೀರಿಲ್ಲ
Answer : ಬೆಲ್ಲದಚ್ಚು !
Click on each Riddle to View Answer
841. ನೂರಾರು ಗರಿ ಶ್ರೀರಾಮರ ಏರಿ
ಏರಿ ಮೇಲೆ ನಿಂತು ಕೈ ಬೀಸಿ ಕರೆ
Answer : ಕಣ್ಣು ರೆಪ್ಪೆ !
842. ಹಸಿರುಂಟು ಹಾಗಲ ಕಾಯಲ್ಲ
ಮೇಲೆ ಮುಳ್ಳುಂಟು ಹಲಸಿನ ಕಾಯಲ್ಲ
ಒಳಗೆ ತಿರುಳುಂಟು ತೆಂಗಿನ ಕಾಯಲ್ಲ
Answer : ಹರಳು ಕಾಯಿ !
843. ಎಡಕ ಬಲಕ ಗುಡ್ಡ
ನಡಕ ದಾರಿ ಹೊಂಟೈತಿ ಸವಾರಿ
Answer : ಬೈತಲೆ-ಹೇನು !
844. ಹಕ್ಕಲದಾಗ ಹಂಡೆತ್ತು ಬಿದ್ದೈತಿ
Answer : ಕೆರ್ಕಲ ಹಣ್ಣು !
845. ಅಂಗಡಿಡೀಲಿರುತ್ತೆ ಜಂಬುನೇರಳೆ, ಕೊಂಬೋರುಂಟು ತಿಂಬೋರಿಲ್ಲ
Answer : ಸಾಲಿಗ್ರಾಮ !
Click on each Riddle to View Answer
846. ಆಯ್ಯು ಹೊಯ್ಯು ಮಣ್ಣೊಳಗೆ
Answer : ಶುಂಠಿ !
847. ನೀರಿಲ್ಲದ ಸಮುದ್ರ
ಜನರಿಲ್ಲದ ಪಟ್ಟಣ
ಸಂಚಾರವಿಲ್ಲದ ಮಾರ್ಗ
Answer : ಭೂಪಟ !
848. ತಲೆಯಿಲ್ಲದ ಅಜ್ಜ
ಊರಿಂದ ಊರಿಗೆ
ಪ್ರಯಾಣ ಮಾಡ್ತಾನೆ
Answer : ಮರದ ದಿಮ್ಮಿ !
849. ಕಿತ್ತೂರ ಕಿಲ್ಲೆಮ್ಯಾಲೆ ಉತ್ರಾಣಿಕಡ್ಡಿ ಬೆಳದೇತಿ
ಕಿತ್ತರೂ ಬರೂದಿಲ್ಲ ಅತ್ತರೂ ಬರೂದಿಲ್ಲ
Answer : ನಾಲಿಗೆ !
850. ಅಕ್ಕಂಗೆ ಆರು ಕಣ್ಣು
ಮುಕ್ಕಂಗೆ ಮೂರು ಕಣ್ಣು
ನನ್ನಂಥ ಪಾಪಿಗೆ ಒಂದೇ ಕಣ್ಣು
Answer : ಸೂಜಿ !
Click on each Riddle to View Answer
851. ಅಗ್ನಿ ಪ್ರಭುಲಿಂಗನಯ್ಯ
ಗುದ್ದಲಿ ಶಾಂತವೀರಯ್ಯ ಬಂದು
ಎಬ್ಬಿಸಿಕೊAಡು ಬಂದಾರಯ್ಯ
ಬಸವನ ಪಟ್ಟ ಏರಿದೆನಯ್ಯ
ಹೊಸ ಪ್ಯಾಟೀಗೆ ನಡೆದೆನಯ್ಯ
ಅನ್ನ ಶಾಂತವೀರರ ಜೊತೆಗೆ
ಸ್ವರ್ಗಲೋಕ ಸೇರಿದೆನಯ್ಯ
Answer : ಈರುಳ್ಳಿ !
852. ಅರಿ ಅರಿ ರಾಮಗಿರಿ
ಗಿರಿಯಲ್ಲಿ ಯ್ಯಾನು ಸುದ್ದಿ
ರೆಕ್ಕೆವುಂಟು ಹಾರಲ್ಲ
ಕೊಕ್ಕುಂಮ ಕೂಗನ್ನಿಲ್ಲ
ನಾಕು ಪಾದವುಂಟು ವೊದಿನಿಲ್ಲ
Answer : ಮಂಚ !
853. ಆರು ಕಾಲು ಹೋತ ಭಾರೀ ಖ್ಯಾತ
ನೀರು ಕಂಡತಾವ ನಿಂತ
Answer : ಜೋಡು !
854. ಹೊಡ ಹೊಡ್ದಾಕಿರೂ ಕಯ್ಮುಗೀತು
Answer : ನಾಚಿಕೆ ಮುಳ್ಳು !
855. ಕಾಠೆವಾಡದಿಂದ ಎರಡ ಕ್ವಾಣ ತಂದಾರ
ಎಡಕಿಂದ ಬಲಕ ಬರಲ್ದು
ಬಲಕಿಂದ ಎಡಕ ಬರಲ್ದು
Answer : ಚಪ್ಪಲ್ಲ !
Click on each Riddle to View Answer
856. ಅಟ್ಟಂ ಬಟ್ಟಂ ಆರ್ಯಾಣನಾದಾಗ ಅಕ್ಕವ್ವ ಹಾಸು ಹೊಯ್ತಾಳ
Answer : ಕೂರಿಗೆ !
857. ಬೆಳಕಾಗಲಿ ಬೆಳಕಾಗಲಿ ಎನ್ನುತ್ತದೆ ಒಂದು
ಬೆಳಗಾಗದಿರಲಿ ಬೆಳಗಾಗದಿರಲಿ ಎನ್ನುತ್ತದೆ ಇನ್ನೊಂದು
ಬೆಳಗಾದರೇನು ಬೆಳಕಾಗದಿದ್ದರೇನು ಎನ್ನುತ್ತದೆ ಮತ್ತೊಂದು
Answer : ಹಾಸಿಗೆ, ಒಲೆ, ನೆಲ !
858. ಸೆರಗಿಲ್ಲದ ಸೆಲ್ಲೆ
ಬೀಜಿಲ್ಲದ ಪಲ್ಲೆ
ನೆಚ್ಚಿಲ್ಲದ ಹೆಂಗಸ
ನಿಧಾನಿಲ್ಲದ ಗಂಡಸ
Answer : ಬಿಸಿಲ, ಶ್ಯಾವಿಪಲ್ಲೆ, ನದಿ, ಸೂರ್ಯ !
859. ಕೇನಾನ್ಹಳ್ಳಿಯಿಂದ ಒಂದೆಮ್ಮೆ ತಂದೆ
ಖಂಡುಂಟು ಮೂಳಿಲ್ಲ
Answer : ರೇಷ್ಮೆ ಹುಳು !
860. ಹಕ್ಕಿ ಹರ್ತಿತ್ತು
ಪುಕ್ಕ ಮೆಡೀತಿತ್ತು
ನನ್ನ ನೋಡ್ತಿತ್ತು
ನಿನ್ನ ಮಾಡ್ತಿತ್ತು
Answer : ಬಂದೂಕು !
Click on each Riddle to View Answer
861. ಗಡಗಡ ಅಂದ್ರೆ ಗಾಡಿಯಲ್ಲ, ಸರಸರ ಅಂದ್ರೆ ಸರ್ಪವಲ್ಲ
ಕುತ್ಗೆ ಇಡಿದ್ರೆ ಮನುಷ್ಯ ಅಲ್ಲ
Answer : ಬಾವಿಯಿಂದ ನೀರು ಸೇದುವುದು, ತಿರುಗಣ, ಹಗ್ಗ, ಬಿಂದಿಗೆ !
862. ಮಳೆ ಆದರೂ ಹಚ್ಚಗ ಆಗದಿದ್ದರೂ ಹಚ್ಚಗ
ಎಲೆ ತಿಂದರೂ ಕೆಂಪಗ ತಿನ್ನದಿದ್ದರೂ ಕೆಂಪಗ
Answer : ಗಿಳಿ !
863. ಆಕಳೈತಿ ಬಾಲಿಲ್ಲ
ಕರಾ ಉಣತೈತಿ ಮಲಿ ಇಲ್ಲ
ಹಿಂಡ ಐತಿ ಕಾವಲಿಲ್ಲ
ಜಪ್ಪಿಸುವ ಕಳ್ಳಗ ಕಾಲಿಲ್ಲ
Answer : ಕಪ್ಪೆ, ಹಾವು !
864. ಅಮ್ಮನ ಸೀರೆ ಭಾರೀ ಸೀರೆ
ನೀಲಿ ನೀಲಿ ಸೀರೆ
ನಿರಿಗೆ ಎಣಿಸೋಕೆ ನಾರಾಯಣನಿಗೂ ಆಗೊಲ್ಲ
Answer : ಸಮುದ್ರ !
865. ಗುಗ್ಗರ ಮೈ ಗುಲಗುಂಜಿ ಕಣ್ಣು
ಕೆಸರಾಗ ಕಿಸಗಾಲ ಹಾಕಿ ನಡೀತಾರ
Answer : ಕಪ್ಪೆ !
Click on each Riddle to View Answer
866. ಅಂಗೈ ಅಗಲ ಕಣ
ಆ ಕಣದ ತುಂಬ ರಾಶಿ
ಬಂದ್ ಬಂದವರೆಲ್ಲ
ಅದಕ್ಕೆ ಶರಣಾರ್ಥಿ
Answer : ಚಿಲುಮೆ, ಬಂಗಿಸೊಪ್ಪು ಸೇದುವವರು !
867. ಅತ್ತಲಿಂದ ಬಂದೆ
ಮುತ್ತಿನ ಗುಡಾರ ಹುಯ್ದೆ
ಪಾಪಿ ಕೈಗೆ ಸಿಕ್ಕಿದೆ
ಪಲಾಯನವಾದೆ
Answer : ಜೇನು !
868. ನಾರಿ ನೀ ನೀರಿಗಿ ಹೋಗಬ್ಯಾಡ
ನೀರಾಗ ಕಾಲಿಡಬ್ಯಾಡ
ನೀರಿಲ್ಲದ ಮನಿಗೆ ಬರಬ್ಯಾಡ
Answer : ಟೆಂಗ !
869. ಟಾಕು ಟೀಕಿನ ಮನೆ ಟಗರುಗಂಟಿನ ಮನೆ
ಹೆಂಚು ಹಾಕದ ಮನೆ ಕೆಂಪು ಬಣ್ಣದ ಮನೆ
ಬಾಚಿ ಮುಟ್ಟದ ಮನೆ ಬಡಗಿ ಕಟ್ಟದ ಮನೆ
Answer : ಹುತ್ತ !
870. ಕೂತುಗೊಂಡು ತೂತಕ್ಕೆ ಬಿಡುತ್ತಾರೆ
Answer : ರಾಗಿ ಕಲ್ಲಿನ ತೂತಿಗೆ ರಾಗಿ ಬಿಡುವುದು (ಬೀಸುವಾಗ) !
Click on each Riddle to View Answer
871. ಇಡಿ ರ್ಸು ಟ್ರುವಾ ಬಟ್ನ ಜನ್ನವ್ರೆ ಸುಡ್ತಿಲ್ಲೆ
Answer : ದಾರಿ-ಬೆಟ್ಟದ್ದು !
872. ಹಗ್ಗ ಮೇಯ್ತದೆ ಕೋಣ ಬಿದ್ಕೊಂಡದೆ
Answer : ಕುಂಬಳಕಾಯಿ !
873. ಬತ್ ಮರ್ನ ಮನೆ ಬಸಪ್ಪ ಕುಣೀತೀದ
Answer : ಕುಡ್ಲೆ !
874. ಮೂಡಲಿಂದ ಬಂತು
ಗೂಡು ತುಂಬ ಮೊಟ್ಟಿಯಿಕ್ಕಿತು
Answer : ಬೆಂಕಿ !
875. ಬಾಲ ಹಿಡಿದರೆ ಗುರುಗುಟ್ಟುತ್ತೆ
Answer : ಬೀಸುವ ಕಲ್ಲು !
Click on each Riddle to View Answer
876. ಕಾಯಿ ಖನ್ನ ಖನ್ನ
ಹೂವ್ವ ಚಿನ್ನಚಿನ್ನ
ಗೋಕುಲಮಡ್ಡ ಕಡ್ಡ ತಿಡ್ಡ
Answer : ಹಾಗಲಕಾಯಿ !
877. ಹೋಗಕಾರೆ ಸಣ್ಣಾ ಬರಾಕಾರೆ ದೊಡ್ಡಾ
Answer : ಕಲ್ಲಿ !
878. ಒಬ್ಬ ಅಜ್ಜಿಗೆ ಒಕ್ಕಳು ಬಟ್ಟೆ
Answer : ಕೋಳಿ ಪುಕ್ಕ !
879. ಮಜ್ಜಿಗೆಯ ಮೊಮ್ಮಗಳು ಅಜ್ಜಿಯ ಅಧೀನದಲ್ಲಿರುವವಳು
ಸಜ್ಜಿಗೆಯ ಊಟಕ್ಕೆ ಬೇಕಾಗುವವಳು
Answer : ತುಪ್ಪ !
880. ಅಕ್ಕ ತಂಗೀರ ಮನೆಗೆ ಒಂದೇ ಗೂಡು
Answer : ಮೂಗು !
Click on each Riddle to View Answer
881. ಇರೋದು ಗೋಳಾಕಾರ | ಬಾಯಿಗೆ ವೃತ್ತಾಕಾರ | ಬಡಿದರೆ ಬದುಕಲಾರೆ | ಸುಟ್ಟರೆ ಸಾಯಲಾರೆ ನಾನು ಯಾರು ?
Answer : ಗಡಿಗೆ !
882. ಕಟ್ಟೆ ಇಲ್ಲದ ಕೆರೆಯಲ್ಲಿ
ತಟ್ಟೆ ತೇಲಿ ಹೋಯಿತು
Answer : ಚಂದ್ರ !
883. ಹೆಟ್ಟದು ಎದ್ದು ಕುಂದ್ರೋದು
Answer : ಸೇರು !
884. ನರ್ನಲ್ಲಿ ಒಂದು ನೀರಂಜಿ ಮರ ಅದೆ
ನೀರ್ ಕುಡಿತದೆ ಬೇರ್ ತಿನ್ತದೆ
Answer : ದೀಪ !
885. ಇಟ್ಟು ಬೆರೆಸ್ದಾಗ ನೀರಾಕತೀಮಿ
ನೀರೇ ಬೆರೆಸ್ದಾಗ ಯಾನಾಕಾಳಾದು
Answer : ತೆಪ್ಪ !
Click on each Riddle to View Answer
886. ಬಗ್ಗಿದರೆ ಮೊಗ್ಗು ಎದ್ದರೆ ಹುವ್ವ
Answer : ಕೊಡೆ !
887. ಮಣ್ಣಾಗೈತಿ ಚಿನ್ನದ ಬೇರು
Answer : ಅರಿಷಿಣ !
888. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ
Answer : ಬಳೆ !
889. ಛೀ ಛೀ ರಂಡೆ
ಕೈಯೆಲ್ಲ ಹರಕೊಂಡೆ
ಹಸರ ಕುಬುಸದ ಮ್ಯಾಲ ಬಂಗಾರ ಗೊಂಡೆ
Answer : ಕುಸಬಿ ಹೂ !
890. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ
Answer : ಸೂಜಿದಾರ !
Click on each Riddle to View Answer
891. ಎಲಿಕಿಂತ ಎಲಿಸಣ್ಣ ನಾಗರ ಬಣ್ಣ
ಹೇಳಿದರ ನನ್ನ ತಮ್ಮ
ಹೇಳದಿದ್ದರ ನನ್ನ ಹೆಂಡತೀ ತಮ್ಮ
Answer : ವಡ್ಯಾನ ಕಂಟಿ !
892. ಅಂತಪ್ಪನ ತೋಟದಾಂಗೆ
ಇಂತಪ್ಪನ ಮಾವಿನ ಮರ
ತೊಟ್ಟಿಲ್ಲ ತುದಿಯಿಲ್ಲ
Answer : ರಾಗಿಕಾಳು !
893. ಸಣ್ಬಾವೆ ಬಿಳ್ಗಲ್ಚೂರ
Answer : ಬಾಯ- ಹಲ್ಲ !
894. ಮಂಡಲದ ಗುಡ್ಡ
ಮಸಾಣದ ಹೊಲಕ್ಕೆ ಮಧ್ಯೆ ಒಂದು ನರಿ
ನರೀ ತಲೆ ಮೇಲೆ ಒಂದು ಸಿಂಗಾರದ ಗರಿ
Answer : ಈರುಳ್ಳಿ ಪೈರು !
895. ಏಳೇಳು ಗೆಳತಿಯರು ಸಾಲಾಗಿ ಮಲಗಿದ್ದು
ಒಟ್ಟಿಗೆ ಉಸಿರಾಟ ಮಾಡುತ್ತಲಿರುವಾಗ
ಮುಟ್ಟಿದರೆ ಹೇಳುವೆವು ನಮ್ನಮ್ಮ ನಾಮ
ಒಂದೊಂದು ಹೆಸರಿರುವ ನಾವಾರೊ ಕಾಮಾ
Answer : ದೀಪ !
Click on each Riddle to View Answer
896. ಪೆಟ್ಟಿಗೆಯಲ್ಲಿನ ಕಳ್ಳ
ಬಾಗಿಲು ತೆರೆದರೂ ಹೊರಗೆ ಬರುವುದಿಲ್ಲ
Answer : ಕಣ್ಣು ಗುಡ್ಡೆ !
897. ಅಂಗೈಯೊಂದು ಕಣ
ಅರ್ಧ ಚಮಚೆ ರಾಸಿ
ಬಾಯಿಗದು ಬೇಸಿ
Answer : ಹಲ್ಲುಪುಡಿ !
898. ಕಾಗೆಗಿಂತ ಕಪ್ಪು
ಸುಣ್ಣಕ್ಕಿಂತ ಬಿಳಿ
ನೋಡಿದರೆ ಸಣ್ಣದು
ಸಮುದ್ರಕ್ಕಿಂತ ದೊಡ್ಡದು
Answer : ಕಣ್ಣು !
899. ಮುಕಳಿಲೆ ತಿಂದ
ಬಾಯಿಲೆ ಉಗಳ್ತೈತಿ
Answer : ಮದ್ದ !
900. ನೆಲದಗಲ ಕೂರಿಗೆ
ಮುಗಿಲಗಲ ಬಟ್ಟಲು
ಬಿತ್ತೋದು ಕಾಣಲ್ಲ
ಭೂಮಿ ತುಂಬ ಬೀಜ ಮಾತ್ರ ಇಟ್ಟಾಡ್ತವೆ
Answer : ಮಳೆಹನಿ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ