2. ಕೈ ಕೆಸರಾದರೆ ಬಾಯಿ ಮೊಸರು – ಅರ್ಥ-ವಿವರಣೆ – ವಿಸ್ತರಣೆ – ತಾತ್ಪರ್ಯ – ಕನ್ನಡ ಗಾದೆ (Kai kesaradare bayi mosaru) Kannada Proverb Meaning

ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)

2. ಕೈ ಕೆಸರಾದರೆ ಬಾಯಿ ಮೊಸರು ( Kai kesaradare bayi mosaru )

ಕೈ ಕೆಸರಾದರೆ ಬಾಯಿ ಮೊಸರು. ಕೈ ಕೆಸರಾಗುವುದು ಎಂದರೆ ಒಂದು ನುಡಿಗಟ್ಟು.

ಮಾತಿನ ಹೊರ ಅರ್ಥದಲ್ಲಿ ಇನ್ನೊಂದು ಒಳ ಅರ್ಥ ಅಡಗಿರುವುದು ನುಡಿಗಟ್ಟಿನ ವೈಶಿಷ್ಟ್ಯಗಳಲ್ಲಿ ಒಂದು. ಕೈಕೆಸರಾಗುವುದು ಎಂದರೆ ಕಷ್ಟದಲ್ಲಿ ದುಡಿಯುವುದು ಎಂದರ್ಥ. ಹೊಲ ಗದ್ದೆ ತೋಟಗಳಲ್ಲಿ ಮೈಬಗ್ಗಿಸಿ ಕೆಲಸ ಮಾಡಿದಾಗ ಕೈ ಕೆಸರಾಗುವುದು ಸಹಜ. ಯಂತ್ರೋಪಕರಣ ರಿಪೇರಿ. ಕಾರ್ಖಾನೆಗಳು ಮೊದಲಾದ ಕಡೆ ದುಡಿಯುವಾಗ ಕೈಗಳಿಗೆ ಕೊಳೆಯಾಗುವುದು ಸ್ವಾಭಾವಿಕ.

ಪ್ರತಿಯೊಬ್ಬರು ತಮ್ಮ ತಮ್ಮ ಜೀವನ ನಿರ್ವಹಣೆಗೆ ಒಂದೊಂದು ಕೆಲಸವನ್ನು ಮಾಡುವಾಗ ಆ ಕೆಲಸದಲ್ಲಿ ಪ್ರತಿಫಲ ಇರುವ ಹಾಗೆಯೇ ಸಾಕಷ್ಟು ಕಷ್ಟನಷ್ಟಗಳೂ ಇರುತ್ತವೆ. ಕೂಲಿ, ರೈತ, ಕಾರ್ಮಿಕ ಮುಂತಾದವರ ಕೆಲಸಗಳೆಲ್ಲ ದೈಹಿಕ ಶ್ರಮದಿಂದ ಕೂಡಿರುತ್ತದೆ. ಇಂತಹ ದೈಹಿಕ ಶ್ರಮದ ದುಡಿಮೆಯನ್ನು ಬಸವಣ್ಣನವರು “ಕಾಯಕ” ಎನ್ನುತ್ತಾರೆ. ಕಾಯಕವೇ ಕೈಲಾಸ ಎಂಬುದು ಬಾಳಿಗೆ ಪ್ರಗತಿಸೂತ್ರ. ಕಷ್ಟಗಳು ಬರುವವೆಂದು ಕೆಲಸ ಮಾಡದೆ ಬದುಕಲಾಗದು.

ಕೈ ಕೆಸರಾಗುವುದೆಂದು ರೈತ ಬೆಳೆಯನ್ನು ಬೆಳೆಯದಿರಲಾದೀತೇ? ರೈತ ಕೈ ಕೆಸರುನ್ನು ಗಮನಿಸದೆ ಮುಂದೆ ಸಿಗುವ ಪ್ರತಿಫಲದ ನಿರೀಕ್ಷೆಯು ಅವನನ್ನು ಕಷ್ಟ ಪಡಲು ಪ್ರೇರೇಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿದರೆ ಫಲ ದೊರೆಯಲು ಸಾಧ್ಯ. ಪರಿಶ್ರಮವಿಲ್ಲದೆ ಪ್ರತಿಫಲವಿಲ್ಲ.

ಇದು “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆಯ ಅರ್ಥ.

Leave a Comment