ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೧ (1 to 100)
Kannada Riddles Questions & Answers List Part-1 (1 to 100)
Kannada Ogatugalu:
Click on each Riddle to View Answer
1. ತಾತಾಗರಿ ತಾಮ್ರದ ಗರಿ
ನೀರಾಗ ಬಿಟ್ಟರ ತೇಲದ ಗರಿ
ಹೊರಗ ಬಂದರ ಬದುಕದ ಗರಿ
Answer : ಮೀನು !
2. ಬೆಳಿ ಸಮದ್ರಲ್ಲಿ ಕರೀ ಬೋಟಿ
Answer : ಕಣ್ಣು !
3. ಎತ್ತಿನ ಮ್ಯಾಲ ಒಜ್ಜಿ
ಹೇರದ ಮಾಲಕಗ ಗೊತ್ತಿಲ್ಲ
ಹೇರಸಿಕೊಂಡ ಎತ್ತಿಗೆ
ಮೊದಲೆ ಗೊತ್ತಿಲ್ಲ
ನನಗರೆ ಯೇನ ಗೊತ್ತ
Answer : ಬಸರ ಹೆಣ್ಣಮಗಳ !
4. ದದ್ದುಗುಂಬಳ ದಾದಿಗುಂಬಳ ಊರಿಗೆಲ್ಲ ಒಂದೇ ಕುಂಬಳ
Answer : ಮೋಡ !
5. ಹಾಳು ಬಾವೀಲಿ ಹದ್ದು ಉಡುಕುತ
Answer : ಅರಳು ಹುರಿಯುವುದು !
Click on each Riddle to View Answer
6. ಹಾರಿದರೆ ಹನುಮಂತ
ಕೂಗಿದರೆ ಹೆಬ್ಬುಲಿ
Answer : ಕಪ್ಪೆ !
7. ಅಂತರದ ಸೂಳೆ
ಆಕಾಶದ ಮಿಂಡಗಾರ
ಭೂಮಿ ತೂಕದಲ್ಲಿರೋ ಸೂಳೆ ಎಲ್ಲರ್ನೂ ಕೆಡಿಸಿದಳು
Answer : ಎಲೆ, ಅಡಿಕೆ, ಹೊಗೆಸೊಪ್ಪು !
8. ಸತ್ತ ಎತ್ತು ಗುಟುರು ಹೊಡೀತು
Answer : ಡೋಲು !
9. ಗಿಡ್ಡನ್ನ ಹುಡುಗ ಅಡ್ಡ ಬಿದ್ದಾನ
Answer : ಹೊಸ್ತಿಲು !
10. ಊರೆಲ್ಲಾ ಅಲಿತಾನೆ , ಜಗಳ ಹುಟ್ಟಿಸಿ ಬರಾನೆ
Answer : ನಾರು !
Click on each Riddle to View Answer
11. ಹಂದರ ತುಂಬಾ ಹಸರೆಲೆಯಾಗಿ
ಕಂಬ ಕಂಬಕ ಮಲೀ ಬಂದು
ಬಂದ ಬೀಗರೆಲ್ಲಾ ಬಸರಾಗಿ ಹೋಗ್ತಾರ
Answer : ಹತ್ತಿ ಬಿಡಿಸುವ ಕ್ರಿಯೆ !
12. ಸಾವಿರಾರು ಹಕ್ಕಿಗಳು
ಒಂದೇ ಸಾರಿಗೆ ನೀರಿಗಿಳೀತವೆ
Answer : ಅನ್ನಕ್ಕೆ ಅಕ್ಕಿ ಹಾಕುವುದು !
13. ಅಂಗೈ ಅಗಲ ಹೊಲ
ಮುಂಗೈ ಅಗಲ ಬದ
ಹಿಂಗಿದಂಗೆ ಹಿಂಗಿದಂತೆ ನೀರು ಬಿಡ್ತಾ ಇರಬೇಕು
Answer : ದೀಪ !
14. ಕಾಲಿಲ್ಲದಲೆ ಹರಿಗು, ತೋಳಿಲ್ಲದಲೆ ಹೊರುಗು । ನಾಲಿಗಿಲ್ಲದಲೆ ಉಲಿವುದಿದ ಕನಿಕುಲದ । ಮೇಲುಗಳೆ ಪೇಳಿ ಸರ್ವಜ್ಞ ।।
Answer : ನದಿ !
15. ಬೆಳ್ಳಿ ಡಾಬು ಚಿನ್ದ್ ಕವ್ಚಾ
Answer : ಬಾಳೆ ಗೊನೆ-ಹಣ್ಣು !
Click on each Riddle to View Answer
16. ಚಿ೦ತಾಮಣಿ ಕೆರೇಲಿ ಚಿಣಿಮಿಣಿ ಹಕ್ಕಿ, ಕೆರೆ ಬತ್ತಿದರೆ ಹಕ್ಕಿ ಹಾರಿ ಮಾಯ
Answer : ಎಣ್ಣೆ, ದೀಪ !
17. ಇಂದುಟ್ದ್ ಬಾಲೆ ಮರಾ ಹತ್ತ್ಯಾ ಇಳೀತ್ಯಾ
Answer : ಚಿವ್ಳೆ !
18. ತೆಗ್ಗಿನಾಗ ಬಸರಾಗ್ತದ
ಒಡ್ಡಿಗಿ ಬಂದ ಹಡಿತದ
Answer : ಕಪಲಿ !
19. ಕರಿ ಕಲ್ಲಿನ ಮೇಲೆ ಬಿಳೀ ರಂಗೋಲೆ ಹಾಕಿ
ಪಟ್ಟಣದ ಸೂಳೆ ಪಗಡೆ ಆಡ್ತಾಳೆ
Answer : ಮಡಕೆ, ಮೊಸರು, ಮಂತು !
20. ನೆಲದಲ್ಲಿ ಹುಟ್ಟಿ ನೆಲದಲ್ಲಿ ಬೆಳದು
ನೆಲವು ತಾಗಲು ನನ್ನ ಪರಿಮಳವೆ ನಾಶ
Answer : ಬೇವಿನ ಸೊಪ್ಪು !
Click on each Riddle to View Answer
21. ಒಂದು ಮರ ಹುಟ್ಟಿ ಒಂಬತ್ತು ಕವಲೊಡೆದು
ಅದರ ಒಂದು ಕೊನೆಯಲ್ಲಿ ಹದಿನೈದು ಬಿಳಿದು ಹದಿನೈದು ಕರಿದು
Answer : ಸೂರ್ಯ, ನವಗ್ರಹಗಳು, ಚಂದ್ರ, ಶುಕ್ಲಪಕ್ಷ, ಕೃಷ್ಣಪಕ್ಷ !
22. ನೀರಿದ್ದು ಕೆಪ್ಪೆಲ್ಲೆ ಟೊಪ್ಪಿದ್ದು ಪೋಲಿಸ್ನಲ್ಲೆ
Answer : ತೆಂಗು !
23. ತಾತ್ಯಾನ ತೂತ್ಯಾರ ಇಬ್ಬರ
ಚಂದಾನ ಚೆಲುವ್ಯಾರ ಇಬ್ಬರ
ಗದಿಗ್ಯಾನ ಗುದುಗ್ಯಾರ ಇಬ್ಬರ
Answer : ದೋಸಿ, ಹೋಳಿಗಿ, ಕರ್ಚಿಕಾಯಿ !
24. ಡಬಲವ್ವ ಡುಬಲವ್ವ ಇಬ್ಬರು
ಹುಳಕವ್ವ ಟೊಕರವ್ವ ಇಬ್ಬರು
ಸುಗುಣ ಸುಂದರಿ ಇಬ್ಬರು
Answer : ಕರ್ಚಿಕಾಯಿ, ಪುರಿ, ದೋಸೆ, ಬ್ರೆಡ್, ಹೋಳಿಗೆ !
25. ಒಂದ ಕಾಯಿ ಮೂರ ಬ್ಯಾಳಿ
Answer : ಔಡಲ ಕಾಯಿ !
Click on each Riddle to View Answer
26. ಬೆಲ್ಲದ ಗಡಿಗ್ಯಾಗ
ಒಂದಾ ಗೂಗಿ ಕುಂತದ
Answer : ಖಾರಿಕ ಬೀಜ !
27. ಹೆಟ್ಟುವುದು ಮೂರು ಬೆಟ್ಟು
ಬೀಳುವುದು ಒಂದು ತೊಟ್ಟು
Answer : ಎಣ್ಣೆ-ತುಪ್ಪ !
28. ಹಸುರಂಗಿ ಅಮಲ್ದಾರ
ಗಿಣಿಮಾತಿನ ದಫೇದಾರ
ಯುಗಾದಿ ಮಾಡಿಕೊಂಡು
ತಗಾದಿಗೆ ರ್ತಾನೆ ಶೇಕದಾರ
Answer : ಮಾವಿನಕಾಯಿ !
29. ನೂರಾರು ಗೋಡೆಗಳ ಮನೆ
ಮನೆಗಿರುವುದು ಗೋಡೆಯಷ್ಟೇ ದೊಡ್ಡ ಬಾಗಿಲು
ಮುಂದೊಂದು ಹಿಂದೊಂದು
Answer : ಪುಸ್ತಕ !
30. ಬಿಳಿ ಹುಡುಗಿ ಹಿಡಿಯೋಕೆ ಹೋದ್ರೆ ಜಾರ್ಕೊಳ್ತಾಳೆ
Answer : ಪಾದರಸ !
Click on each Riddle to View Answer
31. ಮುಟ್ಟಿದರೆ ಮೈಯೆಲ್ಲ ಮುಳ್ಳು
ಅದನ್ನು ಬಿಚ್ಚಿದರೆ ಸವಿಯಾದ ವಡೆ
Answer : ಹಲಸಿನ ಹಣ್ಣು !
32. ಮಗಳು ಮಾ ಚಲುವಿ
ತಾಯಿ ಅಂಡ್ಹರಿಕಿ
ಮಗಳು ಮಾ ಚಲುವಿ
ತಾಯಿ ತಟ್ಲಿಹಂತಾಕಿ
Answer : ಕ್ಯಾರಹಣ್ಣು, ಸುಣ್ಣದ ಹಣ್ಣು-ಬಾರೀಹಣ್ಣು-ಕುಸುಬೆ, ಗುಲಾಬಿಹೂ !
33. ಕರಿ ನೆಲದಲ್ಲಿ ಬಿಳೀ ಗೂಟ
Answer : ಮೂಲಂಗಿ !
34. ಗದ್ದೆ ಒಂದು
ಗರಿ ನಾಲ್ಕು
ದಿನಸು ಐದು
Answer : ಕೆಚ್ಚಲು, ಮೊಲೆಗಳು, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ !
35. ಅಪ್ಪಾ ಹಾಕ್ತಾನ ಅವ್ವ ಹೊಯ್ಕೊಳ್ಳತಾಳ
Answer : ಕಚ್ಚೆ-ನಿರಿಗೆ !
Click on each Riddle to View Answer
36. ಹರಾಯದಲ್ಲಿ ಹಸಿರು ಪರಾಯದಲ್ಲಿ ಕೆಂಪು
Answer : ಗದ್ದೆ !
37. ಕೊಕ್ಕರೆ ತಿಕ್ಕೆ ಸಕ್ಕರೆ ತುಂಬಿದ್ದಕ್ಕೆ
ಕುಣಿಗಲ್ ತಕ ಕೂಗ್ಕೊಂಡು ಹೋಯ್ತು
Answer : ಬಂದೂಕ !
38. ನೆಲದಗಲ ಕೂರಿಗಿ
ಮುಗಿಲಗಲ ಬಟ್ಟಲ
ಬಿತ್ತೋದ ಕಾಣುದುಲ್ಲ
ಭೂಮಿತುಂಬ ಬೀಜ
Answer : ಮಳೆ !
39. ಯಲೆ ಪಿಣಿ ಪಿಣಿ ಕಾಯಿ ಜಲಾ ಮಲಾ
Answer : ಹುಣಸೆ !
40. ತಟ್ಟಂ ತುದೀಲಿ ಪುಟ್ಟಮ್ಮ ಕೂತವಳೆ
Answer : ಮೂಗುತಿ !
Click on each Riddle to View Answer
41. ಸೆಣಬ್ನಂಗೆ ಬಂದವೆ
Answer : ನರೆ !
42. ಆರ್ಗಂಚಿ ಬಿದರ್ಮುಳ್ಳು
ನುಗ್ಬೋದು ಕಡಿಬಾರ್ದು
Answer : ಕೊಡಬೆ !
43. ಹುಟ್ಟುತ್ಲೆ ಲಟಗಿ ಹೊಡಿತೈತಿ
Answer : ನುಚ್ಚು !
44. ಮರವೂ ಕೋಲಾಡ್ತು
Answer : ನುಗ್ಗೆ !
45. ಬಾಜಾರದಾಗ ಕುಂತು ಬಾವಾ ಅಂತಾನ
Answer : ಮಾವಿನ ಹಣ್ಣು !
Click on each Riddle to View Answer
46. ಒಬ್ಬ ರಾಜನ ಮನಿಗೆ ಭಿಕ್ಷುಕ ಹೊಗಿದ್ದ
ಅವಾಗ ರಾಜ ಹೇಳಿದಾ “ ಈಗ ಬ್ಯಾಡಾ
ಹೋಳಿಹುಣ್ಣಿವಿ, ಅಲಾಹಬ್ಬ, ಸೀಗೀ ಹುಣ್ಣಿವಿ ಕೂಡಿ
ಬಂದಾಗ ಬಾ ಕೋಡತೀನಿ” ಅಂದ, ಆದರ ಯಾವಾಗ?
Answer : ಸತ್ತಾಗ !
47. ಕೆರ್ಯಾಗ ಕ್ಯಾಕರಸತೈತಿ
ಗುಡ್ಯಾಗ ಗುಣಗುಣಸತೈತಿ
Answer : ಕಪ್ಪೆ, ಗಂಟೆ !
48. ಒಂದು ಚಿಪ್ಪು ಹುಳ್ಳಿಕಾಳು
ನಮ್ಮಪ್ಪನೂ ತಿನ್ಲಾರ
ನಿಮ್ಮಪ್ಪನೂ ತಿನ್ಲಾರ
Answer : ತಿಗಣೆ !
49. ಒಂದು ಬಿಟ್ಟೆ
ಎರಡು ಹಿಡಿದೆ
Answer : ಕವೆಗೋಲು, ಹಿಟ್ಟಿನಕೋಲು !
50. ಹಸಿರು ಕೊಡದಾಗ
ಸಿಹಿನೀರು ತುಂಬೈತಿ
Answer : ಎಳ ತೆಂಗಿನಕಾಯಿ !
Click on each Riddle to View Answer
51. ಪುಟ್ಟ ಪೋರಂಗೆ ಮಣ್ ಕೆಲ್ಸಾ
Answer : ವರ್ಲೆ !
52. ಕೆರೆ ಏರಿ ಮ್ಯಾಲೊಂದು ಎಸ್ಲಲ್ಗೆಡ್ಡೆ ವುಟ್ಟಿ
ಎಸ್ಲೊಂಬತ್ತು ಕುಸ್ಲೊಂಬತ್ತು
ಆಗ ಎಂಟ್ನೋರು ಗುಂಟೊಂಬೈನೂರು
ವಂಟ ವೊಡದ್ರೆ ಅರ್ವಾಣ್ತುತುಪ್ಪ
ಅರವತ್ತು ಕಜ್ಜಾಯ
Answer : ಗೆಣಸು !
53. ಕರಿಯ ಕುಳ್ಳನಿಗೆ ಬಿಳಿಯ ಹರಿನಾಮ
Answer : ಉದ್ದಿನ ಕಾಳು !
54. ಆರು ಕಾಲ ಅಂಕಣ್ಣ
ಮೂರು ಕಾಲು ದೊಂಕಣ್ಣ
Answer : ನೊಣ !
55. ಅವ್ವನ ಮುಂದೆ ದೆವ್ವ ಒದ್ದಾಡತೈತಿ
Answer : ಕಡುಬು !
Click on each Riddle to View Answer
56. ಅವ್ವಗೆ ಆರು ಮೊಲೆ
ಮಗಳಿಗೆ ಮೂರು ಮೊಲೆ
Answer : ಬಾಗಿಲ ಮೊಳೆ !
57. ಊರಿಗೆಲ್ಲಾ ಒಂದೇ ಕಂಬ್ಳಿ
Answer : ಆಕಾಶ !
58. ಒಂಟಿ ಗೋಡಿನ ಎಮ್ಮಿ
ಭೂಮಿಯೆಲ್ಲಾ ತಿರುಗಾಡಿ ಬರತೈತಿ
Answer : ಕುಡಗೋಲ !
59. ಬಂಗಾರ ಬಿಡಿಸಿ ಬೆಳ್ಳಿ ತಿಂತಾರ
Answer : ಬಾಳೇಹಣ್ಣು !
60. ಹುಲ್ಲಾಗ ಹುಲಿ ಮಲಗೇತಿ
Answer : ಮಾವಿನ ಹಣ್ಣ !
Click on each Riddle to View Answer
61. ಉದ್ದುದ್ದವನೇ ಉರಿಮುಖದವನೆ
ಸುದ್ದೀ ಹೇಳೋ ಸೂಳೆಮಗನೇ
ಬಾಯಿ ತೆರೆಸೋ ಬಾಡ್ಯಾನ ಮಗನೆ
Answer : ಮೆಣಸಿನಕಾಯಿ !
62. ಸುಣ್ಣದ ಗಡಿಗಿ ಸುತ್ಹಾಕಾಕ ಬರುದುಲ್ಲ
ಹುಣಚಿಪಕ್ಕಾ ಎಣಸಾಕ ಬರುದಲ್ಲ
ಬಿದರ ಬೆತ್ತಾ ಹಿಡ್ಯಾಕ ಬರುದಲ್ಲ
ನೆಗ್ಗಲ ಮುಳ್ಳ ತುಳ್ಯಾಕ ಬರುದಲ್ಲ
Answer : ಚೇಳ !
63. ಅಂಗಡೀಲಿರುತ್ತೆ ಜಂಬುನೇರಳೆ
ಕೊಂಬೋರುಂಟು ತಿಂಬೋರಿಲ್ಲ
Answer : ಸಾಲಿಗ್ರಾಮ !
64. ಬಾಲಿಲ್ಲದ ಬಟಾರಿ
ನಾಲ್ಕು ಕಾಲಿನ ವಟಾರಿ
ಇದ ಹೇಳಿದವರಿಗೆ ಚಿನ್ನದ ಕಠಾರಿ
Answer : ಕಪ್ಪೆ !
65. ಸಮುದ್ರದಲ್ಲಿ ಕುಂಬಳ ನೀರಿಲ್ಲದೆ ಸತ್ತುಹೋಯ್ತು
Answer : ದೀಪ !
Click on each Riddle to View Answer
66. ಮೂರು ಕಾಲಿನ ರಾಣಿ
ಎಲ್ಲರ ಮನಿಯಾನ ಜಾಣಿ
ಕಟ್ಟಿಗೆ ತಿಂದು ನೀರು ಕುಡಿಯುವಳು
Answer : ಒಲೆ !
67. ಹೊಟ್ಟಿ ಬೆಳ್ಳಗೆ ಜುಟ್ಟು ನೆಟ್ಟಗೆ
Answer : ಟೆಂಗಿನಕಾಯಿ !
68. ಸಣ್ವೊರುಗೆ ಮುಕ್ಳೀಲ್ದಾರಾ
Answer : ಸೂಜಿ !
69. ಅಪ್ಪಯ್ಯನ ತೋಟಕ್ಕೆ ಇಪ್ಪತ್ತೊಂದು ಬೀಗ
ಹೋಗೋಕೆ ಸದರ ಬರೋಕೆ ಬಂಡಾಟ
Answer : ಮೀನು ಹಿಡಿಯುವ ಕೂಳಿ !
70. ನಮ್ಮನ್ಯಾಗ್ ಒಂದು ಹುಡಿಗೈತಿ
ಹಿಂದ್ ಹಿಂದ್ಕೆ ತೆವೀತೈತಿ
Answer : ನೆಲ ಬಳಿಯುವುದು !
Click on each Riddle to View Answer
71. ತಲಿಮ್ಯಾಗ ಮುಕಳಿ
ಮುಕಳಿಮ್ಯಾಗ ಬಾಯಿ
ಬಾಯಿಮ್ಯಾಗ ಕೈ
Answer : ಕೊಡ !
72. ಅಕ್ಕವ್ವ ಅತ್ತರ
ತಂಗೆವ್ವನೂ ಅಳತಾಳ
Answer : ಎರಡು ಜಿಂಕೆ ನಾಲ್ಕು ನವಿಲು !
73. ಕಶಾಲ ಮೂಳಾ ಕುಬಸಾ ಹರದಿ
ಅಲ್ಲದ ಮೂಳಾ ಗಲ್ಲಾ ಕಡದಿ
ಸಿಟ್ಟಿನ ಮೂಳಾ ಬಟ್ಟಿ ಮುರದಿ
Answer : ಬಾಳೇಹಣ್ಣು-ಪೇರಲಹಣ್ಣು-ಗಜ್ಜರಿ !
74. ಕಿರೀಟ ಉಂಟು ಮಹಾರಾಜನಲ್ಲ
ಗಡ್ಡ ಉಂಟು ಸಾಬಿಯಲ್ಲ
Answer : ಹುಂಜ !
75. ಮಾರುದ್ದ ಮರಕ್ಕೆ
ನಿಮ್ಮಪ್ಪನೂ ಹತ್ತಲಾರ ನಮ್ಮಪ್ಪನೂ ಹತ್ತಲಾರ
Answer : ಹಂಚಿಕಡ್ಡಿ !
Click on each Riddle to View Answer
76. ಅತ್ತಲಿಂದ ಓಡಿಬಂದು ಕತ್ತಿಗೆ ಕೈಹಾಕಿದರು
Answer : ತಂಬಿಗೆ !
77. ಊರುಂಟು ಮನೆಯಿಲ್ಲ
ನದಿಯುಂಟು ನೀರಿಲ್ಲ
Answer : ನಕಾಶ !
78. ಸೂಜಿ ಸಣ್ಣಕಾಗೆ ಬಣ್ಣ
Answer : ಕೂದಲು !
79. ಗುಡ್ಲು ಗುಮ್ಮ ಗುಡ್ಲು ಗುಮ್ಮ
ನಿನಗ್ಯಾಕೋ ಕಡ್ಡೀನಾಮ
Answer : ಪಡುವಲಕಾಯಿ !
80. ನಮ್ಮನ್ಯಾಗ ನೊಣ ಮುಟ್ಟದ ದೇವರ ಐತಿ
Answer : ಬೆಂಕಿ !
Click on each Riddle to View Answer
81. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ
Answer : ವಾರ, ತಿಂಗಳು, ವರ್ಷ !
82. ನಡ ಸಣ್ಣ ನಾಗರ ಬಣ್ಣ
ಮುಟ್ಟೋಕೆ ಹೋದ್ರೆ ಹೆಟ್ಟೋಕೆ ಬರ್ತಾನೆ
Answer : ಕಡಜ !
83. ನನಜ್ಜಾ ವಂದ್ಮೊಗೆಬಳ್ಳಿ ನೆಟ್ಟಿದ್ದಾ
ಅದು ಹಬಬ್ತಾ ಹೋಗ್ತು
Answer : ದಾರಿ !
84. ಅಂಬಾರಂಬಾರಿ ಅರಗಿಣಿ ಉಂಬಾಕ್ಹೋಗೂನು ಬಾರಗಿಣಿ
Answer : ಬಾಳೆ ಎಲೆ !
85. ಅಟ್ಟಾಕೊ ಕೈಚಿಣ್ಮಿಣುಕಿ
ಬೆಟ್ಟಾಕೊ ಕೈಚಿಣ್ಮಿಣುಕಿ
ಕಲ್ಲೂರೋರು ಕರೆಯಾಕೆ ಬರ್ತಾರೆ
ಮೆಲ್ಲಗಿಳಿಯೆ ಚಿಣಮಿಣಕಿ
Answer : ಮೆಣಸಿನಕಾಯಿ !
Click on each Riddle to View Answer
86. ಕುಶಾಲದಿಂದ ಕುಬಸಾ ಕಳಿ
ಹೌಸದಿಂದ ಹಾಸಗಿ ಮಾಡು
ಒಳ್ಳೇ ಮಾತೀಲೆ ಒಳ್ಯಾಕ ಇಳಿ
Answer : ಬಾಳಿಹಣ್ಣು !
87. ಒಂದು ಕೆರೆಗೆ ನಾಲ್ಕು ತೂಬು
Answer : ಹಸುವಿನ ಕೆಚ್ಚಲು !
88. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ
Answer : ವರ್ಷ !
89. ಎರಡು ಚಕ್ರವುಂಟು ಗಾಡಿ ಅಲ್ಲ ಎರಡು ರೆಕ್ಕೆಗಳುಂಟು ಪಕ್ಷಿ ನಾನಲ್ಲ , ಬಾಯುಂಟು ಕರುಳಿಲ್ಲ ಪ್ರಾಣಿ ನಾನಲ್ಲ
Answer : ರಾಗಿ ಕಲ್ಲು !
90. ಕಿತ್ತೂರ ಕಿಲ್ಲೇದ ಮ್ಯಾಲ ಹತ್ತರಕಿ ಪಲ್ಲೆ ಹುಟ್ಟ್ಯಾದ
ಕಿತ್ತರೂ ಬರುವದಿಲ್ಲ ಸತ್ತರೂ ಬರೂದಿಲ್ಲ
Answer : ಹಚ್ಚೆ !
Click on each Riddle to View Answer
91. ಅಂತರದ ಹಸರ
ಆಕಾಶದ ಹಣ್ಣ
ಭೂಮಿ ಗಿಣ್ಣ
ಮೂರು ಕೂಡಿ ಬಂದ ಹಣ್ಣ
Answer : ತಾಂಬೂಲ !
92. ಅಲ್ಲೋಡ್ ಪುಟ್ಟಿ ಯಿಲ್ಲೋಡ್ಪುಟ್ಟಿ ಪುಟ್ಟಿ ಹೆಜ್ಯೇ ಕಾಣ್ತಿಲ್ಲೆ
Answer : ನೊಣ !
93. ಅಂಗಯ್ನಂತಾ ಗೆದ್ದೆ ಮುಂಗಯ್ನಂತಾ ಹಾಳೆ
ಹಾಳೆಮೇಲೆ ಹಕ್ಕಿ ಕುಳ್ತ್ಂಡು ನಾಲ್ಗೆ ಸೆಳೆತು
Answer : ದೀಪ !
94. ತಕ್ಕಡ್ಯಾಗಿಟ್ಟು ತೂಗುವದಲ್ಲ
ದುಡ್ಡಿಗೆ ಕೊಡೂದಲ್ಲ
ಅದಿಲ್ದ ನಡಿಯೋದಿಲ್ಲ
Answer : ಬೆಂಕಿ !
95. ನೀರಿನಲ್ಲಿದ್ದರೂ ಕೊಳೆಯುವುದಿಲ್ಲ
ತೆಗೆದರೂ ಕೊಳೆಯುವುದಿಲ್ಲ
Answer : ಕಲ್ಲು !
Click on each Riddle to View Answer
96. ಇಟಿಟ ಮಣಿ ಮಣಿ ಮ್ಯಾಗ [ಗಿಣಿ
ಗಿಣಿ ಮ್ಯಾಗ ಹೊಲ ಹೊಲ್ದಾಗ ಕಬ್ಬ]
ಕಬ್ಬಿನಾಗ ಎಮ್ಮಿ ಮೈತದ
Answer : ಹೇನ !
97. ಮನಿ ಅದಾವು ಊರ ಅಲ್ಲ
ಮಂದಿ ಐತಿ ದೀಪ ಇಲ್ಲ
Answer : ಸ್ಮಶಾನ !
98. ಕೈಯಿಂದ ಕಲಸಣ್ಣ, ಕಾಲಿಂದ ಮೆಲಿಸಣ್ಣ, ಕೈಗೆ ಕೆಲಸಣ್ಣ, ಬೆಂಕಿಗೆ ಸುಡಿ ಸಣ್ಣ, ಬಡವರ ಆಧಾರಣ್ಣ, ಬಿದ್ದರೆ ಸತ್ತೃಣ್ಣ
Answer : ಮಣ್ಣಿನ ಮಡಕೆ !
99. ಹದಿನಾರೆತ್ತಿನ ಹಲ್ಲಪೇಟಿ
Answer : ಹಲ್ಲುಪುಡಿ !
100. ನಡುಕೆರೇಲಿ ತಡಿಕೆ ಬಿದ್ದಿದೆ
Answer : ಕೆನೆ ಅಥವಾ ಬಲೆ !
Click on each Riddle to View Answer
Index Of All Kannada Riddles / ಕನ್ನಡ ಒಗಟುಗಳ(ಳು) ಭಂಡಾರ