ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೧೦ (901 to 1000)
Kannada Riddles Questions & Answers List Part-10 (901 to 1000)
Riddles in Kannada:
Click on each Riddle to View Answer
901. ಲಂಗದ ಮೇಲೆ ಲಂಗ
Answer : ಈರುಳ್ಳಿ !
902. ಕುತನಿ ಚೀಲದಾಗ ರತ್ನ ತುಂಬ್ಯಾವ
Answer : ಒಣ ಮೆಣಸಿನಕಾಯಿ !
903. ಗಟ್ದ್ ಮನ್ನ ಅಜ್ಜಿಗೆ ರ್ಸ್ಕ್ಕುಂದುಡ್ಗೆರೆ
Answer : ಹುಲ್ಮನೆ !
904. ಗೋಡೆ ಮೇಲೆ ಕರೀ ರೊಟ್ಟಿ
Answer : ಬೆರಣಿ !
905. ಮಣ್ಣಲ್ಲೇ ಹುಟ್ಟು
ಮಣ್ಣಲ್ಲೇ ಬೆಳೆತು
ಮಣ್ಣಾಗಿದ್ರೆ ಕೆಡ್ತು
Answer : ಬೇವ್ನ ಸಪ್ಪು !
Click on each Riddle to View Answer
906. ರಾಜಾ ರಾಜಾ ಅಂಗಳದಲ್ಲಿ ಬೇರಿಲ್ಲದ ಮರಹುಟ್ಟಿ
ಊರೂರಿಗೆಲ್ಲಾ ಸುದ್ದಿ
Answer : ತೇರ್ಕಟ್ಟೆ !
907. ಗುಡ್ಡ ಬೆಟ್ಟಗಳುಂಟು ಮರಗಳಿಲ್ಲ
ಸಮುದ್ರ ಉಂಟು ಹೊಳೆಯುಂಟು ನೀರಿಲ್ಲ
ಹೆಸರುಂಟು ಊರಿಲ್ಲ
Answer : ಭೂಪಟ !
908. ಆಕಳ ಆಕಾಶಕ ಕರಾ ಭೂಮಿಗಿ
ಹಿಂಡುವವ ಜಾಣ ಕುಡಿವವ ಕೋಣ
Answer : ಸಿಂದಿ ಗಿಡ, ರಸ !
909. ಬೆಳ್ಳಿ ಲಂಗದ ಸುಂದರಿಗೆ ಮ್ಯೆಯೆಲ್ಲಾ ಚಿನ್ನ
Answer : ಗಜ್ಜರಿ !
910. ಮೂಗೂರು ಸಂತೇಲಿ
ಒಂದು ಮುದುಗುರಿ ತಂದು ಕುಯ್ದರೆ ಬರಿ ಚರ್ಮ
Answer : ಈರುಳ್ಳಿ !
Click on each Riddle to View Answer
911. ಹಂತ ಹಂತದ ಮನೆ
ಜಂತ್ರದ ಬಾಗಿಲು
ಭೂತನ ಕಾವಲು
ರಾಜನ ಸ್ಥಳ ರಾಣಿ ಮನೆ
ಒಳಗೆ ಹೋಗಲಿಕ್ಕಾಗುವದಿಲ್ಲ
Answer : ಜೇನು ಪೆಟ್ಟಿಗೆ !
912. ದೊಡ್ಡ ಮರಕ್ಕೆ ದೋಣಿಕಟ್ಟಿದೆ
Answer : ಹಲಸಿನಕಾಯಿ !
913. ಬೆಟ್ಟದ ಮೇಲೆ ಬೆಳ್ಳಿ ಕೋಲು
ಹಾಕುವರುಂಟು ತೆಗೆಯುವರಿಲ್ಲ
Answer : ರಂಗೋಲಿ !
914. ಚೆಲ್ಲೋದುಂಟು , ಕುಯ್ಯೋದುಂಟು , ತಿನ್ನೋದಿಲ್ಲ
Answer : ಕೂದಲು !
915. ಚಿನ್ ಚಿನ್ ಅಂಗಡಿ ಚಿನ್ನಾರ್ ಅಂಗಡಿ
ಹಜಾರ್ ತುಂಬ ಬಜಾರ್ ಅಂಗಡಿ
Answer : ಸೂರ್ಯ ಚಂದ್ರ !
Click on each Riddle to View Answer
916. ಆರು ಮಾರು ಗೂಟ
ಶಾನುಭೋಗರ ತೋಟ
ಹೋಗುವದಷ್ಟೇ ಗೊತ್ತು
ಬರುವದು ಗೊತ್ತೇ ಇಲ್ಲ
ಬಲೆಗೆ ಬೀಳುವ ಮೀನು
Answer : ಬಲೆ ಮತ್ತು ಮೀನು !
917. ನಾಲ್ಕು ಕಾಲಿದ್ದರೂ ನಡೆಯಲಾರೆ
ಕೈಗಳೆರಡಿದ್ದರೂ ದುಡಿಯಲಾರೆ
ಬೆನ್ನೇರಿ ಕುಳಿತವಗೆ ಬೇಡವೆನಲಾರೆ
Answer : ಖುರ್ಚಿ !
918. ಎಲ್ಲಾ ಇದೆ ಕೈಕಾಲು ಇಲ್ಲ
Answer : ಹಾವು !
919. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ
Answer : ರೊಟ್ಟಿ, ದೋಸೆ !
920. ಕೋಣ ಹಗ್ಗ ಹಾಸಿಕೊಂಡು ಮಲಗಿದೆ
Answer : ಕುಂಬಳಕಾಯಿ !
Click on each Riddle to View Answer
921. ನೆಟ್ಟನ್ನ ಗಿಡಕ್ಕ ನೆರಳಿಲ್ಲ
Answer : ದಾರಿ !
922. ಗಾದ್ಯಾಗ ಗಾದಿ ಯಾಗಾದಿ
Answer : ಉಗಾದಿ !
923. ವಂದ್ ಮನೆಗೆ ವಂದೇ ಕಂಬಾ
Answer : ಕೊಡೆ !
924. ಮುತ್ತಿನ ಕೋಳಿ ಮುಳ್ಳಗ ತತ್ತಿ ಇಟ್ಟೈತಿ
Answer : ನಿಂಬೇಹಣ್ಣು !
925. ಮಾಳಿಗೆ ಮೇಲೆ ಮಂಡಲದ ಹಾವು ಮಲಗಿದೆ
Answer : ಪಡವಲಕಾಯಿ !
Click on each Riddle to View Answer
926. ಶೆಟ್ಟರೆ ಕುದುರೆ ಬಿಟ್ಟರೆ ನಿಲ್ಲದು
Answer : ಹೂಸು !
927. ಈಟಿ ಹುಡುಗ ಮುಗಿಲ್ ಮಟ್ಟ ಜುಟ್ಟು
Answer : ಹೊಗೆ !
928. ಆಡುವ ಕುದುರೆ ಓಡುವ ಕುದುರೆ
ನೀರು ಕಂಡರೆ ನಿಲ್ಲುವ ಕುದುರೆ
Answer : ಪಾದರಕ್ಷೆಗಳು !
929. ಸರಸರವೆನ್ನುವುದು ಸರ್ಪವಲ್ಲ
ಜನಿವಾರ ಹಾಕುವುದು ಬ್ರಾಹ್ಮಣನಲ್ಲ
ನಾರಿಯರ ಕೈಹಿಡಿಯುವುದು ಪತಿಯಲ್ಲ
ಈ ಮೂರು ಹೇಳಬಲ್ಲವನು ದಡ್ಡನಲ್ಲ
Answer : ಹಗ್ಗ, ರಾಟೆ, ಕೊಡ !
930. ರಾತ್ರಿಯೆಲ್ಲ ಮಲಗಿರುತ್ತದೆ
ಬೆಳಗಾಗುತ್ತಲೇ ಎದ್ದು ನಿಲ್ಲುತ್ತದೆ
Answer : ಕಸಬರಿಗೆ !
Click on each Riddle to View Answer
931. ಬಂದರೆ ಬರೋದಿಲ್ಲ ಬರದೆ ಇದ್ರೆ ಬರೋದಿಲ್ಲ
Answer : ನದಿ !
932. ಕಟ್ಟಿದ್ದ ಕರಿಮಣಿ ಹರೆವ್ನೆ ಜಾಣ
ಒಟ್ಟಿದ್ದ ಬಣಮಿ ಸುಡವ್ನೇ ಜಾಣ
Answer : ಕುಂಬಾರನ ಆವಿಗೆ !
933. ವಂದ್ ಕಾಲ್ನ ಕೊಕ್ಕರೆ ನೂರೆಂಟು ಮೂಟ್ಟೆ
Answer : ತೆಂಗು !
934. ಸಂತ್ಗೋಗೋನ ತಿಕ ತಳತಳಕಾ
Answer : ಕೋಳಿ !
935. ಇಣುಕಿ ನೋಡಿದ್ರೆ ನೀರಲ್ಲೆ
Answer : ಕೆಮಿ !
Click on each Riddle to View Answer
936. ಕರಿಯವ್ಳೆ
ಕಾಲುಂಗರ್ದವ್ಳೆ
ನೆರಮನೆಗೋದ್ರೆ ಬಿರಬಿರನೆ ಬಾ
Answer : ವನ್ಕೆ !
937. ಬಿದರೂರ ಹೆಣ್ಣಿಗಿ ಬೆನ್ನ ಕಡೆ ಮಲಿ
Answer : ಮರ !
938. ಪುಟ್ಟ ಹೊತ್ತುಕೊಂಡು ಪುನಾಸು ಬಿಟ್ಟುಕೊಂಡು
ಬೆಟ್ಟದ ಮೇಲೆ ಬೆರಕೆ ಸೊಪ್ಪು ಕೊಯ್ತಾಳೆ
Answer : ಆಡು !
939. ತಾಯಿ ಊಟಕ್ಕೆ ಬರೋ ಮೊದಲು
ಮಗಳು ಅಡಿಗೆಗೆ ಬಂದಳು
Answer : ಬಾಳೆ ಎಲೆ, ಬಾಳೆಕಾಯಿ !
940. ಪತ್ರೆ ಪತ್ರೆಗೆಲ್ಲ ದೊಡ್ಡ ಪತ್ರೆ ಯಾವುದು
Answer : ಗರಿಕೆ ಪತ್ರೆ !
Click on each Riddle to View Answer
941. ಜಾಮ್ ಜಾಮ್ ಜಗ್ಸಿ ನೋಡಿ
ಕಗ್ಗಲ್ಗುಂಟ ಸಿಕ್ಸಿ ನೋಡಿ
ಆಯಿತ ಹೋಯಿತ ಕೈಹಾಕಿ ನೋಡಿ
Answer : ಮೊಸರ ಕಡೆತ !
942. ಅಲ್ಲಿ ಬುಳು ಬುಳು ಇಲ್ಲಿ ಬುಳು ಬುಳು
ಕಲ್ಯಾಣ ತನಕಾ ಬುಳು ಬುಳು
ಹಿಕ್ಕಿ, ಕುರಿಹಿಕ್ಕಿ
Answer : ಹಿಟ್ಟಿನಕೋಲು !
943. ಹಚ್ಚನ ಗಿಡದಾಗ ಹಣಮಂತ ಕುಂತಾನ
ಕಡಿಲಿಕ್ಕ ಹೋದರ ಕಚ್ಚಲಿಕ್ಕ ಬರ್ತಾನ
Answer : ಬದನಿಕಾಯಿ !
944. ಮೀಸ್ಯಾಗ ಮೀಸಿ ಯಾವ ಮೀಸಿ
Answer : ಕುಡಿ ಮೀಸಿ !
945. ಗಲ ಗಲ ಎನ್ನುವ ಮರ
ಮರದ ಮೇಲೆ ಎಲೆ
ಎಲೆಯಲ್ಲಿ ಕಲೆ
ಕಲೆಯಲ್ಲಿ ಮಾತು
ಮಾತಿನೊಡನೆ ತೂತು
ತೂತಿನೊಳಗೆ ನೂಲು
ನಾನ್ಯಾರು
Answer : ರಾಟಿ !
Click on each Riddle to View Answer
946. ಕಾಲುಂಟು ಕೈಯಿಲ್ಲ ! ನಡುವುಂಟು ತಲೆಯಿಲ್ಲ ! ರಂಧ್ರಗಳ್ಳುಂಟು
Answer : ಪ್ಯಾಂಟು !
947. ಸುತ್ತ ಸುಣ್ಣದ ಗೋಡೆ
ಎತ್ತ ನೋಡಿದರೂ ಬಾಗಿಲೇ ಇಲ್ಲ
ಕೋಳಿಯ ಮೊಟ್ಟೆ
Answer : ಕೋಳಿ ಹುಂಜ !
948. ಒಂದೋಳು ಉಳ್ಳಿಕಾಳು
ನಮ್ಮಪ್ಪನೂ ತಿನ್ನಕ್ಕಾಗಲ್ಲ
ನಿಮ್ಮವ್ವನೂ ತಿನ್ನಕ್ಕಾಗಲ್ಲ
Answer : ಮೀನು !
949. ಅಟ್ಟದ ಮೇಲೊಂದು ಪುಟ್ಟ ಸೋರೆಕಾಯಿ
ಮುಟ್ಟಾಕೆ ಹೋದರೆ ಹೆಟ್ಟಾಕೆ ಬರುತ್ತೆ
Answer : ಜೇನು !
950. ಎರೆ ಮಣ್ಣು ಎರೆ ಮಣ್ಣು ಹೆಂಟ್ಯಾಡ
ಹೂ ಜೋತಾಡ ಕಾಯಿ ನ್ಯಾತಾಡ
Answer : ಕಡಲೆ ಕಾಯಿ !
Click on each Riddle to View Answer
951. ಅಕ್ಕಕ್ಕ ತಂಗೇರು
ಜಕ್ಕ ಮಲ್ಲಿ ದೇವರು
ಹಾಲು ಮೊಸರು ಹೊತ್ಕೊಂಡು ವಾಲಾಡ್ತಾರೆ
Answer : ಕೆಚ್ಚಲಿನ ಮೊಲೆಗಳು !
952. ಕಲಕ ನೀರ ಕುಡಿಯಲಾರೆ
ಬಿದಿರ ಬೆತ್ತ ಹಿಡಿಯಲಾರೆ
ನೆಗ್ಗಿನ ಮುಳ್ಳು ತುಳಿಯಲಾರೆ
ನೀಲಿ ಗುಡಿಯ ಸುತ್ತಲಾರೆ
Answer : ರಕ್ತ, ಹಾವು, ಚೇಳು, ಆಕಾಶ !
953. ಕರ್ರನ್ನ ಕಾಕಾ ಮನೀ ಹೊಕ್ಕ
ಮನೀ ಬಿಡಿಸಿ ಗಿಡದಾಗ ನಕ್ಕ
Answer : ಕಾಗೆ !
954. ಬೆಟ್ಟದ ಮ್ಯಾಲೆ ಕೆಂಪಿನ ಬೊಟ್ಟು
Answer : ಕುಂಕುಮ !
955. ಮಳ್ಳ ಹಕ್ಕಿ ಮುಳ್ಳಾಗ ತತ್ತಿ ಹಾಕ್ಯಾದ
Answer : ಲಿಂಬಿಹಣ್ಣು !
Click on each Riddle to View Answer
956. ಒಂದು ಸೇರು ಭತ್ತ
ಮೈಸೂರು ಸುತ್ತ
ಸುಲಿದರೆ ಸಿಪ್ಪಿಲ್ಲ
ತಿಂದರೆ ರುಚಿಯಿಲ್ಲ
Answer : ಅನಕಲ್ಲು !
957. ಸಾವರರ್ಮಕ್ಕೋಗೆ ವಂದೇ ಉಡ್ದಾರ
Answer : ಹಿಡಿ !
958. ಮುಳಗಡ್ಡಿ ಮೇಲೆ ಮುಳಗಡ್ಡಿ
ಅದರ ಮೇಲೆ ತೊಂಬೈನೂರ ಪಟ್ಟಣ
ಆ ಊರ ತಳವಾರನ ಹೆಂಡತಿ
ತಳ ಇಲ್ಲದ ಕೊಡ ಹೊತ್ತು
ಜಲ ಇಲ್ಲದ ಬಾವಿಗೆ ಹೋದಳು
Answer : ಒರಳು ಕಲ್ಲು (ಮುಳಗಡ್ಡಿ, ಭತ್ತ, ಪಟ್ಟಣ, ನೆಲ್ಲು, ಭಾವಿ, ಒರಳುಕಲ್ಲು) !
959. ಕಾನಲ್ಲಿ ಕಡ್ಲೆ ಬಿತ್ತಿ ಹೀಲಿ ಬೇಲಿ ಕಟ್ಟಿ
ಜಾನ ಎಂಬ ಹುಡುಗನನ್ನು ಕಾವಲು ಕೊಟ್ಟಿದೆ
Answer : ಕಣ್ಣು !
960. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?
Answer : ನೆನಪು !
Click on each Riddle to View Answer
961. ಎದೆನಾಗರ ಬೆದೆಕೋಲು
ಹೆಕ್ಕಳಿಸೋದು ನಿನ್ನ ಎದೆ ಮ್ಯಾಲೆ
Answer : ಕೊರಳ ಸರ !
962. ವಂದ್ಬಟ್ಟಂಗೆ ಸಾವರರ್ಕಣ್ಣು
Answer : ದೋಸೆ !
963. ಅಗಲ್ಸ ಕಂಡ್ ತಗಲ್ಸ ಕಂಡ್
ಪೆಟ್ಟೆ ಕೆಂಪಾಗಿ ಬೈಳಗೆ ಬಿತ್ತು
Answer : ಒಲೆ, ಸೌದೆ, ಕೆಂಡ, ಬೂದಿ !
964. ಬಿಳಿ ಹೊಲದಾಗ ಕರೆ ಸಾಲು
Answer : ಅಕ್ಷರಗಳು !
965. ತೊವ್ವೆ ತಿಂದು ತಪ್ಲಿ ಬಿಸಾಕಿದ್ರು
Answer : ಬೇಲದ ಹಣ್ಣು !
Click on each Riddle to View Answer
966. ಅಕ್ಕನ ಮನಿಗಿ ತಂಗಿ ಬರ್ತಾಳ
ತಂಗೀ ಮನಿಗಿ ಅಕ್ಕ ಹೋಗುದುಲ್ಲ
Answer : ಸೇರ, ಪಾವ !
967. ಹೊಸಿಲಾರದ ಹಗ್ಗ
ಎತ್ತಲಾರದ ಹಲಗೆ
Answer : ಹಾವು, ಭೂಮಿ !
968. ನಿನ್ನ ತಲೆಯ ಮೇಲೆ
ತಾಮರದ ಕೊಡ
ನಿನ್ನ ನಡ ನಡಕೊಂಡು
ನಾ ಅಡ
Answer : ತೆಂಗು !
969. ಬೆಳ್ಳಿದಿಂಬಾ
ಚಿನ್ನದ ಗವಸಾ
Answer : ಬಾಳಿಹಣ್ಣ !
970. ಅರಕೆರೆ
ಬರಕೆರೆ
ತುಂಬಿದ ಕೆರೆ
Answer : ತೆಂಗಿನಕಾಯಿ, ಕೊಬ್ಬರಿ, ಎಳ್ನೀರು !
Click on each Riddle to View Answer
971. ಹುಟ್ಟತಲೆ ಎರಡು ಕೋಡು
ಬಟ್ಟಗಾಯ್ತು ಪ್ರಾಯದಿಂದ
ಕರಗಿಹೋಯ್ತು ಕಾರಣದಿಂದ
Answer : ಚಂದ್ರ !
972. ಕೈಗೂ ಇಲ್ಲ ಬಾಯ್ಗೂ ಇಲ್ಲ
ಮೋಡದಾಗ ಮನೀ ಮಾಡೈತಿ
Answer : ನೀರು !
973. ದಡರ ದಿಮ್ಮಿಗೆ ಹಿಂದಕ್ಕೆ ಮೊಲೆ
Answer : ಮೊರದ ಗೋಟು !
974. ಊರೆಲ್ಲ ಸುತ್ತಿ ಮೂಲೇಲಿ ಬಂದು ಮುದುರಿಕೊಳ್ತವೆ
Answer : ಚಪ್ಪಲಿ !
975. ಕಪ್ಪೆ ಕಲಕದ ಬಾವಿ
ಏಡಿ ಮುಳುಗದ ಬಾವಿ
ಆಕಾಶದ ಬಾವಿ
ಅರಬಾವಿ
Answer : ಓಲೆ, ಬುಗುಡಿ, ಜುಮ್ಕೆ !
Click on each Riddle to View Answer
976. ಏಳುತಲೆ ಕೆಂಪುಂಟು, ಹತ್ತುತಲೆ ಬಿಳಿಯ, ಬೀಳುತಲೆ ಕಪ್ಪೆ ಕತ್ತಲೆಯಾಯ್ತು ತಿಳಿಯ
Answer : ಸೂರ್ಯ !
977. ಸಾವಿರ ರೂಪಾಯಿ ಸರಕು
ನೂರು ರೂಪಾಯಿ ಗೋಣಿ
ಹೊತ್ತ ಎತ್ತಿಗೂ ಗೊತ್ತಿಲ್ಲ
ಹೇರಿದ ಶೆಟ್ಟಿಗೂ ಗೊತ್ತಿಲ್ಲ
Answer : ಬಸುರಿ !
978. ಅಂಗಡೀ ಗುರುಸಿದ್ಧವ್ವಾ ನನ್ನ್ಯಾಕ ಕರಿಸಿದ್ದೆವ್ವಾ
ಮೂಗು ಮಾರೀ ಒರಿಸಿದ್ದೆವ್ವಾ
Answer : ನಾಸಿಪುಡಿ !
979. ಜನರಿಲ್ಲದ ನಾಡು
ಮರವಿಲ್ಲದ ಕಾಡು
ನೀರಿಲ್ಲದ ತೋಡು
ಮೀನಿರದ ಕಡಲು
Answer : ಭೂಪಟ !
980. ಅಂಡಗಳ್ಳಿ ಮುಂಡಗಳ್ಳಿ
ಮಾತುಗಳ್ಳೀ ದುಂಡು ಸಂಪಗೆ
ನಾಲೋರು ಅಕ್ಕ ತಂಗೇರು
ಮನೇಲವರೆ
Answer : ಓಲೆ, ಬುಗುಡಿ, ಮುರ, ಜುಮ್ಕೆ !
Click on each Riddle to View Answer
981. ಎದರ ಮಾಡದಾಗ
ಮೂವತ್ತೆರಡು ಕವಡಿ ಬಿದ್ದಾವ
ತಗೋಬೇಕಂದರ ಬರಾದಿಲ್ಲ
Answer : ಹಲ್ಲು !
982. ಹುಲ್ಲಿಲ್ಲದ್ ಹೊಳೀಲೆ ಹಲ್ಲಿಲ್ಲದ ಆಕಳು ಮೇಯ್ತದೆ
Answer : ನದಿ, ದೋಣಿ !
983. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು
Answer : ಏಲಕ್ಕಿ !
984. ಪಚ್ಚಿಲ್ಲದ ಹಕ್ಕಿ ಅರವತ್ತು ಖಂಡುಗ ಗದ್ದೆ ಮೇಯುತ್ತೆ
Answer : ಹುಲ್ಗತ್ತಿ !
985. ಮನ್ಯಾನ ಕೋಣಕ್ಕ ಮೈತುಂಬ ಕಣ್ಣು
Answer : ಹೊರಸು !
Click on each Riddle to View Answer
986. ಹಳ್ಳದಾಗೆ ಅಜ್ಜಿ ಹಾಕಿಸ್ತಾಳೆ
Answer : ಕಟ್ಟಿರುವೆ ಸಾಲು !
987. ಆಲೇರ ಬಾಲೇರ
ಅವರೊಂದ ಕುಲದವರ
ಹಾಲ ಮಸರ ಹೊತಗೊಂಡ ತೂಗ್ಯಾಡಾವರ
Answer : ನೆಲುವ !
988. ಅರಲಾಗ ಹುಟ್ಯೇತಿ
ಪಳಾಪಳಾ ಅಂತೈತಿ
ಮಂಚಾ ಹಾಕ್ತೈತಿ
ಗಾಳಿ ಬೀಸ್ಥೈತಿ
ಎಲ್ಲಾರ ಬಾಯಾಗ ಉಚ್ಚಿ ಹೊಯ್ತತಿ
Answer : ಕಬ್ಬ !
989. ಊಟಾ ಮಾಡುವಾಗ ಏನು ತಗದ ಊಟಾ ಮಾಡತಿ
Answer : ಬಾಯಿ !
990. ಹಸರ ಕೊಡ
ತುಂಬಾ ಸೀನೀರ
Answer : ಎಳಗಾಯಿ !
Click on each Riddle to View Answer
991. ಉದ್ದಾನೆಯ ಮರಕ್ಕೆ ನೆರಳಿಲ್ಲ
Answer : ದಾರಿ !
992. ಗುಡ್ಡದ ಹಿಂದ ಗುಡಗ ಹಾಕ್ತದ
Answer : ಹೂಂಸ !
993. ಅತ್ತಿತ್ತ ಹೋಯಿತು ನಡುವೆ ಬಂದು ಕುಳಿತಿತು
Answer : ಲಾಟಾನು !
994. ಸತ್ತ ಮರದಲ್ಲಿ ಬಸಪ್ಪ ಗಂಟೆ ಹೊಡೆಯುತ್ತಾನೆ
Answer : ಕೊಡಲಿ !
995. ಕರಿ ಎತ್ತ ಕೆಂಪೆತ್ತ ನೀರಿಗಿ ಹೋಗ್ತಾವ
Answer : ತೊಗರಿ !
Click on each Riddle to View Answer
996. ಏರೊ ಕೆಳಗೆ ಎಳಗರು ಬಾಲ ಬೀಸ್ತದೆ
Answer : ಬತ್ತದ ಗೊನೆ !
997. ಹೊಂಬಣ್ಣದಲ್ಲಿ ಹೊಳೆಯುತಿಹಳು
ತಾ ಕನ್ನೆ ದಿಂಬಿನಲಿ
ಮೂರು ಬಣ್ಣದಲಿ ಸಂಪನ್ನೆ
ಉಂಬದಕೆ ಕರೆಸಿಕೊಂಬಳು
ಚೆಲ್ವ ಚೆನ್ನೆ
Answer : ಉರಿಯುವ ದೀಪ !
998. ಕಲ್ಲಾಗಿ ಹುಟ್ಟಿ ಜಂಜಾಟಕ್ಕೆ ಸಿಲ್ಕಿದೆನು
ಬೆಂಕಿಯಲ್ಲಿ ಧುಮುಕಿದೆನು ಹೂವಾಗಿ ಅರಳಿದೆನು
ಮನೆಯನ್ನು ಬೆಳಗಿದೆನು ಎಲೆಯ ಸ್ನೇಹದಿಂದ ಸಣ್ಣಾಗಿ ಸತ್ತೆನು
Answer : ಸುಣ್ಣ !
999. ಕೆಂಪರಾಣಿ ಸುತ್ತಲೂ ಬಿಳೀ ಸೈನಿಕರು
Answer : ನಾಲಗೆ ಹಲ್ಲು !
1000. ಕರಿ ಹೊಲಕ ಹೋಗುವಾಗ ಬೆಳ್ಳಗ
ಬರುವಾಗ ಕೆಂಪಗ
Answer : ದೋಸೆ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ