ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೨ (101 to 200)
Kannada Riddles Questions & Answers List Part-2 (101 to 200)
ಕನ್ನಡ ಒಗಟುಗಳು ಮತ್ತು ಉತ್ತರಗಳು:
Click on each Riddle to View Answer
101. ಖಂಡಗ ಜ್ವಾಳಾ ಕಾತಕನಯ್ಯಾ
ಮಾತೂ ಗೀತೂ ಬೋವಾನಯ್ಯ
ಮನ್ಯಾಗಂತೂ ಪೇತಲಿನಯ್ಯಾ
Answer : ನುಸಿ !
102. ಒಂಟೊಂಟೊಡೇನ ಗಂಟು
ನಂಟಕುಪ್ಪೆ ನಾಗಮಂಗಲ
ಒಡಚಿದಂಥ ಭೂಪನಿಗೆ
ಎಂಟು ರೊಂಟಿ ಸೊಲಿಗೆದುಪ್ಪ
Answer : ಬೆಣ್ಣೆ !
103. ಕಲ್ಲು ಕಂದಕ, ಬಿಳಿ ಸಂದುಕ, ನೀರುಂಟು ಮೀನಿಲ್ಲ
Answer : ತೆಂಗಿನ ಕಾಯಿ !
104. ಹನ್ನೆರಡು ಕಣ್ಣ ಮೂರೇ ಕೈ
ಒಪ್ಪೊತ್ತು ಊಟಾ ಮಾಡತೈತಿ
Answer : ಗಡಿಯಾರ !
105. ಕಂಚು ಕಣ ಕಣ
ಹೂ ಬಳ ಬಳ
ಹಾವು ಸಳಸಳ
ಯಾಕಲೇ ಮುದುಕಿ ತೊಡ್ರಾಬಡ್ರಾ
Answer : ಗಂಗಾಳ-ಅನ್ನ-ಸಾರು-ಶಾವಿಗೆ !
Click on each Riddle to View Answer
106. ನೆತ್ತಿಗುದ್ದಿ ನೀರ ಕುಡಿದರ
ಹೊಟ್ಟೆ ಹಗುರು
Answer : ಸೋಡಾ !
107. ಚಟ್ಟ್ ಪಟ್ಟ್ ಲೇಡಿಗೆ ಒಂದೇ ಕಣ್ಣು
Answer : ಸೂಜಿ !
108. ಸುತ್ತಿನಲ್ಲಿ ಕೆಂಪಿರುವೆ ಮತ್ತೆ ಬಿಳಿದಾಗಿದ್ದು ಮಧ್ಯದಲಿ ಕಪ್ಪಾಗಿ ಹೊಳೆಯುವ ನಾನಾರು ?
Answer : ಕಣ್ಣು !
109. ಕಿತ್ತರೆ ಬಾಡುವುದಿಲ್ಲ ನೆಟ್ಟರೆ ಹುಟ್ಟುವುದಿಲ್ಲ
Answer : ಕೂದಲು !
110. ಒಂದು ಗುಂಡೀಲಿ
ಒಂಭತ್ತು ಕೊರವ
Answer : ಹಲಸಿನ ಬೀಜ ಅಥವಾ ಬಾವಿಯಲ್ಲಿರುವ ಬಿಂದಿಗೆಗಳು !
Click on each Riddle to View Answer
111. ಸುತ್ತಿ ಸುತ್ತಿ ಬರಬೇಡ ನನಗಾಗಿ
ಮೇಲೊಬ್ಬ ಕುಳಿತವ್ನೆ ನಿನಗಾಗಿ
Answer : ಗಾಳದ ಮುಳ್ಳು !
112. ಹಾರೋವಾಗ ಹಿಡಿಯೋರಿಲ್ಲ
ಊರಿದರೆ ಉರಿ ರ್ತದೆ
ಬೇಕಂದ್ರೆ ಅರ್ಧ ದೇಶಾನೆ ಬಳಸ್ತದೆ
ಅದರ ಮನೆ ಒಂದ್ತಾವು ನೆಲೆ ಇಲ್ಲ
ಅದು ಎಲ್ಲಿತ್ತು ಅಲ್ಲೇ ರ್ತದೆ
ಬೇಕೂ ಅಂದ್ರೆ
Answer : ದುಂಬಿ !
113. ಒಂದ ಕೋಡಿನ ಎತ್ತು
ಊರಿನ ಜ್ವಾಳನೆಲ್ಲಾ ಮುಕ್ಕತೈತಿ
Answer : ಬೀಸೂಕಲ್ಲು !
114. ಕೆಳ ಹುತ್ತು ನಡುಬತ್ತು
ಮೇಲೆ ನಂದಾನ್ವನಾ
Answer : ತೆಂಗು !
115. ಉಂಡು ಉಟ್ಟಾ
ಬಿಲಕ್ಕ ಕೈ ಇಟ್ಟಾ
Answer : ಎಲೆ ಚಂಚಿ !
Click on each Riddle to View Answer
116. ಅಡಕ ಬೆಳ್ಳಿ ತೊಡಕ ಬೆಳ್ಳಿ
ಸಕ್ಕರೆ ಹಾಕಿದ್ರ ಸಿಹಿ ಬೆಳ್ಳಿ
Answer : ಮೆಕ್ಕೇಕಾಯಿ !
117. ಕಲ್ಲಾಗಿ ಹುಟ್ಟಿ ಕಲ್ಲಾಗಿ ಬೆಳೆದು
ಎಲ್ಲ ದೇವರಿಗೂ ಸಲ್ಲತಕ್ಕದ್ದು
Answer : ಸುಣ್ಣ !
118. ಒಂಟೊಂಟು ಒಡೇನ ಗಂಟು
ನಿಮ್ಮಪ್ಪನ ಕಚ್ಚೆ ಪಾವಡೆಲ್ಲಾ ಸರಗಂಟು
Answer : ಕೊಳಕೆ ಮುಳ್ಳು !
119. ತಾಯಿ ತಂದೆ ಕರ್ರಗೆ
ಮಗಳು ಬೆಳ್ಳಗೆ
ಮೊಮ್ಮಗಳು ರಜಗೆಂಪು
Answer : ಕಾವಲಿ, ಮುಚ್ಚಳ, ಹಿಟ್ಟು, ದೋಸೆ !
120. ಆಕಾಶಕ್ಕೆ ಅಪ್ಪಣ್ಣ ನೆಲಕ್ಕೆ ದುಪ್ಪಣ್ಣ
ಹಿಂಡಿ ಹಿಚಕಣ್ಣ ಮುಂಡಿ ಮಚಕಣ್ಣ
Answer : ಮಾವಿನ ಹಣ್ಣು !
Click on each Riddle to View Answer
121. ಕೆರ್ಯಾಗ ಕೆಕ್ಕರಸತತಿ
ಬನಿವ್ಯಾಗ ಬಡಬಡಸ್ತತಿ
Answer : ಕಪ್ಪಿ, ಟೆಂಗಿನಕಾಯಿ, ಕುಡಗೋಲ !
122. ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ
Answer : ರೊಟ್ಟಿ !
123. ಕೈಯುಂಟು ಕಾಲಿಲ್ಲ ಶಿವಹರಿದ ಮುಂಡ
ಮೈಯೆಲ್ಲ ನವಗಾಯ, ಒಂಬತ್ತು ತುಂಡ
ಕೈಯಿದ್ದು ಕೆಲಸಕ್ಕೆ ಬರದೆ ಹೊಯ್ಕೊಂಡ
ಅಯ್ಯಯ್ಯೋ ಎಂದು ರಾಯರನು ಅಪ್ಪಿಗೊಂಡ
Answer : ಶರ್ಟು !
124. ಹಾಕ ಹಾಕ ಮೆಡತು
Answer : ರೇಷ್ಮೆಗೂಡು ತೂಗುವ ಚಿಂತಾಲು !
125. ಒಂದು ಬಂಡ್ಯಾಗ ಮೂರುಗಿ
Answer : ಡಂಬರಗಿ, ಜತಿಗಿ, ಉದ್ದಿಗಿ !
Click on each Riddle to View Answer
126. ತಿಕಕ್ಕೆ ತಲೆ
ಬಾಯಿಗೆ ಬೆರಳು
ಅಂಗಾಲಲ್ಲಿ ತಾಳ
ಒಡೆಯುವ ಹೆಣ್ಣೆ
ಅದು ಒಂದು ಅಂಗದ ಗಿಡ
Answer : ಹರಬಿ, ಮಿಂಚು, ಕೀರೆಗೆಡ್ಡೆ !
127. ಒಂಟಿಕಾಲಿನ ಕುಂಟ. ನಾನ್ಯಾರು ?
Answer : ಬುಗರಿ !
128. ಬಾಯಿಲಿ ತಿಂತದ ಮಗ್ಗಲ ಹೇಲ್ತದ
Answer : ಬೀಸೊಕಲ್ಲ !
129. ಅಪ್ಪಾಜಿಗೌಡರ ತೋಟ
ಎಪ್ಪತ್ತೈದು ಗೂಟ
ಬಗ್ಗು ಹುಣಸೆ
ಬಾಗು ಹುಣಸೆ
ಬಗ್ಗಿದರೆ ಜಲದ ಹುಣಸೆ
ನಾನು ತಿನ್ನುವ ಹಣ್ಣು
ರಾಜರ ತೋಟದಲ್ಲಿಲ್ಲ
ಸಿಪ್ಪೆಯಿಲ್ಲ ಬಿತ್ತವಿಲ್ಲ ಹಾಗೇ ನುಂಗುವುದು
Answer : ಆಲಿ ಕಲ್ಲು !
130. ಸಣ್ಣ ಕೋಲಿನ ಮೇಲೆ
ಪಿಣ್ಣಕ್ಕಿ ಕೂತದೆ
Answer : ಮೂಗುಬಟ್ಟು !
Click on each Riddle to View Answer
131. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ
Answer : ಬೆಂಕಿ,ಬಾಣಲೆ, ದೋಸೆ !
132. ಹಾಕಿದ್ ಬೀಗ ತೆಗೆಯಾಂಗಿಲ್ಲ
Answer : ಸಮಾಧಿ !
133. ಭೂಮಿಗಿಂತ ದೊಡ್ಡದ್ಯಾವುದು
ಆಕಾಶಕ್ಕಿಂತ ಅಗಲವಾದ್ದು ಯಾವುದು
ನೀರಿಗಿಂತ ತೆಳುವಾದ್ದು ಯಾವುದು
Answer : ಸತ್ಯ, ಆಶೆ, ಗಾಳಿ !
134. ಅಂಗೀ ತಿಗ್ದೆ ಬಾವೀಲ್ಗುದ್ಕ್ತೀದ
Answer : ಬಾಳಿಹಣ್ಣ !
135. ಮಣಿ ಮ್ಯಾಲ ಮಣಿ
ಮಣಿ ಮ್ಯಾಲ ಕಂಬ
ಕಂಬದ ಎಡಬಲಕ ಎರಡ ದೀಪ
ದೀಪದ ಮ್ಯಾಲ ಬರಿ ಬಯಲು
ಮ್ಯಾಲ ಕರಿಹೊಲ ಹೊಲದಾಗೊಂದು ಹಾದಿ
ಹೊಲದ ತುಂಬಾ ಎಮ್ಮೆ ಮೈತಾವು
Answer : ತುಟಿ, ಮೂಗು, ಕಣ್ಣು, ಹಣೆ, ತಲೆ, ಬೈತಲೆ, ಹೇನು !
Click on each Riddle to View Answer
136. ಎದ್ದಾಗ ಹೆಣ್ಣಿಗ್ಹೋದ
ಮದ್ದಾನಕ್ಕೆ ಮದುವೆಯಾಯ್ತು
ಸಂಜೆಗೆ ಸೋಬನಾಯ್ತು
ಹೊತ್ತಾರೆಗೊಂದು ಮಗುವಾಯ್ತು
Answer : ಕಡೆಗೋಲು !
137. ಸಾರಿ ಬಂದಾದೆ ಸಣ್ನ ಸಾವಂತಿಗೆ ಹೂವ್ಗೆ
ಊರಿಗೆ ಬಂದಾದೆ ದೊಡ್ಡ ಹಬ್ಬ
ಕೋಳಿ ಕೂಗೋ ಹೊತ್ತಿಗೆ ಬಂದಾದೆ
ಪುಟ್ಟ ಕುಂಬಳಕಾಯ್ಗೆ
ಸಾರಿಸು ಸಗಣಿ ಹಾಕು
ಸಣ್ಣ ಸಾವಂತಿಗೆ ಮುಡಿಸು ಅಂತದೆ
Answer : ದೀಪಾವಳಿ !
138. ಹೋದ ನೆಂಟ
ಬಂದ ನೆಂಟ
ಬಂದ ದಾರಿ ಗೊತ್ತಿಲ್ಲ
Answer : ನೆರಳು !
139. ಕಟ್ಟಿದರ ಗಂಟು
ಹೆಣಿದರ ಹಾವು
Answer : ಕೂದಲು !
140. ಸಮುದ್ರದಲ್ಲಿ ಹುಟ್ಟಿ
ಸರ್ವರಿಗೂ ಬೇಕಾಗಿ
ಬೆಲೆಯಲ್ಲಿ ಕಿರಿದಾಗಿ
ಊಟಕ್ಕೆ ಮುಂದಾಗಿ
ನೋಟಕ್ಕೆ ಹಿಂದಾಗಿ
ಉಳಿದಿರುವದು ಏನದು
Answer : ಉಪ್ಪು !
Click on each Riddle to View Answer
141. ಕತ್ಲೆ ಮನೇಲಿ ಹಂದಿ ಗುಟ್ರಾಕುತ್ತೆ
Answer : ಬಾಗಿಲು !
142. ಮಲಿ ಹಿಡ್ಯಾಕಿಂತ ಮೊದಲ
ಏನ ಹಿಡಿಬೇಕು
Answer : ಹಾಲ ಹಿಂಡೊ ತಂಬಗಿ !
143. ಎತ್ತರ ಹಾಸಿನ ಮ್ಯಾಲ ಉತ್ತರಾಣಿ ಗಿಡಹುಟ್ಟಿ
ಉತ್ತರೂ ಬರಲಿಲ್ಲ ಕಿತ್ತರೂ ಬರಲಿಲ್ಲ
Answer : ಹಚ್ಚೆ !
144. ಒಂದ ಮಡಕಿ
ಮಡಕ್ಯಾಗ ಕುಡಕಿ
ಕುಡಕ್ಯಾಗ ಸಮುದ್ರ
Answer : ಎಳನೀರ !
145. ಸಾವಿರ ರೂಪಾಯೀ ತೋಟ
ನೂರು ರೂಪಾಯಿ ಬಟ್ಟೆ
ಸಾಸಿವೆಗಾತ್ರ ಕಲ್ಲು ಬಿದ್ದರೆ ಹಾಳು
Answer : ಕಣ್ಣು !
Click on each Riddle to View Answer
146. ತುಂಡು ಗೋಡೆಯ ಮೇಲೆ ತುಂಬು ಚಂದ್ರ ಕೂತಿದ್ದಾನೆ
Answer : ಮೂಗುತಿ !
147. ಮೈಯೆಲ್ಲಾ ಕಣ್ಣಿದ್ರು
ಕಾಣೋದು ಮಾತ್ರ ಎರಡೇ ಕಣ್ಣು
Answer : ನವಿಲು !
148. ಚಿಂತಿ ಮಾಡ್ತ ಸಂತಿಗೆ ಹೋದೆ
ಬೆನ್ನ ತಟ್ಟಿ ಬೆಲೆ ಮಾಡಿದರು
Answer : ಗಡಿಗೆ !
149. ಹಸಿರು ಹೊಲದಲ್ಲಿ ಕರೀ ಹಾವು ಮಲಗಿದೆ
Answer : ಪಡುವಲಕಾಯಿ !
150. ಸಿಮೆಂಟ್ನ ಚಡಿ ನೆಲಕ್ಬಡಿ
Answer : ಸಿಂಬ್ಳಾ !
Click on each Riddle to View Answer
151. ಊರಿಗೊಬ್ಳೆ ಪತಿವ್ರತೆ , ಅವು ಊರ ಮುಂದೆ ನೀರೊಕ್ಕೊಂಡು ನಿಂತವೈ
Answer : ತೆಂಗು !
152. ಏನೆಲೆ ಹುಡುಗಿ ನಿನ್ನ ತಲೆ ಮೇಲೆ ಒಂದು ಮಂಕರಿ ಕಸ
ಹೊಟ್ಟ್ಯಾಗ ಪಾಮರಸ
Answer : ತೆಂಗಿನಕಾಯಿ !
153. ಉದ್ದನೆ ಹೆಂಗಸಿಗೆ
ಬದ್ದೆಲ್ಲ ಹುಳುಕು
ಅವಳು ಕೊಟ್ಟ ಹಾಲೆಲ್ಲ ಬಹುರುಚಿ
Answer : ಈಚಲು ಮರ !
154. ಅಂಗೈ ಅಗಲ ದೇವಸ್ಥಾನ ಚೋಟುದ್ದ ಆಳು
Answer : ಲಾಟೀನು-ಬತ್ತಿ !
155. ಹಜಾರದಲ್ಲೊಂದು ಬಜಾರದ ಪೆಟ್ಟಿಗೆ
Answer : ಬೆಂಕಿಪೊಟ್ಟಣ !
Click on each Riddle to View Answer
156. ಊರೆಲ್ಲಾ ಸುತ್ತಿ ರಾತ್ರಿ ಹಂತಿಲ್ಲಿ ಬಂದು
ಪದಾ ಹಾಡಿ ದುಕ್ಕ ಕೊಡತೈತಿ
Answer : ಸೊಳ್ಳೆ !
157. ಮಾಡಿ ಮೇಲಿನ ಮೆಣಸಿನ ಗಿಡ ನೀರಿಲ್ಲದೆ ಬತ್ತಿ ಹೋಯಿತು
Answer : ದೀಪ !
158. ಜೊತೇಲಿ ಹುಟ್ಟಿ ಜಾತಿ ಕೆಟ್ಟೆ
ಕಡೆಗೆ ಹುಟ್ಟಿ ಮತಿ ಕೆಟ್ಟೆ
ಕಾಡಿಗೆ ಹೋಗಿ ಕೈಗೆ ಸಿಕ್ಕಿ ಶಕ್ತಿ ಕೊಟ್ಟೆ
Answer : ತಲೆ-ಹಲ್ಲು-ಹೇನು !
159. ಗಂಗಾಳ ತುಂಬ ಅಡಕಿ
ನಿನಗ ಎಣಸಲಕ್ಕ ಆಗಲ್ಲ
ನಿಮ್ಮಪ್ಪನಿಗೂ ಆಗಲ್ಲ
Answer : ಚುಕ್ಕೆ !
160. ನನ್ನ ಹೊಟ್ಟೆ ಮೇಲೆ ನಿನ್ನ ಹೊಟ್ಟೆ
ನನ್ನ ತೂತಿಗೆ ನಿನ್ನ ಬೆಣೆ
Answer : ರಾಗಿಕಲ್ಲು, ರಾಗಿಗೂಟ !
Click on each Riddle to View Answer
161. ಕರಗಲ್ ಕಟ್ನಾ ಕಡ್ಗಲ್ ಕಟ್ನಾ
ಬೆಣಗಲ್ ಕಟ್ನಾ ಪನ್ನಿರ್ಬಾವಿ
Answer : ತೆಂಗು !
162. ಈಟ್ಟುದ್ದ ಹುಡುಗಿಗೆ ಮಾರುದ್ದ ಜಡೆ
Answer : ಸೂಜಿ-ದಾರ !
163. ಅಂಗಡೀಲ್ಮಾರೋದಲ್ಲ
ತಕ್ಡೀಲ್ತೂಗೋದಲ್ಲ
ಅದಿಲ್ದಿದ್ರೆ
ನಿಮ್ಮ ಮನೇ ದೇವರು ನಡೆಯೆದೇ ಇಲ್ಲ
Answer : ಸಗಣಿ !
164. ಹಕ್ಕಿ ಹಕ್ಕಿ ಹಾರಲಾದರ ಹಕ್ಕಿ
ತಾಮ್ರದ ಹಕ್ಕಿ ತಂತಿ ಹಕ್ಕಿ
ಫಲಹಾರ ಸ್ವಾಮಿ ಪಾದಕ್ಕೆ ಬಿದ್ದು
ಹರಿದಾಳಮ್ಮನ ಚೊಂಪೆ ಕಟ್ಟಿ
ಹೆಸರು ಹೇಳಿದವರಿಗೆ ಮೊಸರನ್ನ
Answer : ಎಳನೀರು !
165. ಒಂದು ಗಳು ಒಡೆದು
ಒಂಬೈನೂರು ಭಾಗ ಮಾಡಿ
ಹರದನಹಳ್ಳಿ ಕಟ್ಟಿ
ಹರದನಹಳ್ಳಿ ತೇರು ಕಟ್ಟಿ
ತೇರಿನ ತುದಿ ಕಟ್ಟಿ ಸೇರಿಸಿದೆ
Answer : ಬಿದಿರು !
Click on each Riddle to View Answer
166. ಆಕಾಶದ ಗಿರಿಗಿರಿ ಮೊಟ್ಟೆ
ಕೇಸುನಾ ನಾಯಕ್ನಾ ಕತ್ತೆ
ಬೆಟ್ನ ತುದಿ ಬೆಣ್ಣೆ
Answer : ಅಡಿಕೆ, ಎಲೆ, ಸುಣ್ಣ !
167. ನಮ್ಮವ್ವನದು ಬಿದ್ದದೆ
ನಮ್ಮಪ್ಪನದು ಎದ್ದದೆ
Answer : ತಾಲಿ, ಅತ್ಕಡಕು !
168. ಅಡ್ಡ ಕುಯ್ದರೆ ಚಕ್ರವಲ್ಲ
ಉದ್ದ ಕುಯ್ದರೆ ಶಂಖವಲ್ಲ
ಮೂಸಿದರೆ ವಾಸನೆ
ಬಿಡಿಸಿದರೆ ಹತ್ತಿಪ್ಪತ್ತು
Answer : ಈರುಳ್ಳಿ !
169. ಬಣ್ಣ ಬಣ್ಣವಿದ್ದರೂ ಗಿಳಿಯು ನಾನಲ್ಲ
ನಾಲಿಗೆಗಳೆರಡಿದ್ದರೂ ಉರಗ ಜಾತಿಯವನಲ್ಲ
ವಿಷವು ಹೊಟ್ಟೆಯೊಳಗಿದ್ದರೂ ಕರಿಕಂಠನಲ್ಲ
ಎಲ್ಲರ ಮನೋಗತವನ್ನೆಲ್ಲಾ ತಿಳಿಸುವೆನಲ್ಲ
Answer : ಪೆನ್ನು !
170. ನೀರಿದ್ದ ಕೆರೆ ಬರಡು ನೀರಿಲ್ಲದ ಕರಿಯಲ್ಲಿ ಬೆಳೆ
Answer : ಇಡ್ಲಿ !
Click on each Riddle to View Answer
171. ಮೊಲಕ್ಕ ಕೋಡ ಎಷ್ಟು
Answer : ಕೋಡಾ ಇಲ್ಲ !
172. ವಂದ್ನರಿಗೆ ವಂದ್ಬಾಲಾ ವಂಬತ್ನರಿಗೂ ವಂದೇಬಾಲಾ
Answer : ತೆಂಗು !
173. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಣ್ಣ , ಬಾವಿಗೆ ಹಾಕಣ್ಣ
Answer : ಬಾಳೆ ಹಣ್ಣು !
174. ನೆತ್ತಿಲಿ ತಿಣತತಿ
ಸುತ್ತಲೆಲ್ಲಾ ಕಾರಿಕೋತತಿ
ಎತ್ತಿ ಒಗದರ ಎಡ್ಡ ಹೋಳಾಗತತಿ
Answer : ಬೀಸೊಕಲ್ಲ !
175. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ
Answer : ಕಣ್ಣು !
Click on each Riddle to View Answer
176. ಮಟ ಮಟ ಮಧ್ಯಾಣದಾಗ
ಚಿಟಗುಬ್ಬಿ ತಲಿ ಒಡದೈತಿ
Answer : ಹತ್ತಿ ತೊಳಿ !
177. ಚಿಕ್ಕ ಮನೆಗೆ ಚಿನ್ನದ ಬೀಗ
Answer : ಮೂಗಬಟ್ಟು !
178. ಗುಂಪೊಂದ್ಗಿಡದಲ್ಲಿ ಕೆಂಪಣ್ಣ ಕುಂತವನೆ
Answer : ಮೆಣಸಿನಕಾಯಿ !
179. ಪಂಚವರ್ಣದ ಕುದುರೆ ಪರದೇಶಕ್ಕೆ ಹೋಯಿತು
ಬಿಳಿಯ ಕುದುರೆ ಬೀದಿಗೆ ಹೋಯಿತು
ಕಪ್ಪು ಕುದುರೆ ಕೇರಿಗ್ಹೋಯ್ತು
Answer : ಬೆಂಕಿ, ಬೂದಿ, ಹೊಗೆ !
180. ಓಲಗ ಕಾಣದ ಚಪ್ಪರ
ಕರಿಮುತ್ತಿನ ಗೋಪುರ
Answer : ದ್ರಾಕ್ಷಿ ಚಪ್ಪರ ಮತ್ತು ಹಣ್ಣು !
Click on each Riddle to View Answer
181. ಬಂದ್ಬಂದ್ಕುಳ್ಳೀಗೆ ಕಯ್ಯಾಕ್ತರ
ಎಸಳು ಎಂಬತ್ತು ಕುಸುಳು ಮೂವತ್ತು
Answer : ಚಿಂಬ !
182. ಅಪ್ಪ ಅಪ್ಪ ಮರ ನೋಡು
ಮರಕ್ಕೆಲ್ಲ ಕೊಂಬೆ ನೋಡು
ಕೊಂಬೆಗೆಲ್ಲ ಕೊನೆ ನೋಡು
ಕೊನೆಗೆಲ್ಲ ಎಲೆ ನೋಡು
ಎಲೆಗೆಲ್ಲ ತೂತು ನೋಡು
ತೂತಿಗೆಲ್ಲ ಮಾತು ನೋಡು
Answer : ಶ್ಯಾವಗೆ ಒಳ್ಳು, ಶ್ಯಾವಗೆ !
183. ಕೆಂದೆತ್ತಿಗೆ ಒಂಬತ್ತು ಕನ್ನ
Answer : ಹುತ್ತ !
184. ಹಸಿ ಮರಕ್ಕೆ ದಸಿ ಹೊಡೆದಿದೆ
Answer : ಮೂಗುತಿ !
185. ಸುಬ್ರಗಟ್ಟ ನಿಮ್ಮ ಹಬ್ಬಕ್ಕೆ ಬಂದು
ನಿನ್ನ ದೇವರ ತಲೆ ಮೇಲೆ ಉಚ್ಚೆ ಹುಯ್ತು
Answer : ತೆಂಗಿನಕಾಯಿ !
Click on each Riddle to View Answer
186. ಪಾತರದವ ಮನಿಗಿ
ದೋತರದವರು ಹೋದರ
ಯಾತರ ಮ್ಯಾಲ ಕೂಡತಾರ
Answer : ಮಾತಿನ ಮ್ಯಾಲ !
187. ಬಿಸಿಲಿಗೆ ಬಿರಿಯಣ್ಣ
Answer : ಕೆಕ್ಕರಿಕೆ ಕಾಯಿ !
188. ಬೆಳ್ಳಿಯ ಕೋಲನ್ನು ಹಾಕುವರುಂಟು ತೆಗೆವರಿಲ್ಲ
Answer : ರಂಗೋಲೆ !
189. ನಕ್ಕರೆ ಉದುರುವುದು, ಹಲ್ಲುಗಳು ಒಂದೊಂದು, ಹೆಕ್ಕಿಕ್ಕಿ, ಬಿಡಿಸಿ ಒಗಟನ್ನ ಸರ್ವಜ್ಞ ||
Answer : ದಾಳಿಂಬೆ ಹಣ್ಣು !
190. ನೋಡಿದರೆ ಕಪ್ಪು
ನಾವೆಲ್ಲಿ ಹೋದ್ರೂ ನಮ್ಮ ಹಿಂದೇ ಬತ್ತದೆ
Answer : ನೆರಳು !
Click on each Riddle to View Answer
191. ಕಡದರೆ ಹಾಲ
ಹೊಡದರೆ ಹಾಲ
ಒಡದರ ಸಾವಿರ ಮಕ್ಕಳ
Answer : ಹಲಸಿನ ಹಣ್ಣು !
192. ಒಂದು ಬತ್ತಿ
ಮನೆಯೆಲ್ಲಾ ಬೆಳಕು
Answer : ದೀಪ !
193. ಇಬ್ರು ವೊತ್ಕ ಬಂದುದ್ದ
ಐದು ಜನ ಇಳೀಕ್ಕಂಡ್ರು
Answer : ಗಾಡಿ !
194. ಗುಗ್ಗರಿ ಮೆಯ್ಯಾಕಿ ಗುಲ್ಗಂಜಿ ಕಣ್ಣಾಕಿ
ಕೆಸ್ರಾಗ ಕಿಸ್ಗಾಲ ಹಾಕಾಕಿ
Answer : ಕಪ್ಪಿ !
195. ಹಳದಿ ಕೋಟೆ ದಾಟಿದರೆ ಕೆಂಪು ಕೋಟೆ
ಕೆಂಪುಕೋಟೆ ದಾಟಿದರೆ ಕರಿ ಸಿಪಾಯಿಗಳು
Answer : ಪಪ್ಪಾಯಿ !
Click on each Riddle to View Answer
196. ಮೊಳದಗಲ ಎಲೆ
ಮಾರುದ್ದ ಗೊನೆ
ರಾಜನು ಕ್ಷೀಣವಾದರೆ ಪ್ರಜೆಗಳು ಬಲಿಷ್ಟರಾಗುತ್ತಾರೆ
Answer : ಬಾಳೆಗೊನೆ !
197. ಬಿಳಿ ಎತ್ತ ಬೇಲ್ಯಾಗ ಜಿಗಿತತಿ
Answer : ಅಳ್ಳ !
198. ಹಗ್ಗದ್ಲೆ ಬಿಗದವ್ರ ನೆತ್ತಿ ಬಡದ್ರ
ಇದ್ದವ್ರು ಮ್ಯಾಲೆಲ್ಲಾ ಗುಣಗಾಡತಾರ
Answer : ಚರ್ಮವಾದ್ಯ !
199. ಹತ್ತು ತಲೆ ಉಂಟು ರಾವಣನಲ್ಲ
ಕಿರೀಟವುಂಟು ರಾಜನಲ್ಲ
ಬಾಲವುಂಟು ಹನುಮಂತನಲ್ಲ
ಇದ ಹೇಳಿದವರಿಗೆ ಕಡಿದಲ್ಲ
Answer : ಹೀರೇಕಾಯಿ !
200. ರೆಕ್ಕೆಯುಂಟು ಪಕ್ಷಿಯಲ್ಲ
ನೀರುಂಟು ಬಾವಿಯಲ್ಲ
ಬಿಳಿಯುಂಟು ಬೆಣ್ಣೆಯಲ್ಲ
ಕಪ್ಪುಂಟು ಕಾಡಿಗೆಯಲ್ಲ
Answer : ಕಣ್ಣು !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ