ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೩ (201 to 300)
Kannada Riddles Questions & Answers List Part-3 (201 to 300)
ಈ ಒಗಟುಗಳು ನಿಮಗೆ ಗೊತ್ತೆ?
Click on each Riddle to View Answer
201. ಕಲ್ಲೊಳಗೆ ಸಿಡಿದೊಡೆದು ಹಾಲೆ ಹೂವಾದರೇನೆ
ನಾರಿಯರ ಕೈಯೊಳಗೆ ತಾನೀಸಿ ಹೋದ
Answer : ರಂಗೋಲಿ !
202. ವಗತನ ಒಂದ ಹಿಕಮತಿ ದೊಡ್ಡದ
ಬಂಗಾರದಾಗೊಂದ ಸಿಂಗಾರ ದೊಡ್ಡದ
ಸಕ್ಕರಿಗಿಂತ ರುಚಿ ಭಲೆ ದೊಡ್ಡದ
Answer : ಕುಂಕುಮ, ರಾಟಲ (ರಾಟಿ) ಹಲಪುಡಿ !
203. ಸುತ್ತ ಮುತ್ತ ಸುಣ್ಣದ ಗ್ವಾಡೆ
ಯತ್ಲಗ್ ನೋಡಿದ್ರು ಬಾಗ್ಲಿಲ್ಲ
Answer : ಕೋಳಿಮೊಟ್ಟೆ !
204. ಅಂಕುಡೊಂಕಿನ ಮರ
ಸಂಕೋಲೆ ಬಿಗಿದ ಮರ
ಕಚ್ಚಿದವರ ಬಾಯಿಗೆ ನೀರು ಹೊಯ್ಯುವ ಮರ
Answer : ಕಬ್ಬು !
205. ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ
Answer : ನೀರು !
Click on each Riddle to View Answer
206. ಮೂಗನಾಯ್ಕನ ಕೋಟೆಗೆ
ಐದು ಜನಾ ಕಳ್ಳರು ಬಿದ್ದರು
ಇಬ್ಬರು ಹೊತುಗೊಂಡು ಬಂದರು
ಮೂವರು ಹಾಗೇ ಬಂದರು
Answer : ಸಿಂಬಳ !
207. ನಾನೊಂದು ಜತೆ ಎತ್ತು ತಂದೆ
ಎಡದ್ದು ಬಲಕ್ಕಾಗುವುದಿಲ್ಲ
ಬಲದ್ದು ಎಡಕ್ಕಾಗುವುದಿಲ್ಲ
Answer : ಎಕ್ಕಡ !
208. ಅಪ್ಪಪ್ಪಾ ಮರದ ಉದ್ದ ನೋಡು
ಆರೊ ಬಡ್ಡಿ ಅಕ್ಕಿ ನೋಡು
ನೀರಿಲ್ಲದ ಕೆರೆ ತುಂಬದ ನೋಡು
ಸುಣ್ಣಿಲ್ಲದ ಗ್ವಾಡೆ ವೊಳೆಯೋದು ನೋಡು
Answer : ಆಳಮಾ, ತೆಂಗಿನಮರ, ಎಳ್ನೀರು, ತೆಂಗಿನಕಾಯಿ !
209. ಬುಡ್ಡ ಬುಸುಗ ಮುಳ್ಳಾಗೆ ಹೂಣ
Answer : ಈರುಳ್ಳಿ !
210. ಭೂಲೋಕದಲ್ಲಿಲ್ಲ
ಅಂಗಡೀಲಿಲ್ಲ
ಔಷಧಿಗೆ ಬರ್ತದೆ
Answer : ಆಲಿ ಕಲ್ಲು !
Click on each Riddle to View Answer
211. ನಿಲಗಿ ಎತ್ತು ನಿಗರಿಸಿಡ
Answer : ಛತ್ರಿ !
212. ಒಬ್ಬಳದು ಹತ್ತಿ ಬಾಯಿ
ಒಬ್ಬಳದು ಹರವ ಬಾಯಿ
ಒಬ್ಬಳದು ಗುಂಬ ಬಾಯಿ
ಕಲಗಂಚಿ, ತತ್ರಾಣಿ, ಕೊಡ
Answer : ತಪ್ಪಲಿ !
213. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ
Answer : ಗಿಳಿ !
214. ಅದರದರ ಅಂತರು
ಚದುರಿಗೆ ಚಪ್ಪರು
ಮೇಲೊಂದು ಕಳಸ
Answer : ಕಡಬಿನ ಚೆಟ್ಟ !
215. ಗರಗರನೆ ತಿರುಗುವುದು ಚಕ್ರ ತಾನಲ್ಲ
ಗರಿಗಳೆರಡುಂಟು ಪಕ್ಷಿ ತಾನಲ್ಲ
ಶಿರದೊಳು ಕೊಂಬುಂಟು ಮೃಗಜಾತಿಯಲ್ಲ
ಸಕಲರ ಮನೆಯೊಳಗೆ ತಾನಿಲ್ಲದಿಲ್ಲ
Answer : ಬೀಸುವ ಕಲ್ಲು !
Click on each Riddle to View Answer
216. ಒಕ್ಕಳ ಕಡ್ಲ್ಯಾಗ ಒಂದೇ ಹಳ್ಳ
ತಾರೆಗಳಲ್ಲಿ ಚಂದ್ರ
Answer : ತಾಲಿ !
217. ಬೆಳ್ಳಿ ಮುಕಾ ಕೆಂಪಿ ಜಡೆ ಚಿನ್ನದ್ಮೂಗು
Answer : ಪಾರಿಜಾತಾ !
218. ಕರಿ ಕಲ್ಲಿನ ಮ್ಯಾಲ ಬಿಳಿ ರಂಗೋಲಿ
ಚೆಲ್ಲಿ ಪರಮಾತ್ಮ ಪೈತ ಆಡತಾನ
Answer : ಗಡಗಿ, ಮಜ್ಜಿಗಿ, ರೇವಗಿ !
219. ಹರದುವ್ವ ತರದುವ್ವ
ವರಕೊಟ್ರೆ ಬರದುವ್ವ
Answer : ಹತ್ತಿ ಹುವ್ವ !
220. ನೀರಾಗ್ ನಿಂಬಿ ಹಣ್ಣು ತೇಲಾಡ್ತತಿ
Answer : ಬೆಣ್ಣೆ !
Click on each Riddle to View Answer
221. ಹತ್ತ ಮಂದಿ ಬಡುತಾರ
ಐದ ಮಂದಿ ತಿರುತಾರ
ಅಗಸಿಗಿ ಬರಾನಾ ಹೊಟ್ಟಿ ಉಬ್ಬತೈತಿ
Answer : ಹತ್ತಬೆರಳು, ಐದ ಬೆರಳ, ರೊಟ್ಟಿ !
222. ರಾಜನ ಮಗಳು ಹೆಸರು ಡಿಲ್ಲಿ
ಅವಳ ಹೊಟ್ಟೆಯೊಳಗೆ ಆರು ತಿಂಗಳ ಮಗು
ಅರಿಶಿನ ಬಿಲ್ಲೆ ಹಚ್ಚುತಾಳೆ
ಯಾರೊಡನೆಯೂ ಮಾತಿಲ್ಲ
ಹೇಳದವರಿಗೆ ಅರವತ್ತು ಕಜ್ಜಾಯ
ಅರವತ್ತು ರೂಪಾಯಿ
Answer : ತಾಳೆಹೂವು !
223. ಕರಿ ಗುಡಿ
ಕರಿ ಗುಡಿಯೊಳಗೊಂದು ಬಿಳಿಗುಡಿ
ಅದ ಹೊಕ್ಕಿ ಪೂಜೆ ಮಾಡೋನೊಬ್ಬ ಬಕ್ಕ ಪೂಜಾರಿ
Answer : ಹಿಟ್ಟಿನ ಮಡಿಕೆ, ಹಸೀಟು, ದೊಣ್ಣೆ !
224. ಕಡದರ ಕಚ್ಚ ಆಗೂದಿಲ್ಲ
ಹಿಡಿದರ ಮುಟ್ಟಗಿ ಆಗೂದಿಲ್ಲ
Answer : ನೀರು !
225. ನಾಕ್ ಬಾವ್ಯಾಳ ನೀರು ಒಂದೇ ಬಾವ್ಗೆ ಬೀಳ್ತತಿ
Answer : ಹಾಲು ಕರೆಯುವುದು !
Click on each Riddle to View Answer
226. ಸುತ್ತ ಬೇಲಿ ನಡಕ ಕೀಲಿ
Answer : ಒಡ್ಯಾಣ !
227. ಸಿಟ್ ಸಿಟ್ ಸೀರೆ ಉಟ್ಕಂಡಿ ಸಿಗ್ರ್ ದೆಲಿ ಕೊಯ್ತುದೆ
Answer : ಮಿಗಾ !
228. ಅಕ್ಕನ್ದು ಕಾಸನಗಲ
ಮಾವುನ್ದು ಮಾರುದ್ದು
Answer : ನುಗ್ಗೆ ಎಲೆ, ನುಗ್ಗೆಕಾಯಿ !
229. ಮುಂದ್ವಂದ್ ಕೆಂಪೀ ಅಮ್ಮಾ ಹಿಂದೆ ನೂರರ್ಜನಾ
Answer : ಬಾಳೆ ಗೊನೆ-ಹಣ್ಣು !
230. ಆಕಾಶದ ನಡು
ವೇದದ ಆದಿ
ನಾರಿಯ ಕೊನೆ
ಇವು ಕೂಡಿ ಹರಿಯುವ
ನದಿ ಯಾವದು
Answer : ಕಾವೇರಿ !
Click on each Riddle to View Answer
231. ಮುಳ್ಳು ಮುಕುಳ್ಯಾಗಿಟಗೊಂಡು
ಒಳ್ಳೊಳ್ಳೆಯವರನ್ನೂ ಬಿಡುವುದಿಲ್ಲ
Answer : ಚೇಳು !
232. ಬೆಳ್ಳಿ ಗುಂಡು ಒಳ್ಳೆ ಚೆಂಡು
ನೀರನಲ್ಲಿ ತೇಲುವದು
ಬೆಂಕಿಯಲ್ಲಿ ಕರಗುವದು
Answer : ಬೆಣ್ಣೆಯ ಮುದ್ದಿ !
233. ನೆತ್ತೀ ವಡದು ನೀರ ಕುಡದರ
ಹೊಟ್ಟಿ ಹಗರ ಆಗತದ
Answer : ಸೋಡಾ ವಾಟರ !
234. ಕೆರೆ ಏರಿ ಮೇಲೆ ಮೂವರು
ಒಬ್ಬನು ತೇಲುವನು
ಒಬ್ಬನು ಮುಳುಗುವನು
ಮತ್ತೊಬ್ಬ ಕರಗುವನು
Answer : ಎಲೆ, ಅಡಿಕೆ, ಸುಣ್ಣ !
235. ಊರೆಲ್ಲಾ ಅಲೆಯೋದು , ಬಾಗಿಲ ಸಂದೇಲಿ ಕೂರೋದು
Answer : ಪಾದರಕ್ಷೆ !
Click on each Riddle to View Answer
236. ಮುಚ್ಚಿದ ಬಾಗಿಲ ತೆಗೆಯುವದಿಲ್ಲ
Answer : ಗೋರಿ !
237. ಹಣೆಯ ಮೇಲೆರಡು ಕೈ
ಹಣೆಯೇ ಅದಕೆಲ್ಲ ಮೈ
ಕೊಟ್ಟರೆ ಅದಕುಂಟು ಪ್ರಾಣ
ನಾನಾ ಲೋಹದ ತ್ರಾಣ
Answer : ಗಡಿಯಾರ !
238. ತಾಯಿ ಪಾತಾಳಕ್ಕೆ
ತಂದೆ ಆಕಾಶಕ್ಕೆ
ಮಗ ವ್ಯಾಪಾರಕ್ಕೆ
ತೊಟ್ಟಿಲಿನ ಶಿಶು ದೇವರಿಗೆ
Answer : ಅಡಿಕೆ ಮರ ಅಥವಾ ತೆಂಗಿನ ಮರ (ಬೇರು, ತುದಿ, ಕಾಯಿ, ಗರಿ) !
239. ಮಹಾ (ನೆಡೊ) ಸಾಗ್ರಲ್ಲಿ ನಿಂಬಿ ಹಣ್ ತೇಲ್ತು
Answer : ಮಜ್ಗೆ-ಬೆಣ್ಣೆ !
240. ಒಬ್ಬ ಬ್ರಾಹ್ಮಣನಿಗೆ
ಮೂರು ಗುಧಸ್ಥಾನ
Answer : ಹರಳು ಕಾಯಿ !
Click on each Riddle to View Answer
241. ಚೊಟ್ಟಿಳ್ಳೆ ಯಲೆಯಿಲ್ಲೆ ಬೆಳಿ ಬದ್ನೆಕಾಯಿ
Answer : ಕೋಳಿಮೊಟ್ಟೆ !
242. ಆಕಾಶ ಕಾಣದ ನೀರು , ಆಗಸ ಕಾಣದ ಬಂಡೆ
Answer : ತೆಂಗಿನಕಾಯಿ !
243. ಅವ್ವ ಹಡೀತಾಳ
ಮಗಳು ಮದುವೀಗಿ ಬರತಾಳ
Answer : ಬಾಳೆಯ ಗಿಡ !
244. ಜಾಣಜಾಣರು ಜಾಡ್ಸಿ ಮೊಟ್ಟೆ ಕಟ್ಟಿ
ಮೊಟ್ಟೆ ಮುಂದೆ ಆಳು ಹಿಂದೆ
Answer : ತೊಪ್ಪೆಹುಳು !
245. ಬಿಳಿಯಣಗಿತ್ತಿ ಬಾಯಲ್ಬಸ್ರು
ಕರಿಯಣಗಿತ್ತಿ ಕುಂಡೆಲ್ಬಸ್ರು
Answer : ಬಾಳೆ !
Click on each Riddle to View Answer
246. ಭೂಮಿಯೊಳಗೆ ಬೇರು
ಮೇಲ್ನೋಡಿದ್ರೆ ಚೆಂಡು
ಕೂದ್ನೋಡಿದ್ರೆ ಎಲೆಲೆ
Answer : ಕೋಸು !
247. ದೆವ್ವಿನಂತಾ ರಂಡಿ
ದೇವರ ಮ್ಯಾಲ ಉಚ್ಚಿ ಹೊಯ್ತತಿ
Answer : ಟೆಂಗ !
248. ಒಲಿಮ್ಯಾಲ ಮಾಡ್ತಾರ ಕುಬಸಿನ ಗಳಿಗಿ
Answer : ಹೋಳಿಗೆ !
249. ಮೂರು ತರದ ಹಕ್ಕಿ ಈಚೆಗೆ ಬಂದಾಗ ಒಂದೇ ರೀತಿ
Answer : ತಾಂಬೂಲ !
250. ಗಬ್ಬದ ಹುಡುಗಿ ಗುಡಾ ಏರ್ಯಾಳ
Answer : ತತ್ರಾಣಿ !
Click on each Riddle to View Answer
251. ಹಸುರ್ ಮನೆ ತುಂಬ
ಮುತ್ತಿನ ಮಕ್ಕಳು
ಅವೆಲ್ಲ ಯಾವಾಗಲೂ ಒಟ್ಟಾಗಿರ್ತವೆ
Answer : ದಾಳಿಂಬೆ !
252. ಕೈಯಿಲ್ಲ ಕಾಲಿಲ್ಲ
ಈಜು ಮೊದಲೇ ಗೊತ್ತಿಲ್ಲ
ಹುಟ್ಟಿದಂದಿನಿಂದ ನೀರಮೇಲೆ ತೇಲುತಿರುವೆ
Answer : ದೋಣಿ !
253. ವೆಂಕಪ್ಪಯ್ಯನ ತೋಟ ಎಮ್ಮನೂರ ಗೂಟ
ಹೋಗೋಕೆ ದಾರಿಯಿದೆ ಬರೋಕಿಲ್ಲ
Answer : ಮೀನು ಕುಣಿ !
254. ಬಾಯೀಲೆ ತಿನ್ನತೈತಿ ಮಗ್ಗಲರೆ ಚಲ್ಲತೈತಿ
Answer : ಬೀಸುವ ಕಲ್ಲು !
255. ಕಾಲಿಲ್ಲದಾತ ಮರ ಹತ್ತಿದ
ಕೈಯಿಲ್ಲದಾತ ಹಣ್ಣ ಕುಯ್ದ
ನಾಲಗೆ ಇಲ್ಲದಾತ ರುಚಿ ನೋಡಿದ
Answer : ಹಾವು, ಕಾಗೆ, ಇರುವೆ !
Click on each Riddle to View Answer
256. ಪಕ್ನೆ ಬಿತ್ತು ಆಪ್ಪೆ ಹಣ್ಣು ಹೆಕ್ಪೊರಿದ್ದೊ ತಿಂಬೋರಿಲ್ಲೆ
Answer : ಮಗು (ಶಗ್ಣಿ) (ಕಾಸ್ನಕಾಯಿ) !
257. ಉತ್ತೊಲ್ದಲ್ಲಿ ತೆಕ್ಕಮ್ಮಡಿಚ್ಕಂಡು ಮನಗದೆ ಅಂದ್ರ
Answer : ಉಳ್ಮಿಳಿ !
258. ಮೋಸಗಾರ ಒಬ್ಬ
ಸುಳ್ಳೇಗಾರ ಒಬ್ಬ
ನಿಜಗಾರ ಒಬ್ಬ
Answer : ತಿಗಣೆ, ನೊಣ, ಸೊಳ್ಳೆ !
259. ಬಾಗಲಾ ಮುಚಗೊಂಡ
ಬಾಂಗ್ಡಾ ಆಡ್ತಾರ
Answer : ಗೋದಿ ಹುಗ್ಗಿ !
260. ಅಗಲಿಗೆ ಅನ್ನ ಇಕ್ಕಾದೆ
ನೆಲಿನ ಮೇಲಿನ ಬೆಳ್ನೀರ ನೋಡ್ತಾರೆ
Answer : ಮಜ್ಜಿಗೆ !
Click on each Riddle to View Answer
261. ಯಾತ್ಗಿರಿ ಹತ್ರ ಯಾತ ಎತ್ತಿದ್ದಕ್ಕೆ
ಮಧುಗಿರಿ ಹತ್ರ ಮೊಗ್ಗು ಬಿಡ್ತು
ರತ್ನಗಿರಿ ಹತ್ರ ಕಾಯಿ ಆಯ್ತು
Answer : ರಾಟೆ, ಕದಿರು ನೂಲು !
262. ಚಿಕ್ಕ ಚಿಕ್ಕ ಹೋರಿ ಚಿಕ್ಕಾಣಿ ಹೋರಿ
ಸಂಜಿಕ ಬರತದ ಬಪ್ಪರೆ ಹೋರಿ
Answer : ಕಾಂಜ !
263. ವಂದ್ಮರಾ ಹನ್ರ್ಡು ಟೊಂಗೆ ಮುವತ್ತೆಲೆ
ಹದನೆಯ್ದು ಕಪ್ಪು ಹದನಯ್ದು ಬಿಳುಪು
Answer : ವರ್ಶಾ !
264. ಆಕಾಶದಲ್ಲಿ ಎರಡು ಕಾಮನ ಬಿಲ್ಲು
ನಡುವೆ ಪುಟ್ಟದಾದ ಕೆಂಪು
ನಕ್ಷತ್ರ ಮಿನುಗುತ್ತಿರುತ್ತದೆ
Answer : ಹಣಿ, ಹುಬ್ಬು, ಕುಂಕುಮ !
265. ಸಿಂಹವಿದ್ದರೂ ಅರಣ್ಯವಲ್ಲ
ಗುಂಡಗಿದ್ದರೂ ಚಕ್ರವಲ್ಲ
ಇದಿಲ್ಲದಿದ್ದರೆ ನಡೆಯುವುದಿಲ್ಲ
Answer : ನಾಣ್ಯ !
Click on each Riddle to View Answer
266. ರೆಕ್ಕೆಗಲುಂಟು ಪಕ್ಷಿಯಲ್ಲ
ಗರಗರನೆ ತಿರುಗುವುದು ವಿಷ್ಣು ಚಕ್ರವಲ್ಲ
ಗಾಳಿಯುಂಟು ವಾಯುವಲ್ಲ
Answer : ಫ್ಯಾನ !
267. ಕಾಸಿನ ಕುದುರೆಗೆ ಮಾರುದ್ದ ಲಗಾಮು
Answer : ಸೂಜಿ-ದಾರ !
268. ಇಷ್ಟೊಪ್ಪ ಚಿನ್ನ
ಮನೆಯಲ್ಲ ರನ್ನ
Answer : ದೀಪದ ಕಡ್ಡಿ (ಬೆಂಕಿಕಡ್ಡಿ) !
269. ಗುದರಂಗಡಿ ಹುದಲಾಗ ಸಿಕ್ಕಾಳ
ಮಗ್ಗಲಿನವರನ್ನ ಸಣ್ಣ ಮಾಡ್ತಾಳ
Answer : ರುಬ್ಬುಗುಂಡ !
270. ಮರದಲ್ಲಿ ಮರ ಹುಟ್ಟಿ
ತಿನ್ನಬಾರದ ಹಣ್ಣು ಬಲು ರುಚಿ
Answer : ಮಗು !
Click on each Riddle to View Answer
271. ತುಪ್ಪ ತುಪ್ಪ ಎತ್ತಿದರೆ ಮೋಸ
Answer : ಬೇಲದ ಹಣ್ಣು !
272. ಚಿಲಕ ಮಲಕ ಹಾಕಾಕ ಬತೈ೯ತಿ ತೆಗ್ಯಾಕ ಬರೂದಿಲ್ಲ
Answer : ಹಣಚಿಬಟ್ಟು !
273. ಅಂಗ ಮಂಗನ ಅಕ್ಕಿ
ಒಂದು ಅರಗಿಣಿ ನುಂಗಿತು
ಅಂಗಾಲ ಹೊರಗೆ ತಲೆಹೊರಗೆ
Answer : ಅಂಗಿ !
274. ಭುಜಗಿರಿ ಏರಿಮೇಲೆ ಗಜನಿಂಬೆ ಮರಹುಟ್ಟಿ
ಎಸಳೆಂಬತ್ತು ಕುಶಲ ಮುವತ್ತು
ಅದ ಹೇಳ್ಗೋರಿಗೆ ಮಧುಗಿರಿ ಮಾನ್ಯವದ ಗಿರಿಉಂಬಳಿಗೆ
Answer : ಬಾಸಿಂಗ !
275. ಹಗಲ ಬೀಳ್ತದ ರಾತ್ರಿ ಏಳ್ತದ
Answer : ದಾವಣಿ !
Click on each Riddle to View Answer
276. ತಾಯಿ ಸದ್ರಿ ಮಗಳು ಮಿಟಗಾಣಿ
Answer : ಮೆಣಸಿನ ಗಿಡ-ಕಾಯಿ !
277. ತಲೆ ಚೆಚ್ಚಿ ಒಲೆ ಮ್ಯಾಲಾಕ್ಕೊಂಡು
ಕಾಲ್ ಮರ್ದು ಒಲೆವೊಳಿಕಾಕೊಂಡು ಕುಳ್ತವ್ರೆ
Answer : ಹರಳು ಗಿಡ !
278. ಅಬ್ಬೆ ಪಾತಾಳಾ ಅಪ್ಪಾ ಆಕಾಶಾ
ಮಗಾ ಯಾಪಾರಿ ಮಗು ಸುಂದರಿ
Answer : ಅಡಿಕೆ ಮರ !
279. ಅಮರೆ ಬೆಟ್ಟದಲ್ಲಿ
ಕುಮರೆ ಗಿಡ ಹುಟ್ಟಿ
ಅಪ್ಪ ಅಮ್ಮ ಅನ್ನಿಸಿತು
Answer : ಮೆಣಸಿನಕಾಯಿ !
280. ನಮ್ಮೂರಲ್ಲೊಂದ್ ಹುಡ್ಗಿ
ಹುಟ್ ಬರುವಾಗ ಸೀರೆ ಉಟ್ಕಾ ರ್ತದೆ
ದೊಡ್ದಾಗ್ತಾ ಸೀರೆ ಬಿಚ್ತದೆ
Answer : ಬಿದಿರು !
Click on each Riddle to View Answer
281. ಅಪ್ಪ ಅಪ್ಪ ಮರ ನೋಡ
ಮರದ ತುಂಬ ಎಲಿನೋಡ
ಎಲಿ ತುಂಬ ತೂತ ನೋಡ
ತೂತನಾಗಿನ ಮಾತನೋಡ
Answer : ಅಯ್ಯನಾರ ಹಿಟ್ಟ !
282. ಈಟೆ ಮಗನೆ ಚೋಟ ಮಗನೆ
ಗಳೇಕ ಹೋಗೋ ಬೋಳಿ ಮಗನೆ
Answer : ಬಾರಕೋಲ !
283. ಕರಿಯ ಕುದುರೆಯ ಮೇಲೆ
ಒಬ್ಬರು ಹತ್ತುತಾರೆ ಒಬ್ಬರು ಇಳಿಯುತ್ತಾರೆ
Answer : ಕಾವಲಿ, ರೊಟ್ಟಿ !
284. ಹೋಗೋದು ಮುಳುಗೋದು ತರೋದು ಏನು?
Answer : ಬಿಂದಿಗೆ !
285. ಒಕ್ಕಲತನ ಸಾಮಾನದಾಗ ತೂತಿರಬಾರದ
ತೂತಿನಾಗ ಸೇರಬಾರದ
Answer : ಬೆಕ್ಕಟಗಿ !
Click on each Riddle to View Answer
286. ಸೊಂಯ್ಗುಟ್ಟಾ ಗೊಡೆಮೆಲಿಟ್ಟಾ
Answer : ಸಿಂಬ್ಳಾ !
287. ಒಂದು ನೆಲದಲ್ಲಿ ಬೆಳ್ದಾವರೆ ಗಿಡ ಹುಟ್ಟಿ
ಹಸಿರು ಎಂಬತ್ತು ಕುಸುರು ಮೂವತ್ತು
ಹೆಸರು ಕೇಳಿದರೆ ಬಾಯಲ್ಲಿ ಮೊಸರನ್ನ
Answer : ಸಂಬಾರ !
288. ಯಾತಕೆ ಬಂದೆ ಪಾತಕ ಕಂಡೆ
ಆಡೂ ಮಕ್ಕಳನ ಆಳಸಾಕ ಬಂದೆ
Answer : ಚೇಳು !
289. ಮಳೆ ಬೆಳೆಯಿಲ್ಲ ಹಸಿರು ಗರಿಗಳು
ಹಣ್ಣು ತಿನ್ನದೆ ಇದ್ದರೂ ಬಾಯಿಲ್ಲ ಕೆಂಪು
Answer : ಗಿಳಿ !
290. ಹಸರು ಗಿಡದಾಗ ಹನುಮಂತ ಕುತ್ತಾನ
Answer : ಬದನೆಕಾಯಿ !
Click on each Riddle to View Answer
291. ಅಜ್ಜಿ ಹೋಗ್ತಾ ಹೋಗ್ತಾ ಜಲ್ಲು ಕುಣಿಸ್ತಾ ಹೋಗ್ತದೆ
Answer : ನಾಯಿ ಬಾಲ !
292. ಸಪ್ಪಳಿಲ್ಲದನ ಚಪ್ಪಾಳಿ ಹಾಕತೈತಿ
Answer : ಕಣ್ಣಿನ ಎವೆ !
293. ಹೊಡ ಹೊಡ್ದಾಂಗ ಹಾಲ್ಕೊಡುದನಾ
Answer : ಕಳ್ಳಿ !
295. ಸರಗಂಟ ಸರಕ್ಕಂಡು
ಆಚೆಗಿಟ್ಟ ಬುಟ್ಟ
Answer : ಮಾವಿನ ಹಣ್ಣು !
Click on each Riddle to View Answer
296. ಮನೆಕಿಂದು ಮೆನೆ ಮಗ್ಗಣ್ ಬೀಳ್ತದೆ
Answer : ಹುಲ್ಕಟ್ಟು !
296. ಅರ್ಲಿಗೆ ಆರಕಣ್ಣ ಬುರ್ಲಿಗೆ ಮೂರಕಣ್ಣ
ಗೌಡರ ಕೆಂದ ಎತ್ತಿಗೆ ಒಂದಾ ಕಣ್ಣ
Answer : ಕೊಳಲು, ಟೆಂಗು, ಗುಲಗಂಜಿ !
298. ಬಾಯಿಲಿ ತಿಂತತಿ
ಹೊಟ್ಟಿಲಿ ಕಾರಕೋತತಿ
Answer : ಬೀಸುವ ಕಲ್ಲ !
298. ನೋಡಿದ್ರೆ ತರತರ ಬಣ್ಣ
ಉಜ್ಜಿದರೆ ಒಂದೇ ಬಣ್ಣ
Answer : ಸಾಬೂನು !
299. ಕುಬುಸದ ಗಳಿಗೆ ಒಲಿಮ್ಯಾಗ ಮಾಡ್ತಾರ
Answer : ಹೋಳಿಗಿ !
300. ಕರಿಯ ಹುಡುಗನನ್ನು ಮುಟ್ಟಿದರೆ
ಬಿಳೀ ಹುಡುಗಿ ಮನೆ ಬೆಳಗುತ್ತಾಳೆ
Answer : ದೀಪದ ಸ್ವಿಚ್ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ