ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೬ (501 to 600)
Kannada Riddles Questions & Answers List Part-6 (501 to 600)
Click on each Riddle to View Answer
501. ಕೊಂಗಿನಗಲ ಎಲೆ
ಕೊಡತಿ ಗಾತ್ರ ಕಾಯಿ
ಲಿಂಗವತಿ ರಾಜ ಬೆಳೆದ
Answer : ಪಳ್ಳದ ಕಾಯಿ (ಪಡುವಲಕಾಯಿ) !
502. ನಿನ್ನ ನೋಡಿದರೆ ನಂಗೆ ಹೆದರಿಕೆಯಾಗುತ್ತೆ
ನಿಂದರೊಳಗೆ ನಂದ ಬಿಡೋಹಂಗಾಗುತ್ತೆ
Answer : ಬಾವಿ, ಹಗ್ಗ !
503. ಸರಕಾರದ ಒಡ್ಡಿನ್ಯಾಗ ಸರ್ಪ ಬಿದ್ದೈತಿ
Answer : ಕಾಮನ ಬಿಲ್ಲು !
504. ಮೂರ್ಜನಾ ಬಂದೊ ಬಾವಿ ಹರ್ದೊ
ವಬ್ಕಗ್ದಾ ವಬ್ತೇಲ್ದಾ ವಬ್ಮುಳ್ಗ್ದಾ
Answer : ವೀಳ್ಯ !
505. ಜ್ವರಾ ಇಲ್ಲದೆ ನೆಳ್ಳಾವಾ
ಚಳಿ ಇಲ್ಲದೆ ಬೆಂಕಿ ಕಾಸಾವಾ
ಜಗಳ ಇಲ್ಲದೆ ಜುಟ್ಟ ಹಿಡ್ಯಾಂವಾ
ಇವರು ಯಾರು
Answer : ಅಗಸ, ಕಮ್ಮಾರ, ಹಜಾಮ !
Click on each Riddle to View Answer
506. ಅಪ್ಪಗೆ ಮೂರು ಅವ್ವಗೆ ಎರಡು
Answer : ವಿಭೂತಿ ಪಟ್ಟಿ !
507. ಕಲ್ಲನ್ನು ತುಳಿಯುತ್ತೆ
ಕಲ್ಲನ್ನು ಮೇಯುತ್ತೆ
ನೀರು ಕಂಡ್ರೆ ನಿಲ್ಲುತ್ತೆ
Answer : ಚಪ್ಪಲಿ !
508. ನಿದ್ದಿ ಬರದಿದ್ದರೂ ಸದಾ ಮಲಗುವವನಾರು?
Answer : ರೋಗಿ !
509. ಅಂಗೈ ಗಾತ್ರ ಗದ್ದೆ
ಮುಂಗೈ ಗಾತ್ರ ಬದು
ಬೆಳೆಯಬಹುದು
ತಿನ್ನಾಕಾಗೋದಿಲ್ಲ
Answer : ಹರಳು !
510. ಹೊಲಾ ಎಲ್ಲಾ ತಿರಿಗಿ ಮೂಲಿ ಹಿಡಿತತಿ
Answer : ಕಾಲ್ಮರಿ !
Click on each Riddle to View Answer
511. ಅಮ್ಮ ಅಂಬಾರಕೆ
ಅಪ್ಪ ಪಾತಾಳಕೆ
ಅಣ್ಣ ಪೇಟೆಗೆ
ಅಕ್ಕ ಮದುವೆಗೆ
Answer : ಅಡಿಕೆ ಮರ, ಬೇರು, ಅಡಿಕೆ ಹೊಂಬಾಳೆ !
512. ಕಾಡ್ನಿಂದ ಬಂದು
ಕದಿನಿಂದ್ಲಾಗ ಕೂತ್ಕತು
Answer : ಅರ್ಕಡ್ಡಿ (ದೊಣ್ಣೆ) !
513. ಹಸಿರು ಗಿಡದ
ಸುಣ್ಣಾ ಹಿಡದು ಬಸುರಾಕ್ಕಾರ
Answer : ಹತ್ತಿ ಬಿಡಿಸುವುದು !
514. ಕರೀ ಗದ್ದೇಲಿ ಕುರಿ ಹಿಂಡು
Answer : ಹೇನು !
515. ಏರಿಮ್ಯಾಲೆ ಇಬ್ಬರು ಸೂಳೇರು
Answer : ಗಾಡಿ !
Click on each Riddle to View Answer
516. ಹಸರ ಸೀರಿ ಉಟ್ಟಾಳ
ಹಳದಿ ಕುಬಸಾ ತೊಟ್ಟಾಳ್
ಹತ್ರ ಹೊದ್ರ ಪರಕ್ನ ಪರಚ್ತಾಳ್
Answer : ಗೋವಿನ ಜೋಳ !
517. ನೀರಿಗ್ಹೋಗುವ ನೀಲಮ್ಮ
ತೋಳ ಮ್ಯಾಲಿಂದೇನಮ್ಮ
ಅಂಜರ ಗಿಣಿ ಪಿಂಜರ ಗಿಣಿ
ಸಾಕೀನಿ ಹೋಗೋ ಸುಖ ಜಾಣ
Answer : ಹೇನು !
518. ಕಚ್ಚೆ ಕಳದ್ಹಾಕಿ
ಗಿಣ್ಣಿ ಜಬ್ಬಾಕಿ
ಮಿಣ್ಣಿ ಮೂರು ತಿಂಗ್ಳ
ಅಟ್ಲ ಮ್ಯಾಲೆ ವರ್ಸ
Answer : ತುಪ್ಪ !
519. ಗಡ್ಡ ಇದ್ದವ ಸಾಧು ಅಲ್ಲ
ಜುಟ್ಟ ಇದ್ದರ ಹಾರುವ ಅಲ್ಲ
Answer : ಹೋತ ಕುದುರೆ !
520. ಬೆಳಿಗ್ಗೆ ಬೀಳ್ತದೆ ಸಂಜೆಗೆ ಏಳ್ತದೆ
Answer : ದಾಂಬು !
Click on each Riddle to View Answer
521. ಹೋಗುಮುಂದ ಕೊರಿತೈತಿ
ಬರೊಮುಂದ ಕೊರಿಯೂದಿಲ್ಲ
Answer : ಕರಗಸ !
522. ಸೂಳೆರ ಕುಣಿತ
ನಾರಿಯ ಒಲಿತ
ಶೃಂಗಾರ ಇದಕ್ಕಿಂತ ಮಿಗಿತ
Answer : ಹುಬ್ಬು !
523. ಕುಳ್ಳಿ ಕುಣಿಕುಣೀತಾ ಬಸುರಾದ್ಲು
Answer : ಕದಿರು !
ಒಂದ ಮನಿಗಿ ನಾಕ ಕೆಸರಗಂಬ
ನಾಕ ಹಾಲಗಂಬ ಎಡ್ಡ ನೀಟಗಂಬ
Answer : ಆಕಳ ಕಾಲು, ಮೊಲಿ, ಕೋಡ !
525. ಕಾಲ್ಮೇಲೆ ಕಾಲ್ಹಾಕಿಕೊಂಡು
ಕನ್ನಡಿ ಹಿಡಿದುಕೊಂಡು
ಅದರೊಳಕ್ಕೆ ಅದನ್ಹಾಕಿಕೊಂಡು
ಅದೃಷ್ಟ ನೋಡು
Answer : ಶ್ಯಾವಗೆ ಹೋಳು !
Click on each Riddle to View Answer
526. ಕಪ್ಪಿ ಇಲ್ಲದ ಬಾವಿ
ಏಡಿ ಮುಳಗದ ಬಾವಿ
ಆಕಾಶದ ಬಾವಿ ಅರಬಾವಿ
Answer : ಟೆಂಗ !
527. ಜಗ್ ಅಂತೀದ ಜರ್ಗೀಲುಕ್ತೀದ
Answer : ಮೋಗ್ತೆ !
528. ಹದಿನಾರು ತಿದ್ದಿಯವಳು
ಎಂಟು ಕುಬುಸುದವಳು
ಹಿಡಿದರ ಗಸಗ್ಗನ ತಿವಿತಾಳ
Answer : ಕುಸುಬಿ ಗಿಡ !
529. ರಭಸದಿಂದ ಬರುವುದು ಸರ್ಪವಲ್ಲ
ನೂರಾರು ಕಾಲಿನದು ಚೇಳಲ್ಲ
Answer : ರೈಲು !
530. ವೀಣೆಯ ರಾಗವ ಹಾಡುತ ಬರುವೆ
ಕಾಣದ ರೋಗವ ನಾ ತರುವೆ
ಕೊಚ್ಚಿಯ ನೀರೆ ನನ್ನಯ ವಾಸ
ಜನರಿಗೆ ಕೊಡುವೆ ನಾ ಕ್ಲೇಶ ನಾನ್ಯಾರು
Answer : ಸೊಳ್ಳೆ !
Click on each Riddle to View Answer
531. ಒಂದು ಮನೆಯಲ್ಲಿ ಮೂರು ಜನ ಅಕ್ಕ ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ
Answer : ಜಾದಳಕಾಯಿ !
532. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ
Answer : ನಾಲಿಗೆ !
533. ಆರು ಮೂರು ಗೂಟ
ಶ್ಯಾನುಭೋಗರ ತ್ವಾಟ
ಹೋಗಲಪ್ಪಣೆಯುಂಟು
ಬರಲಪ್ಪಣೆಯಿಲ್ಲ
Answer : ಕೂಳಿಗೆ ಬೀಳುವ ಮೀನು !
534. ತಲಿ ಹಿಡೀಲಾಕ ಹೋದರ ಕಡೀತೈತಿ
ಕಾಲ ಹಿಡದರ ಸುಮ್ಮನಾಗತೈತಿ
Answer : ಕುಸುಬೆ ಗಿಡ !
535. ನನ್ನಜ್ಜಿ ಸೀರೆ ನೆರಿ ಹೋಯ್ಯಲೇ ಬತ್ತಿಲ್ಲೆ
Answer : ದಾರಿ !
Click on each Riddle to View Answer
536. ಚಿನ್ನದ ಹಕ್ಕಿ ಬಾಲದಲ್ಲಿ ನೀರು ಕುಡೀತದೆ
Answer : ದೀಪ !
537. ನನ್ನಜ್ಜಾ ಜುಟ್ಟಾ ಹಿಡ್ದಂಕು ಮಾತೇ ಆಡ್ತ್ನಲ್ಲೆ
Answer : ಗಂಟೆ !
538. ಗಿಡ್ಡ ಹುಡುಗಾ ಗುಡ್ಡಾ ನಡುಗಿಸತಾನ
Answer : ಆಟಂ ಬಾಂಬು !
539. ಹಸಿರು ಕೊಡದ ತುಂಬ ಸಿಹಿನೀರು
Answer : ತೆಂಗಿನಕಾಯಿ !
540. ಅತ್ತೇ ಕಾಯಿ ಪ್ಯಾತೆಕಾಯಿ
ನೇತಾಡದೇ ಬೆಳೆಯೋದೆಂಥ ಕಾಯಿ
Answer : ಪುಟ್ಟೆಳ್ಳ ಕಾಯಿ !
Click on each Riddle to View Answer
541. ತಿನ್ನದಲ್ಲ ಉಣ್ಣದಲ್ಲ ಕೈಯಾಗೆ ಸವಿತತಿ
Answer : ಸಾಬೂನು !
542. ಬಿಳೀ ಕುದುರೆಗೆ ಹಸುರು ಬಾಲ
Answer : ಮೂಲಂಗಿ !
543. ಚದುರಂಗ ಬಲವಿಹುದು ಯುದ್ದವಿಹುದು
ಸಾವುನೋವುಗಳಿಲ್ಲ ಸಂತೋಷವಿಹುದು
Answer : ಚದರಂಗದಾಟ !
544. ಮನ್ಯಾಗಿರು ಕರೆಲಕ್ಷ್ಮಿ ಮಲಿ, ಡುಬ್ಬದ ಮ್ಯಾಲ
Answer : ಕೇರುವ ಮರ !
545. ರಥ ಹೋಗ್ತಾ ಇದೆ ಹೂವು ಬೀಳ್ತಾ ಇದೆ
Answer : ಬೀಸುವ ಕಲ್ಲು !
Click on each Riddle to View Answer
546. ಅಟ್ಟಂ ಬಟ್ಟಂ ರ್ಯಾಣದಾಗ ಚಿಟಗುಬ್ಬಿ ತಲೆ ಒಡದ್ಯೆತಿ
Answer : ಹತ್ತಿ ತೊಳೆ !
547. ಹಿಂಡ್ ಎಮ್ಗೆ ಒಂದೇ ಹೊತ್ಲು
ಜೇನು ಹುಟ್ಟು
Answer : ಜೇನುಹುಟ್ಟು, ಹುಳುಗಳು !
548. ಹಿಂಡನಾಗ ಕುಂತುಗೊಂಡು
ಮಿಂಡನ ಕರೀತೈತಿ
Answer : ಕೇದಿಗೆಯ ಹೂವು !
549. ಕಂಬದ ಮ್ಯಾಗ ಲಿಂಬಿ ಕಾಯಿ
Answer : ಲವಂಗ !
550. ಅವ್ವ ತಲೆಗೆದರಿ
ಮಗಳು ನುಣ್ಬಣಗಿ
Answer : ಮೆಣಸಿನಕಾಯಿ !
Click on each Riddle to View Answer
551. ಮುಟ್ಟಿದರೆ ಮುನಿಯಾಗುವೆ ನಾನ್ಯಾರು?
Answer : ನಾಚಿಕೆ ಮುಳ್ಳು !
552. ಕುಂತಾಗ ಬರಬ್ಯಾಡ
ನಿಂತಾಗ ಬರಬ್ಯಾಡ
ಮಲಕೊಂಡಾಗ ಬರಬ್ಯಾಡ
ಈ ಮೂರು ವ್ಯಾಳ್ಯಾ ಬಿಟ್ಟು ಬಾ
Answer : ಹೊರಗೆ ಕುಂತಾಗ, ಗರ್ಭಿಣಿ ನಿಂತಾಗ, ಹಡೆದು ಮಲಗಿದಾಗ !
553. ಆರು ತಿಂಗಳಿಗೆ ಒಡೆದ ಕೊಟ್ರ ಆರತಿ ಕೊಡ್ತೇನಿ
ಮೂರು ತಿಂಗಳಿಗೆ ಒಡೆದು ಕೊಟ್ರ ಮೂಗತಿ ಕೊಡ್ತೇನಿ
ತಿಂಗಳಿಗೆ ಒಡೆದು ಕೊಟ್ರ ತಂಗೀ ಕೊಡ್ತೇನಿ
ಇಂದೇ ಒಡೆದು ಕೊಟ್ರ ಬೆನ್ನು ಹತ್ತಿ ಬರ್ತೀನಿ
Answer : ಟೆಂಗು !
554. ಚಿಕ್ ಚಿಕ್ ಹೋರಿ
ಚಿಕ್ಕಪ್ಪನ ಹೋರಿ
ಸಂಜಿಕ ಬರತೈತಿ ಭಾಪರೆ ಹೋರಿ
Answer : ಕೌದಿ !
555. ಅಂಗೈ ಅಗಲದ ಗದ್ದೆ
ಮುಂಗೈ ಅಗಲದ ತೆವರಿ
ತಿರುಗೋವು ಎರಡೇರು
Answer : ಕಣ್ಣು, ಹುಬ್ಬು ಮತ್ತು ಎರಡು ಪಾಪೆಗಳು !
Click on each Riddle to View Answer
556. ಬಾರೆ ಮೇಲೆ ಚದುರಂಗಿ ಗಿಡ ಹುಟ್ಟಿ
ಎಸಳು ಐವತ್ತು ಕುಡಿ ಮುನ್ನೂರ ಅರವತ್ತೈದು
Answer : ವರ್ಷ, ವಾರ, ದಿನ !
557. ಗಡಿಗ್ಯಾಗ ಆಡ್ತದ
ಗ್ವಾಡ್ಗಿ ಮುದ್ದ ಕೊಡತದ
Answer : ಹುಟ !
558. ಎಲೆಯಿಲ್ಲದೆ ಹೂವಿಲ್ಲದೆ ಕಾಯಿಲ್ಲದೆ
ಬೆಳೆಯುವ ಸಸ್ಯ ಯಾವುದು
Answer : ಕಳ್ಳಿ !
559. ರಾಯರು ಬಂದರು
ಕೋಟು ಪ್ಯಾಂಟು ಬಿಚ್ಚಿದರು
ಬಾವಿಯೊಳಕ್ಕೆ ಬಿದ್ದರು
Answer : ಬಾಳೆಹಣ್ಣು !
560. ಚಿನ್ನದ ಗುಡೀಲಿ ಬೆಳ್ಳಿ ಲಿಂಗ
Answer : ಹಲಸಿನ ಬೀಜ !
Click on each Riddle to View Answer
561. ಮಕ್ಕಳ ಕಟ್ಗೊಂಡ್ ಮರಿಕಟ್ಗೊಂಡ್
ಸೊಪ್ಪಿನ ತೋಟಕ್ಕೆ ಪೋಯಂಡಿ
Answer : ಮೇಕೆ !
562. ಅಟ್ಟದ ಮೇಲೊಂದು ಪುಟ್ಟಗುಂಬಳಕಾಯಿ
ಮುಟ್ಟಿದರೆ ಬಾಯಿ ಬಡುಕೊಳ್ಳುತ್ತೆ
Answer : ಘಂಟೆ !
563. ತಳ್ಳೂರು ಗೌಡುನ ಹೆಂಡ್ತಿ
ತೊಡೇಲಿ ಬಸುರಾಯ್ತಳೆ
Answer : ಅಡಿಕೆ ಹೊಂಬಾಳೆ !
564. ಎದ್ದರೆ ಏಳು
ಏಳದಿದ್ರೆ ನಿನ್ನ ತಿಕ್ಕೆ ಕಡ್ಡಿ
Answer : ರೊಟ್ಟಿ !
565. ಹಂಚಿ ಹುಲ್ಲೊಳಗೆ
ಕೆಂಚಣ್ಣ ಕುಂತವನೆ
Answer : ಹುತ್ತ !
Click on each Riddle to View Answer
566. ಕುಂದಲಗೂಡಿನಲ್ಲಿ ಕೂಸು
ನಂಜನಗೂಡಿನಲ್ಲಿ ನಾಸು
ಅದ ಒಡೀಸ್ದವನಿಗೆ
ಮರ್ಕಾಸು
Answer : ಸಾಸಿವೆ !
567. ಹಗಲು ಹಾಯಾಗಿರುತ್ತೆ ರಾತ್ರಿ ಚುಚ್ಚೋಕೆ ಬರುತ್ತೆ
Answer : ಸೊಳ್ಳೆ !
568. ತಾಯಿ ಮಗಳು ಚೊಚ್ಚಲ ಬಸಿರು
Answer : ಅಗಿ-ಸಸಿ !
569. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ
Answer : ಕಸಪೊರಕೆ !
570. ಕಾಯಿ ಕಾತಾಡ ಹೂವು ನೇತಾಡ
ಒಳಗಿರುವ ನಿಂಗಪ್ಪ ಓಡಾಡ
Answer : ಮೆಣಸಿನಕಾಯಿ !
Click on each Riddle to View Answer
571. ಬರಿಬಿರಿ ಹೋಗ್ತಾನ
ಬಿರಿಗಲ್ಲ ಒಗಿತಾನ
ತ್ವಾಟಿ ಸುಲಿತಾನ
ಬ್ಯಾಟಿ ನುಂಗತಾನ
Answer : ಬಾಳಿಹಣ್ಣ !
572. ಅಟ್ಟ ಆರೆಣದಾಗ
ಅಕ್ಕ ಅಡಕಿಲ ಏರಸ್ಯಾಳ
Answer : ಎಳ್ಳ !
573. ಕರೀ ಟೋಪಿ ಬಿಳೀ ಸಾಬಿ
Answer : ಬೆಂಕಿಕಡ್ಡಿ !
574. ಈಟೀಟ ಪಾರಾ ಕುಂಡ್ಯಾಗ ದಾರಾ
Answer : ಸೂಜಿ !
575. ರಾತ್ರಿ ಬಂತಂದ್ರ ಹಾಡತ ಬರ್ತಾರಾ ಅಯ್ನೋರ
Answer : ಗುಂಗಾಡು !
Click on each Riddle to View Answer
576. ಗಿಡ್ಡ ಗಿಡಕ ಗಿಣಿ ಜೋತಾಡತಾವ
Answer : ಮೆಣಸಿನಕಾಯಿ !
577. ಹತ್ತುತ್ತಾ ಹಾರುತೈತಿ
ಹಾರುತ್ತ ಜಿಗಿಯತೈತಿ
ಬಿಸಿಲಿಗೆ ಒಣಗೂದಿಲ್ಲ
ಮಳೀಗೆ ತೊಯ್ಯೂದಿಲ್ಲ
Answer : ನವಿಲು !
578. ಗೇಣುದ್ದ ಕಾಯಿ
ಮಾರುದ್ದ ಎಲೆ
Answer : ಬಾಳೆಕಾಯಿ, ಬಾಳೆ ಎಲೆ !
579. ಜುಟ್ಟಾ ಹಿಡಿ
ನೆಲಕ್ಕ ಬಡಿ
ಸಿಹಿನೀರ ಕುಡಿ
Answer : ತೆಂಗಿನಕಾಯಿ !
580. ಅತ್ತೀ ಮನಿಗೆ ಅಳಿಯಾ ಹೊಂಟ
ಏನು ಹಿಡಕೊಂಡ ಹೊಂಟ
Answer : ದಾರಿ !
Click on each Riddle to View Answer
581. ಅಂಗಡಿಯಲ್ಲಿ ಮಾರೋದು
ಜಂಬುನೇರಳೆ ಹಣ್ಣು
ಕೊಂಬೋರುಂಟು
ತಿಂಬೋರಿಲ್ಲ
Answer : ಸಾಲಿಗ್ರಾಮ !
582. ಅಣ್ಣ ಹೋದ್ರೆ ತಮ್ಮ ಹೋಯ್ತಾನೆ
Answer : ಬೈಸಿಕಲ್ ಚಕ್ರ !
583. ಜಗತ್ತನೆಲ್ಲಾ ಕೂತಲ್ಲಿ ಕಾಣಬಹುದು
Answer : ನಕಾಶ !
584. ನಿನ್ನ ಊರ ಮುಂದೆ ಹೊನ್ನಳ್ಳಿ ಮರ
ಅದರೊಳಗೊಂದು ಗಿಣಿ
ಆರು ತಿಂಗಳಿಗೆ ಹೇಳಿದೋನಿಗೆ ಹಸಕರ
ಮೂರು ತಿಂಗಳಿಗೆ ಹೇಳಿದೋನಿಗೆ ಮುದ್ರೆ ಉಂಗುರ
ತಕ್ಷಣ ಹೇಳಿದೋನಿಗೆ
ಮಗಳ ಕೊಟ್ಟು ಮದುವೆ ಮಾಡ್ತೀನಿ
Answer : ದೇಹ ಮತ್ತು ಆತ್ಮ !
585. ಮ್ಯಾಲೆ ಕುಂತಾಕಿ
ದಂತದ ಸೀರಿ ಉಟ್ಟಾಕಿ
ನನ್ನ ಕಂಡು ಹಲ್ಲು ಕಿಸ್ತಾಕಿ
Answer : ಡಾಳಿಂಬರ ಹಣ್ಣು !
Click on each Riddle to View Answer
586. ಹಸರ ಎಲಿಮ್ಯಾಗ
ಮಸರ ಛಲ್ಲಿದಾಂಗ
Answer : ಹತ್ತಿ !
587. ಒಂದು ಮರಕ್ಕೆ ಹನ್ನೆರಡು ಕೊಂಬೆ
ಕೊಂಬೆಗೆ ಮುವ್ವತೆಲೆ
ಅದರಲ್ಲಿ ಅರ್ಧ ಕಪ್ಪು ಅರ್ಧ ಬಿಳುಪು
Answer : ವರ್ಷ, ತಿಂಗಳು, ದಿವಸ, ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ !
588. ಇಟೀಟ ಗಿಡಗಿಡಕ್ಕ ಗೋಣೆ ಹುಳ್ಳಾ ಕುಂತಾವು
Answer : ಕಡಲಿಬುಡ್ಡಿ !
589. ಬಂಡಿ ಹೊಕ್ಕತಿ ಬಂಡಾರ ಬೀಳತತಿ
Answer : ಬೀಸೊಕಲ್ಲ !
590. ಹೋಗಲೆ ಪುಟ್ಟ
ಬಾರೆಲೆ ಪುಟ್ಟ
ಪುಟ್ಟನ ಕಾಲಲಿ ಮೆಟ್ಟಿಲ್ಲ
Answer : ನಾಯಿ !
Click on each Riddle to View Answer
591. ನಡಾ ಸಣ್ಣ ನಾಗರ ಬಣ್ಣ
ಹಿಡಿಲಾಕ ಹ್ವಾದರ ಸಿಗಲಾರದಣ್ಣ
ಸಿಕ್ಕರೆ ಕಚ್ಚದೆ ಬಿಡಲಾರದಣ್ಣ
Answer : ಕಡಜೀರಿಗೆ !
592. ಉಣ್ತಾ ತಿಂತಾ ಬಾಗ್ಲಲ್ ಬೀಳ್ತಾ
Answer : ನಾಯಿ !
593. ಆಲದಮರ
ಆಲದಮರದ್ಮೇಲೆ ಕಂಚಿನ ಪುರ
ಕಂಚಿನ ಪುರದ್ಮೇಲೆ ಭತ್ತದ ರಾಶಿ
ಭತ್ತದ ರಾಶಿ ಮೇಲೆ
ಐದು ಜನ ಸೂಳೇರು ನಾಟ್ಯ ಮಾಡ್ತಾರೆ
Answer : ಹಲಗೆ, ತಣಿಗೆ, ಅನ್ನ, ಬೆರಳು !
594. ಅಂಗಳ ತುಂಬ
ಇಂಗಳ ಕೂಟ
Answer : ಚಿಕ್ಕೆಗಳು !
595. ಕರಿಗುಡ್ಡೆ ಮೇಲೆ ಬಿಳಿ ಹಕ್ಕಿ (ಬೆಳಿ ಪಟ್ಟಿ)
Answer : ದೋಸೆ !
Click on each Riddle to View Answer
596. ಹನ್ನೆರಡು ಖೋಲಿ
ಮೂವತ್ತು ತೊಟ್ಟಿಲಾ
ಮಲಗಾವ್ರ ಮಾತ್ರ
ಇಬ್ಬರ ಮಕ್ಕಳು
Answer : ತಿಂಗಳು, ದಿವಸ, ಸೂರ್ಯ, ಚಂದ್ರ !
597. ಬಿಳಿಯ ಮೈ ಕೆಂಪು ಮೂಗು
ಉದ್ದ ಹೊಟ್ಟೆ ಸೊರಗಿ ಸಾಯುತ್ತದೆ
Answer : ಮೇಣಬತ್ತಿ !
598. ಸಾಸಿವೆಗಿಂತಲೂ ಸಣ್ಣ
ತಾಳುವೆ ಮೂರು ಬಣ್ಣ
Answer : ತಲೆ ಕೂದಲು !
599. ಊರೆಲ್ಲಾ ತಿರುಗುತ್ತಾನೆ, ಮನೆಗೆ ಬಂದರೆ ಮೂಲೇಲಿ ಕೂರುತ್ತಾನೆ
Answer : ಎಕ್ಕಡ !
600. ಈಟ ಮಗ ತ್ವಾಟಾನೆಲ್ಲಾ ತಿರಗತಾನ
ಕುರುಚಿಗಿ
Answer : ಕುರೂಪಿ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ