ಕನ್ನಡ ಒಗಟುಗಳು ಕಲಿಯಿರಿ, ಒಗಟು ಬಿಡಿಸಿ, Kannada Riddles with Answer, Kannada Ogatugalu, Kannada Riddles Quiz, Ogatu Bidisi
ಕನ್ನಡ ಒಗಟುಗಳು ಉತ್ತರಗಳೊಂದಿಗೆ ಭಾಗ-೭ (601 to 700)
Kannada Riddles Questions & Answers List Part-7 (601 to 700)
New Kannada Riddle:
Click on each Riddle to View Answer
601. ಇಬ್ಬರು ಹೊತ್ತು ತಂದು
ಐದು ಜನ ಇಳುಕಿದರು
Answer : ಗೊಣ್ಣೆ ತೆಗೆಯುವುದು !
602. ಆತೈತಿ ಬಾತೈತಿ ಜೋತೈತಿ
Answer : ಕದ-ಗಡಿಗಿ-ಜೋಳಿಗಿ !
603. ಬೇಲ್ಯಾಗ ಇರೋದು ಹಚ್ಚಗ ಕಾಣೋದು
ಹಾದೀಲೆ ಹೋಗರ್ನ ಸೆರಗು ಹಿಡಿದು ತರತೈತಿ
Answer : ಉತ್ತರಾಣಿ ಕಡ್ಡಿ !
604. ಸರಕಾರ ಮಕ್ಕಳು ಸಾವಿರ ಜನ
ಹೊಟ್ಟೆ ಉಬ್ಬುತೈತಿ ಅಂಗಿ ಹಿಗ್ಗುತೈತಿ
Answer : ಹಗ್ಗ, ನೀರು, ಕೊಡ !
605. ಅಂಗೀಕಳೆ ಬಾವಿಗ್ಬೀಳು
Answer : ಬಾಳೆ ಗೊನೆ-ಹಣ್ಣು !
Click on each Riddle to View Answer
606. ನೀರಿದ್ರುವ ಬಾವಲ್ಲ
ಜುಟ್ಟಿದ್ರುವ ಪೂಜ್ಯಾರಲ್ಲ
Answer : ತೆಂಗಿನಕಾಯಿ !
607. ಏರಿಮ್ಯಾಲೆ ಏಸಲಿಗೆ ಹುಟ್ಟಿ
ಏಸಲ್ಗೆ ವಂಬತ್ತು, ಕೂಸಲ್ಗೆ ಮೂವತ್ತು
ವೊಂಟು ವೊಡಿದರೆ ವೊಡೀಬೋದು
ವೊಡೀದೆ ವೋದ್ರೆ ನನ್ನಟ್ಟಿ ಕರ ಕಾಯಬೋದು
Answer : ಮದುವೆ ಹೆಣ್ಣಿನ ದಂಡೆ !
608. ಇಂಬೆ ಹಣ್ಣಿನಂತಹ ರಂಬೆಯೊಡನಾಡಿ
ಮೈಯೆಲ್ಲ ನೋಯ್ತು ನೀರ್ ಕೊಡಿ
ಅಂದ ಹೆಂಡ್ತಿಗೆ ಅವಳು
ಕುಶಾನನೊಂದಿಗೆ ಕುಸ್ತಿಮಾಡಿ
ಮೈಯೆಲ್ಲ ನೋಯ್ತೆ
ನೀರ್ ಕೊನ್ನಿ ಅಂದ್ಲು
Answer : ರಾಗಿಕಲ್ಲು, ರಾಗಿ ಬೀಸುವುದು !
609. ಕರಿ ಗುಡ್ಡದ ಕೆಳಗೆ ಬಿಳಿ ದಾರ ಬಿದ್ದದೆ
Answer : ಬೀಸುವ ಕಲ್ಲು-ಹಸಿಟ್ಟು !
610. ನೆಲುವಿಗೆ ನಾಲ್ಕು ಕಾಲು
Answer : ಹೊರಸು !
Click on each Riddle to View Answer
611. ನಾಕ ಕಾಲಿನ ನುಲಿಯಪ್ಪ
ಬೀಗ್ರ ಬಂದ್ರ ಡೊಗ್ಗಪ್ಪ
Answer : ಹೊರಸ !
612. ಅತ್ತ ಬಾ ಇತ್ತ ಬಾ
ಸುತ್ತ ಬಂದ ಕಿತ್ತ ಬಾ
Answer : ಗಾಣ !
613. ಸಾಲುಸೋಲ ಮುರಗೋಳ
ನೀಲಾವರದ ಗಂಡಗೋಳ
ನೀನಕ್ಕರೆ ನಾಬರ್ತೀನಿ
ನೀನಗದೆ ಇದ್ದರೆ ನಾಬರಲ್ಲ
Answer : ಹರಳು ಗಿಡ !
614. ಮುಂಡಿಲ್ಲದ ಹುಲ್ಲೆಕರ ತಣುಕ್ ಅಂತಲ
Answer : ವಿಭೂತಿ !
615. ಜಗಳಿಲ್ಲ ಜೂಟಿಲ್ಲ
ಬಡಿತಾನ ಒದೀತಾನ
ಬ್ಯಾನಿಲ್ಲ ಬ್ಯಾಸರಿಕಿಲ್ಲ
ನೆಳ್ಳತಾನ ತಿಣಕತಾನ
Answer : ಅಗಸ !
Click on each Riddle to View Answer
616. ಉದ್ದಾನ ಹೆಂಗಸಾ ಬದ್ದೆಲ್ಲಾ ಹುಳುಕ
ಅವಳ ಕೊಟ್ಟಾ ಹಾಲಂದ್ರ ಬಾಳ ರುಚಿ
Answer : ಸಿಂದಿ ಗಿಡ !
617. ಅಯ್ಯೊಯ್ಯೋ ಜೋಗಿ
ಮೈಯೆಲ್ಲಾ ಬೂದಿ
ಕಂಕುಳಲ್ಲಿ ಕಾಮಾಕ್ಷಿ
ತಲೆ ಮೇಲೆ ರುದ್ರಾಕ್ಷಿ
Answer : ಹರಳು ಗಿಡ !
618. ಅವ್ವ ಡುಮಕವ್ವ
ಅಪ್ಪ ಕೆರಕಪ್ಪ
ಮಗಳ ಮಾಸುಂದ್ರಿ
Answer : ಹೀರಿಕಾಯಿ !
619. ಒಂದು ಅಜ್ಜಿ ಉಂಡೆ ಮಾಡಿ ರೊಟ್ಟಿ ಮಾಡಿ ಪಾಯಸ ಮಾಡಿ
ಮನೇನೆಲ್ಲ ಸುತ್ತು ಬರ್ತದೆ
Answer : ಸಗಣಿ !
620. ನೆಟ್ಟರೆ ಚಿಗಿಯುವದಿಲ್ಲ ಕಿತ್ತಿದರೆ ಬಾಡುವದಿಲ್ಲ
Answer : ಕೂದಲು !
Click on each Riddle to View Answer
621. ಎರಡು ಬಾಗಿಲಿಗೆ ಒಂದೇ ಕಂಬ
Answer : ಮೂಗು !
622. ಅಂಡೆ ಹೊಟ್ಟೇಲಿ ತೊಂಡೇ ಕಾಯಿ ಕೂತುಗೊಂಡು
ಇದ್ದದ್ದೂ ಹೇಳುತ್ತೆ ಇಲ್ಲದ್ದೂ ಹೇಳುತ್ತೆ
Answer : ನಾಲಗೆ !
623. ಆನಿಮ್ಯಾಲ ಅಂಬಾರಿ
ಕುದುರಿಮ್ಯಾಲ ನವಬತ್ತಾ
ಒಗಟಾ ಒಡದವರಿಗಿ ಸಂಪತ್ತಾ
Answer : ಮಚ್ಚಿ !
624. ಮನೇ ಮೇಲೆ ಮನೆ ಕಟ್ಟಿ
ಗುಡೀ ಮೇಲೆ ಗುಡಿ ಕಟ್ಟಿ
ಕೊನೇ ಮೇಲೆ ಕೂತವನೆ ಕೊನಾರ್ ಸೆಟ್ಟಿ
Answer : ಜೇನು ನೊಣ !
625. ಕಾಲ ತಗೋಳೋದಕಿಂತಾ ಮೊದಲ
ಯಾನ ತಗೋಬೇಕು
Answer : ಮೆಟ್ಟನಾಲಿಗಿ ಹಲ್ಲಿ !
Click on each Riddle to View Answer
626. ವಿಜಯನಗರದ ಬಜೇಗೊನೆ
ಎಟುಕಿಸಿ ನೋಡಿತು ಅವಳೆದೆ ಮ್ಯಾಲೆ
Answer : ಮಾಂಗಲ್ಯ !
627. ತಾಕುತೀಕಿನ ಮನೆ
ತಗರುಗಂಟಿನ ಮನೆ
ಬಾಚಿ ಮುಟ್ಟದ ಮನೆ
ಕಬ್ಬಿಣ ಕಾಣದ ಮನೆ
ಆಚಾರಿ ಕಟ್ಟದ ಅರಮನೆ
Answer : ಗೀಜಗನ ಹಕ್ಕಿಯ ಗೂಡು !
628. ಉಡದಾರ ಕೆಳಗ
ಉದ್ದಾಂದು ಜೋತಾಡತೈತಿ
Answer : ಕೀಲಿ ಕೈ !
629. ಸುಟ್ಟ ಮೀನ ಸಂತಿಗೆ ಹೋಯ್ತು
Answer : ಕಡಲೇ ಕಾಯಿ !
630. ವಂದ್ಮರಕ್ಕೆ ಕೋಲೇ ಕೋಲು
Answer : ನುಗ್ಗೆ !
Click on each Riddle to View Answer
631. ವಂದ್ವಟ್ಟಂಗೆ ನೂರಾರ್ಜುಟ್ಟಾ
Answer : ಕೋಳಿ !
632. ಮಾತನಾಡುವುದು ಯಾವಾಗ
ಎದುರಿಗೆ ಕುಳಿತಾಗ
ಅಳೋದು ಕರೆಯೋದು ಯಾವಾಗ
ಅರ್ಧಂಬರ್ಧ ಒಳಗೆ ಹೋದಾಗ
ನಗೋದು ನೆಗೆಯೋದು ಯಾವಾಗ
ಪೂರ್ತಿ ಒಳಗ ಹೋದಾಗ
ನಾನ್ಯಾರು ಹಾಗಾದರ?
Answer : ಬಳೆ ಇಡಿಸಿಕೊಳ್ಳುವುದು !
633. ಉದ್ದಾನಕಿ ಉದರಗಣ್ಣಾಕಿ
ಮಕ್ಕಳನ ಹಡದು ಮಂದೀಗೆ ಕೊಡುತಾಳ
Answer : ತೆಂಗಿನ ಗಿಡ !
634. ಮಣ್ಣು ಅಗೆದರೆ ಕಲ್ಲು ಸಿಕ್ಕುತ್ತೆ
ಕಲ್ಲು ಒಡೆದರೆ ಬೆಳ್ಳಿ ಸಿಕ್ಕುತ್ತೆ
ಬೆಳ್ಳಿ ಬೆದಕಿದರೆ ನೀರು ಸಿಕುತ್ತೆ
Answer : ತೆಂಗಿನಕಾಯಿ !
635. ಅರಿವ್ಯಾಗ ಅರಿವಿ ಯಾವ ಅರಿವಿ
Answer : ಸಿಲ್ಕ ಅರಿವಿ !
Click on each Riddle to View Answer
636. ಹಸುರು ಅಮಲ್ದಾರ, ಗಿಣಿಮೂತಿ ಸುಭೇದಾರ, ಯುಗಾದಿ ಬಂದರೆ ತಗಾದೆ ಮಾಡ್ತಾನೆ
Answer : ಮಾವಿನ ಹಣ್ಣು !
637. ಗೂಡಿನ್ಯಾಗಿನ ಪಕ್ಷಿ ನಾಡೆಲ್ಲಾ ನೋಡತೈತಿ
Answer : ಕಣ್ಣು !
638. ಎಡೆದರೆ ಸಿಪ್ಪೆಯಿಲ್ಲ ಕಚ್ಚಿದರೆ ಬಿತ್ತವಿಲ್ಲ
Answer : ಬೆಣ್ಣೆ !
639. ಒಲೆ ಮುಂದಿರುವ ಹುಲಿರಾಯ
ಬಿಲದ ಬಾಲವನ್ನು ಹೊಲೆ ಮಾಡುವವನು
ಅವನು ಯಾರು
Answer : ಬೆಕ್ಕು !
640. ಭೂಮಿಲಿ ಒಂದು ಭೂ ಚಕ್ರದ ಗಿಡ ಹುಟ್ಟಿ
ಕಂಕುಳಲ್ಲಿ ಕಟಕಟೆ ನೆತ್ತೀಲಿ ರುದ್ರಾಕ್ಷಿ
Answer : ಹರಳು ಗಿಡ !
Click on each Riddle to View Answer
641. ಕಲ್ಲಲ್ಲಿ ಹುಟ್ಟಿತು ಕಣಕಣ ಅಂದಿತು
ಮೇಲೆ ಬಂದು ಚೊಲ್ಲೆಬ್ಬಿಸಿತು
Answer : ಬಿದಿರು !
642. ಹೋಗುಮುಂದ ಒಂಟಿ ಬರೂಮುಂದ ಜಂಟಿ
Answer : ತೆಂಗಿನಕಾಯಿ !
643. ಮಳೆಯಿಲ್ಲ ಬೆಳೆಯಿಲ್ಲ ಮೈಯೆಲ್ಲಾ ಹಸಿರು
ಎಲೆಯಿಲ್ಲ ಸುಣ್ಣವಿಲ್ಲ ಬಾಯೆಲ್ಲಾ ಕೆಂಪು
Answer : ಗಿಳಿ !
644. ಕತ್ತಿಗದು ಹರಿದಿಹುದು, ಮತ್ತೆ ಬರುತೇಳುವದು; ಕಿತ್ತು ಬಿಸಾಡಲಿದು ನೆಡದು; ಕವಿ ಜನರು ಅರ್ತಿಯಿಂ ಪೇಳಿ ಸರ್ವಜ್ಞ ||
Answer : ತಲೆಗೂದಲು !
645. ಒಳಗೆ ಸಿಪ್ಪೆ
ಮೇಲೆ ಖಂಡ
Answer : ಕೋಳಿಗುಂಡಕಾಯಿ !
Click on each Riddle to View Answer
646. ಬೆನ್ನ ಮೇಲೆ ಮಲಗಿರುತ್ತೆ
ಬಹುಧಾನ್ಯ ತಿನ್ನುತ್ತೆ
ಚೀರುತ್ತೋ ಬಲು ಚೀರುತ್ತೆ
Answer : ಬೀಸುವ ಕಲ್ಲು !
647. ಅವ್ವ ನೆರತು ಹಿತ್ತಲಿಗೆ ಹೋಗ್ತಾಳ
ಮಗಳು ನೆರತು ಮನಿ ಸೇರ್ತಾಳ
Answer : ಭತ್ತ, ಜೋಳ !
648. ಅಕ್ಕನ ಮನಿಗಿ ದೀಪ ಹಚ್ಚಿದರ ತಂಗಿ ಮನಿಗೂ ಬೆಳಕ
Answer : ಚಂದ್ರ !
649. ಹದಿನಾರೆತ್ತಿನ ಹಣಿಪಟ್ಟಿ
ಮನಿಮಾಡೊ ಹೆಳತಿ
ಸಿಂಗಾರದೊಳಗಿನ ಭಂಗಾರ
Answer : ಹಲಪುಡಿ, ಕಸಬರಗಿ, ಗುಳದಾಳಿ !
650. ತುಂಬ್ರಿ ಗಿಡದಾಗ ಘುಂಬ್ರಿ ಆಡ್ತದ
Answer : ಗಡಿಗಿ !
Click on each Riddle to View Answer
651. ಅಯ್ಯ ಜೋಗಿ
ನಿನ್ನ ಮೈಯೆಲ್ಲ ಬೂದಿ
ಕೈಯಲ್ಲಿ ಪಾತ್ರೆ
ಕಂಕಳಲ್ಲಿ ರುದ್ರಾಕ್ಷಿ
Answer : ಅಳ್ಳೆಕಾಯಿ !
652. ಗುಡುಗುಡುಗುಮ್ಮ
ಗುದ್ದಲಿ ತಮ್ಮ
ಏಕೋರಾಮ
ನಾಕುಕಾಲು
ಗುಡ್ಡದ ಹಿಂದೆ
ಗುಂಡ್ಕಲ್ಲು ಬಿದ್ದಿದೆ
Answer : ಹೆಗ್ಗಣ (ಮೊದಲ ನಾಲ್ಕು ಸಾಲು); ತಲೆಗಂಟು (ಕೊನೆಯ ಎರಡು ಸಾಲು) !
653. ಈಟ ಕುಳ್ಯಾಗ ಕಿಟ್ಟಪ್ಪ ಕುತ್ತಾನು
ಬಂದವರಿಗೆಲ್ಲಾ ಪ್ರಸಾದ ಕೊಡುತಾನ
Answer : ಚೇಳು !
654. ಮೂಗೂರ ಮುದುಕಿಗೆ
ಗುದ್ದು ಗುದ್ದಿದ ತಾವೆಲ್ಲ ಗೂದೆ ಕಡ್ಕತ್ತು
Answer : ಈರುಳ್ಳಿ !
655. ಅಡಿ ಅಡಿ ಆಲದ್ಮರ
ಯಡ್ಗೆ ತುಂಬ ಕಾಯಿ ಬುಡ್ತು
ಪಣ್ಣೀರು ಪಂಚಪತ್ರ
ಅಗುದ್ರೆ ಅಡ್ಕೆ ಉಗುದ್ರೆ ಸಿಪ್ಪೆ
Answer : ಕಡ್ಲೇ ಕಾಳು !
Click on each Riddle to View Answer
656. ಮಳಕಾಲೂಚ ಪಾರ ಮನಿತುಂಬ ಓಡ್ಯಾಡ್ತದ
Answer : ಬಾರಿಗಿ (ಕಸಬರಿಗಿ) !
657. ಈ ದೇಶದಿಂದ ಆ ದೇಶಕ್ಕೆ ಹೋದಾಗ ಬಾ
ಒಣಮರ ಮಾತಾಡಿದಾಗ ಬಾ
ಮುತ್ತಿನ ಬಟ್ಟು ಕೆಟ್ಟಾಗ ಬಾ
Answer : ಸೂರ್ಯ, ಕದ, ದೀಪ !
658. ಹಿತ್ಲಾಲ್ ಕೆಂಪಣ್ಣಾ
ಗುಡ್ಡಮೇಲೆ ಹುಲಿಯಣ್ಣ
ಹೊಳೆಲ್ ಮೀಯ್ಸಣ್ಣ
Answer : ಅರ್ಶ್ಣಾ, ಹುಲಿ, ಮೀನು !
659. ಸಪ್ಪಳ ಆಗುತ್ತಿತ್ತು ಹಕ್ಕಿ ಹಾರುತ್ತಿತ್ತು
ನನ್ನ ನೋಡುತ್ತಿತ್ತು ನಿನ್ನ ಮಾಡುತ್ತಿತ್ತು
Answer : ಬಂದೂಕು !
660. ಕೆಂಪು ನೋಡಿ ಎಂಟು ಹಣ ಕೊಟ್ಟೆ
ಕೆಳಗಿಳದು ನೋಡಿ ಕೆಟ್ಟೆ
Answer : ಅಂಚು ಕಟ್ಟ ಸೀರೆ !
Click on each Riddle to View Answer
661. ವಂದ್ಮರಕ್ಕೆ ಮಣೆಯೇ ಮಣೆ
Answer : ಬಾಳೆ ಗೊನೆ-ಹಣ್ಣು !
662. ಅಡ್ಡ ಕೊಯ್ದರೆ ಚಕ್ರವಲ್ಲ , ಉದ್ದ ಕೊಯ್ದರೆ ಶಂಖವಲ್ಲ, ಮೂಸಿದರೆ ವಾಸನೆ ಬಿಡಿಸಿದರೆ ಹತ್ತಿಪ್ಪತ್ತು
Answer : ಈರುಳ್ಳಿ !
663. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು
Answer : ಸೀತ ಫಲ !
664. ಗಟ್ದ್ ಮೆನ್ನ ಜಿಂವ್ತಿಗೆ ಉಂದೇಕಣ್ಣ
Answer : ಚೂಂಜೆ !
665. ಕಲ್ಲಲ್ಲಿ ಹುಟ್ಟುವುದು
ಕಲ್ಲಲ್ಲಿ ಬೆಳೆಯುವುದು
ನೆತ್ತಿಯಲ್ಲಿ ಕುಟಗುಟ್ಟುವುದು
Answer : ರಾಗಿಕಲ್ಲು !
Click on each Riddle to View Answer
666. ನರ್ರೂಪಾಯಿನ ತೋಟ
ನರ್ರೂಪಾಯಿನ ಬೇಲಿ
ಅದುರೊಳೀಕೆ ಎಳ್ಳುಗಾತ್ರಮಣ್ ಬಿದ್ರೆ
ತೋಟವೇ ಹಾಳು
Answer : ಕಣ್ಣು !
667. ಸೆಡಕು ಕಲ್ಲ ಪಡಕು
ನೀರವ ಮೀನಿಲ್ಲ
Answer : ಟೆಂಗು !
668. ನನ್ನಜ್ಜಿ ರ್ಯಕ್ಕೊಂದ್ಬಾರಿ ಮಂಡೆ ಬಾಚ್ಕತ್ತು
Answer : ಹುಲ್ಮನೆ !
669. ಒಮ್ಮಣ ಗೋದ್ಯಾಗ ಒಂದ ಹರಳೈತಿ
Answer : ಚಂದ್ರ !
670. ಮಕ್ಕಳನ್ನು ಕಟ್ಕೊಂಡು ಅಪ್ಪನ ಮನೆಗೆ ಹಬ್ಬಕ್ಕೆ ಹೋದಳು
Answer : ಬೆಳ್ಳುಳ್ಳಿ !
Click on each Riddle to View Answer
671. ವಂದಿಗೆ ವುಟ್ಟೋದು
ವಡುಟ್ನೇ ತಿನ್ನೇದು
Answer : ಬಾಗಿಲು !
672. ಈಟೈತಿ ಆಟೈತಿ
ಬಾಳೇ ಮಾಡಕ ಗಟ್ಟೈತಿ
Answer : ಕುರ್ಚಿಗಿ !
673. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು
Answer : ಬದನೆಕಾಯಿ !
674. ನಿಟ್ಟೂರು ಏರಿ ಮೇಲೆ
ಒಂದು ಅಟಂಗಿಮರ ಹುಟ್ಟಿದೆ
ಅತ್ತ ಕಿತ್ತರು ಬರಲ್ಲ
ಇತ್ತ ಕಿತ್ತರು ಬರಲ್ಲ
Answer : ಹಚ್ಚೆ !
675. ರಾಡ್ಯಾಗ ಹುಟ್ಟತೈತಿ
ಚಿರ ಚಿರ ಅಂತೈತಿ
ಪಕ್ಕ ಬೀಸತೈತಿ
ಪಗಡೀ ಆಡತೈತಿ
ಕಚ್ಚಿದವರ ಬಾಯಾಗ ಉಚ್ಚಿಹೊಯ್ತ್ಹೆಂತಿ
Answer : ಕಬ್ಬು !
Click on each Riddle to View Answer
676. ನಾಲಿಗೆ ಇದೆ ಮಾತಾಡಲಾರೆ
ಬರೆಯ ಬಲ್ಲೆ ಓದಲಾರೆ
ಹಾಗಾದರೆ ನಾನು ಯಾರು
Answer : ಪೆನ್ನು !
677. ಟಪ್ಪ ಗುಡಗುಡಿ
Answer : ಅತ್ತಿಕಾಯಿ !
678. ನೀರಿಗೆ ಹೋಗೊಲ್ಲ ನೀರು ಮುಟ್ಟೊಲ್ಲ
ಆದರೂ ನೀರು ರ್ತೀನಿ ನಾನಾರು
Answer : ತೆಂಗಿನಕಾಯಿ !
679. ಚಿಕ್ಕ ಚಿಕ್ಕ ಪೆಟ್ಟಿಗೆ ಚಿನ್ನಾರಿ ಪೆಟ್ಟಿಗೆ
ತಡಕೋನಾರ್ದೆ ಒಡಕೊಂತು
Answer : ಹೊಂಬಾಳೆ !
680. ಅಡಡೀಲಿ ಉಂಟು
ಜಂಬುನೇರಳೆ ಹಣ್ಣು
ಕೊಳ್ಳುವವರುಂಟು
ತಿನ್ನುವವರಿಲ್ಲ
Answer : ಸಾಲಿಗ್ರಾಮ !
Click on each Riddle to View Answer
681. ಲೋಕಾನೆಲ್ಲ ದಿನಕ್ಕೊಂದು ಬಾರಿ ಕೊಂದು
ಮತ್ತೆ ಜೀವ ಕೊಡುತ್ತೆ
Answer : ನಿದ್ರೆ !
682. ಆನ್ಕಣ್ ಮಳ್ದಾವೂದು
ಜೇನ್ಕಲ್ ಕ್ವಳ ತುಂಬಿ
ನಾಕ್ಜನ ಸೂಳೇರು ನಲಿತಾ ಬಂದ್ರು ಅಂದ್ರೆ
Answer : ಹಸುವಿನ ಕೆಚ್ಚಲು !
683. ಕಂಬದಮೇಲೆ ಗುಂಬದಮೇಲೆ
ಕುರಿ ಮೇಯುತ್ತೆ
Answer : ಹೇನು !
684. ಹೆಡೆಯುಂಟು ಸರ್ಪವಲ್ಲ
ನುಡಿಯುಂಟು ಗಿಳಿಯಲ್ಲ
Answer : ವೀಣೆ !
685. ಅಲ್ಲೂ ಇಲ್ಲ ಇಲ್ಲೂ÷್ಯ ಇಲ್ಲ
ಬಾಜಾರದಾಗಿಲ್ಲ
ಮುಡು ಕೊಟ್ರೂ ಸಿಗೊದಿಲ್ಲ
Answer : ಆಣೆಕಲ್ಲು !
Click on each Riddle to View Answer
686. ಕಲ್ಲು ಕಣಕಣ
ಕಬ್ಬಿಣ ಮೇಟಿ
ಚಂದರ ರಾಶಿ
Answer : ಒಳ್ಳು, ಹಾರಿಕೋಲು, ಕಾರಪುಡಿ !
687. ನಾ ಹುಟ್ಟುವೆ ಚಳಿಯಲ್ಲಿ
ಸಾಯುವೆ ಬಿಸಿಲಲ್ಲಿ
ಕಲ್ಲಾಗಿ ಕೂರಲೂ ಬಲ್ಲೆ
ನೀರಾಗಿ ಹರಿಯುಲೂ ಬಲ್ಲೆ
ಹಾಗಾದರೆ ನಾನು ಯಾರು ?
Answer : ಮಂಜುಗಡ್ಡೆ !
688. ಅಂತಪ್ಪನ ಮಗಳು ಎಂಥೆಂಥಾ ಚೆಲುವಿ
Answer : ಬೆಂಡೋಲಿ !
689. ಮೂರು ದಾರಿಗೆ ಮೂರು ಕಣ್ಣು
ನೀರು ಸೋರುವ ಒಂದೇ ಕಣ್ಣು
ನಾರು ಸುತ್ತಿದ ಕುರುಡ ಕಣ್ಣು
ಊರ ದೇವರಿಗಿ ಹೇಳಿದ ಕಣ್ಣು
Answer : ಟೆಂಗಿನಕಾಯಿ !
690. ಟಗಿ ಅಂದ್ರೆ ಬರಲ್ಲ
ಬಾ ಅಂದ್ರೆ ಬರುತ್ತೆ
Answer : ತುಟಿ !
Click on each Riddle to View Answer
691. ಹಸಿರು ಎಂಬತ್ತು ಕುಸುರಿ ಮೂವತ್ತು
ಹೆಸರು ಹೇಳಿದವರಿಗೆ ಮೊಸರನ್ನ
Answer : ಬಿದಿರು !
692. ಅರ್ಕಾಲ್ ತಲೆ ಕಳ್ಗೆ
ಅದ್ರ ಉತ್ರಾ ಯಾರಿಗೂ ಸಿಕ್ಕಾ
Answer : ಶಿಕ್ಕಾ !
693. ಕಲ್ಲಬಾವಿ ಕಡಿಗಲ್ಲ ಮುಚ್ಚಳ
ನೀರುಂಟು ಮೀನಿಲ್ಲ
Answer : ತೆಂಗಿನಕಾಯಿ !
694. ಮಡಿಸಿದರೆ ಮೊಗ್ಗು
ಬಿಚ್ಚಿದರೆ ಹೂವು
ಪರಿಮಳವಿಲ್ಲ ವಾಸ್ನೆ ಇಲ್ಲ
Answer : ರಾಗಿಹಿಟ್ಟು !
695. ನಾ ಬಿದ್ರ ಬೀಳತಾನ ಎದ್ರ ಏಳತಾನ
ಕತ್ತಲದಾಗ ನನ್ನೊಳಗ ಸೇರತಾನ
Answer : ನೆರಳು !
Click on each Riddle to View Answer
696. ಸರಸರಾ ಅಂತತಿ ಸರ್ಪಲ್ಲ
ಗಡಗಡ ಅಂತತಿ ಗಾಡಿ ಅಲ್ಲ
Answer : ಹಗ್ಗ, ರಾಟಿ !
697. ಊರೆಲ್ಲಾ ತಿರುಗತೈತಿ ರಾತ್ರಿ ಮನಿಗೆ ಬರತೈತಿ
ಪದಹಾಡಿ ಊಟಕ್ಕಿಂತ ಕಾಟಾ ಕೊಡತೈತಿ
Answer : ಸೊಳ್ಳೆ !
698. ಸಣ್ಣಕ್ಕಿ ಒಳಗೆ ಸಣ್ಣ ಹನುಮಂತರಾಯ
Answer : ಕಲ್ಲು !
699. ಎರಡು ಒಣಮರ
ನಾಲ್ಕು ಹಸೀ ಮರ
ಎರಡು ಲೊಟಾಪಟಿ
ಎರಡು ಮಿಣಮಿಣಿ
ಒಂದು ಬೀಸಣಿಗೆ
Answer : ದನ, ಅದರ ಕೊಂಬು, ಕಾಲು, ಕಿವಿ, ಕಣ್ಣು ಮತ್ತು ಬಾಲ !
700. ಯಾರ್ ಯಿಳಿಗದ್ ಬಾವೀಯೂ ನಮ್ಮನೆ ಅಮ್ಮಾ ಯೇಳಿತು
Answer : ಕೊಡಾ !
Click on each Riddle to View Answer
ಕನ್ನಡ ಒಗಟುಗಳ(ಳು) ಭಂಡಾರ