3. ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ- ಕನ್ನಡ ಗಾದೆ ಅರ್ಥ – ತಾತ್ಪರ್ಯ (kottiddu tanage bacchittiddu pararige) Kannada Proverb Meaning

ಕನ್ನಡ ಗಾದೆ – ಅರ್ಥ- ವಿವರಣೆ – ವಿಸ್ತರಣೆ – ತಾತ್ಪರ್ಯ (Gade – Kannada Proverb – Artha – Vivarane – Vistharane – Tatparya – Meaning – Explanation in Kannada)

3. ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ( kottiddu tanage bacchittiddu pararige )

ಕೊಟ್ಟಿದ್ದು ತನಗೆ; ಬಚ್ಚಿಟ್ಟಿದ್ದು ಪರರಿಗೆ. ಪ್ರಪಂಚದಲ್ಲಿ ಪ್ರತಿಯೊಬ್ಬನು ಹಣವನ್ನಾಗಲಿ, ವಸ್ತು ಆಸ್ತಿಯನ್ನಾಗಲಿ ಗಳಿಸಲು ಇಷ್ಟಪಡುತ್ತಾನೆ. ಅದನ್ನು ಉಳಿಸಲು ಪ್ರಯತ್ನಿಸುತ್ತಾನೆ. ಆದರೆ ಅದನ್ನು ಬಳಸುವಾಗ ಸ್ವಾರ್ಥಿಯಾಗಿ ಎಲ್ಲವನ್ನು ತನ್ನ ಸುಖಕ್ಕೆ ಬಳಸಲು ಇಚ್ಛಿಸುತ್ತಾನೆ. ಇದು ಮಾನವನ ಸ್ವಭಾವ. ಆದರೆ ಮನುಷ್ಯರು ಹಾಗೆ ಬದುಕಬಾರದು. ದಾನದ ಗುಣವಿಲ್ಲದವನು ಜಿಪುಣನೆನಿಸುತ್ತಾನೆ, ಸ್ವಾರ್ಥಿಯಾಗುತ್ತಾನೆ. ಎಲ್ಲವೂ ತನಗೆ ಬೇಕು ಎನ್ನುತ್ತಾನೆ. ದುರಾಸೆ ಹೆಚ್ಚುತ್ತದೆ. ಲೋಭಿಯಾಗಿ ಸ್ವಾರ್ಥಿಯಾಗಿ ಜಿಪುಣನಾಗಿ ಬಾಳುವ ಬದಲು ತನ್ನ ಪಾಲಿಗೆ ಬಂದದ್ದನ್ನು ಪರಮಾನ್ನವೆಂದು ತಿಳಿದು ಅದರಲ್ಲಿ ಸಾಧ್ಯವಾದಷ್ಟನ್ನು, ದಾನ ಧರ್ಮ ಮಾಡಿ, ಇತರರ ಕಷ್ಟಗಳಿಗೆ ನೆರವಾದರೆ ದೇವರಿಗೆ ಪ್ರೀತಿಯಾಗುತ್ತದೆ. ಇತರರಿಗೆ ಕಷ್ಟ ಪರಿಹಾರವಾಗುತ್ತದೆ. ಈ ರೀತಿ ಪರೋಪಕಾರಿ ಮಾಡಿದರೆ ಅದರ ಪ್ರತಿ ಫಲ ಇದ್ದೇ ಇರುತ್ತದೆ. ಇಲ್ಲಿ ದಾನದ ಶ್ರೇಷ್ಠತೆಯನ್ನು ಹೇಳಿದೆ.

ಇದು “ಕೊಟ್ಟಿದ್ದು ತನಗೆ; ಬಚ್ಚಿಟ್ಟಿದ್ದು ಪರರಿಗೆ” ಎಂಬ ಗಾದೆಯ ಅರ್ಥ.

Leave a Comment